ಅರ್ಜಿ ವಿಲೇವಾರಿಗೆ ನಿರ್ಲಕ್ಷ್ಯ ಬೇಡ
ಒಂದು ತಿಂಗಳಲ್ಲಿ ಅರ್ಜಿ ವಿಲೇವಾರಿ ಮಾಡಿ: ತಾಲೂಕು ಪಂಚಾಯ್ತಿ ಇಒ ರಾಮಕೃಷ್ಣ ಸೂಚನೆ
Team Udayavani, Jun 21, 2019, 2:21 PM IST
ಚನ್ನಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಇಒ ರಾಮಕೃಷ್ಣ ಮಾತನಾಡಿದರು.
ಚನ್ನಪಟ್ಟಣ: ಸಿಎಂ ಜನತಾದರ್ಶನದಲ್ಲಿ ಬಂದಿರುವ ಅರ್ಜಿಗಳನ್ನು 1 ತಿಂಗಳಲ್ಲಿ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದ್ದು, ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಕಾಲಮಿತಿಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದು ತಾಪಂ ಇಒ ರಾಮಕೃಷ್ಣ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿ ಸಿಎಂ ರಾಮನಗರದಲ್ಲಿ ಜನಸಂಪರ್ಕ ಸಭೆ ಮಾಡಿದ್ದ ವೇಳೆ ತಾಲೂಕಿನಿಂದ ಕೇವಲ 300 ಅರ್ಜಿಗಳು ಹೋಗಿದ್ದವು. ಆದರೆ, ಈ ಎರಡು ದಿನಗಳಲ್ಲಿ ಸಿಎಂಗೆ ತಾಲೂಕಿನಿಂದ 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಪಂಚಾಯ್ತಿಗೆ ಸಂಬಂಧಿಸಿದ ದೂರುಗಳು ಎರಡನೇ ಸ್ಥಾನದಲ್ಲಿವೆ, ಪಂಚಾಯ್ತಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವುದಾದರೆ ಮಾಡಿ, ಇಲ್ಲವಾದರೆ ತಾಲೂಕಿನಿಂದ ವರ್ಗ ಮಾಡಿಸಿಕೊಂಡು ಹೋಗಿ ಎಂದು ಕಿಡಿಕಾರಿದರು.
ಪಿಡಿಒಗಳ ಕರ್ತವ್ಯ ಲೋಪ: ಹಲವು ಪಿಡಿಒಗಳು ತಮ್ಮ ಕರ್ತವ್ಯ ಲೋಪದಿಂದ ವರ್ಷಗಟ್ಟಲೇ ಸಾರ್ವಜನಿಕರ ಕೆಲಸ ಮಾಡಿಕೊಡದೆ ಅಲೆಸಿದ್ದಾರೆ. ಇದೀಗ ಸಿಎಂ ಮುಂದೆ ಎಲ್ಲಾ ದಾಖಲೆ ಇಒ ಬಳಿ ಇದೆ ಎಂದು ಸಬೂಬು ಹೇಳಿದ್ದಾರೆ. ನನ್ನ ಬಳಿ ಯಾರು ಏನು ಕೊಟ್ಟಿದ್ದೀರಿ? ಇಲ್ಲಿ ಹೇಳಿ ನೋಡೋಣ ಎಂದು ಕಿಡಿಕಾರಿದರು.
ಕರ್ತವ್ಯ ನಿರ್ವಹಿಸಿಲ್ಲ: ತಾಪಂ ಅಧ್ಯಕ್ಷ ರಾಜಣ್ಣ ಮಾತನಾಡಿ, ಗ್ರಾಪಂಗಳಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎನ್ನುವುದು ಸತ್ಯವಾದ ಮಾತು. ಇದನ್ನು ಸಿಎಂ ಎಚ್‌ಡಿಕೆ ಅವರು ಗಮನಿಸಿದ್ದು, ಇದರ ಜೊತೆಗೆ ಅವರು ಜನತಾ ದರ್ಶನ ಮಾಡಿದ ವೇಳೆ ಗ್ರಾಮದಲ್ಲಿನ ಚರಂಡಿಗಳ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ಕರೆದು ತೋರಿಸಿದ್ದಾರೆ. ಸಿಎಂ ತಾಲೂಕಿನ ಗ್ರಾಮಗಳಿಗೆ ಅದರಲ್ಲೂ ಗ್ರಾಪಂ ವ್ಯಾಪ್ತಿಗೆ ಜನತಾದರ್ಶನ ಮಾಡಲು ಬರುತ್ತಿದ್ದಾರೆ ಎಂದು ತಿಳಿದಿದ್ದರೂ, ನಿಮ್ಮ ಕರ್ತವ್ಯ ನಿರ್ವಹಿಸಿಲ್ಲ ಎಂದರೆ ಉಳಿದ ದಿನಗಳಲ್ಲಿ ನೀವು ಯಾವ ರೀತಿ ನೀವು ಕೆಲಸ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ರಸ್ತೆ ಬದಿ ಕೋಳಿ ತ್ಯಾಜ್ಯ: ತಾಲೂಕಿನ ಕೂಡ್ಲೂರು ಗ್ರಾಮದ ರಸ್ತೆ ಬದಿ ಅಲ್ಲಲ್ಲಿ ಕೋಳಿ ತ್ಯಾಜ್ಯವನ್ನು ಹಾಕಲಾಗುತ್ತಿದೆ. ಜೊತೆಗೆ ನಗರಸಭೆ ಸಿಬ್ಬಂದಿ ಕಸವನ್ನು ಮೂಟೆಗಳಲ್ಲಿ ರಸ್ತೆಯ ಬದಿಯಲ್ಲಿ ಎಸೆದು ಹೋಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಗಬ್ಬುನಾರುತ್ತಿದೆ ಎಂದು ಮಳೂರುಪಟ್ಟಣ ತಾಪಂ ಸದಸ್ಯ ಸಿದ್ದರಾಮು ಆರೋಪ ಮಾಡಿದರು.
ಇದಕ್ಕೆ ತಾಪಂ ಅಧ್ಯಕ್ಷ ರಾಜಣ್ಣ, ತಾಲೂಕಿನ ರಾಮಮ್ಮನ ಕೆರೆ ಏರಿಯ ಮೇಲೆ ಸಾರ್ವಜನಿಕರು ವಾಯು ವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಆ ರೀತಿಯಲ್ಲಿ ಪಟ್ಟಣದ ಕೋಳಿ ಅಂಗಡಿಗಳ ತ್ಯಾಜ್ಯ ಬಂದು ಬೀಳುತ್ತಿದೆ. ಸಿಎಂ ಆ ಮಾರ್ಗದಲ್ಲಿ ಹೋಗುತ್ತಾರೆ ಎಂದು ನಗರಸಭೆಯವರು ಜೆಸಿಬಿಯಿಂದ ಮಣ್ಣನ್ನು ಉಲಾrಪಲ್ಟ ಮಾಡಿದ್ದರು. ಒಂದು ವೇಳೆ ಎಂದಿನಂತೆ ಇದ್ದಿದ್ದರೆ ಸಿಎಂ ಕೇಳುತ್ತಿದ್ದರು. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಒ ರಾಮಕೃಷ್ಣ, ಈ ಬಗ್ಗೆ ನಗರಸಭೆ ಆಯುಕ್ತರೊಂದಿಗೆ ಮಾತನಾಡುತ್ತೇನೆ ಎಂದರು. ತಾಪಂ ಉಪಾಧ್ಯಕ್ಷೆ ಸಾಕಮಾದಮ್ಮ, ಗ್ರಾಪಂ ಅಧ್ಯಕ್ಷರು, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.