ಮುಂಬಡ್ತಿ ನೀಡದಿದ್ದರೆ ತರಬೇತಿ ಬಹಿಷ್ಕಾರ
Team Udayavani, Jun 21, 2019, 2:43 PM IST
ಮಧುಗಿರಿ: ರಾಜ್ಯದಲ್ಲಿ 82 ಸಾವಿರ ಪದವಿ ಪಡೆದ ಶಿಕ್ಷಕರಿಗೆ ಹಿಂಬಡ್ತಿ ನೀಡಿ ರುವುದನ್ನು ಹಿಂಪಡೆಯಬೇಕು. ಇಲ್ಲ ವಾದರೆ ಎನ್.ಸಿ.ಇ.ಆರ್.ಟಿ. 7ನೇ ತರಗತಿ ಗಣಿತ ವಿಷಯದ ತರಬೇತಿ ಬಹಿಷ್ಕರಿಸಲಿದ್ದೇವೆ ಎಂದು ಡಯಟ್ ಪ್ರಾಂಶುಪಾಲ ವೈ.ಎನ್.ರಾಮ ಕೃಷ್ಣಯ್ಯಗೆ ಶಿಕ್ಷಕರು ಮನವಿ ಸಲ್ಲಿಸಿದರು.
ಪಟ್ಟಣದ ಕೋಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ತರಬೇತಿ ಬಹಿಷ್ಕರಿಸಿ ಮನವಿ ನೀಡಿದರು. ಮನವಿಯಲ್ಲಿ ತಿಳಿಸಿರುವಂತೆ ರಾಜ್ಯದ 82 ಸಾವಿರ ಶಿಕ್ಷಕರನ್ನು 1ರಿಂದ 7ನೇ ತರಗತಿಗೆ ಬೋಧನೆಗಾಗಿ ನೇಮಕ ವಾಗಿದ್ದು, 2014ರವರೆಗೂ 1ರಿಂದ 8ನೇ ತರಗತಿಯವರೆಗೂ ಬೋಧನೆ ಮಾಡುತ್ತ ಬರುತ್ತಿದ್ದೇವೆ. ಆದರೆ ನಮ್ಮ ಶಿಕ್ಷಣಕ್ಕೆ ಅನುಗುಣವಾದ ಸ್ಥಾನ ನೀಡಿಲ್ಲ. ಪದವಿ ಪಡೆದ ಶಿಕ್ಷಕರಾಗಿದ್ದು, ಇಂದಿಗೂ 1ರಿಂದ 5 ರವರೆಗೆ ಶಿಕ್ಷಣ ನೀಡುವ ಶಿಕ್ಷಕರೆಂದು ಪರಿಗಣಿಸಿರು ವುದು ಸರಿಯಲ್ಲ. ಅನ್ಯಾಯ ಸರ್ಕಾರ ಸರಿಪಡಿಸಬೇಕು. ನ್ಯಾಯ ಕೊಡಿಸ ದಿದ್ದರೆ 5ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ಬೋಧನೆ ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಡಯಟ್ ಪ್ರಾಂಶುಪಾಲ ವೈ.ಎನ್.ರಾಮಕೃಷ್ಣಯ್ಯ ಶಿಕ್ಷಕರ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಏಕಾಏಕಿ ತರಬೇತಿ ಬಹಿಷ್ಕರಿಸುವುದು ಸರಿಯಲ್ಲ ಎಂದು ಮನವೊಲಿಸಿದರು. ರಾಜ್ಯ ಪದವೀಧರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ. ವೆಂಕಟೇಶಯ್ಯ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಾಧಿಕ್‌ವುಲ್ಲಾ ಷರೀಫ್, ಖಜಾಂಚಿ ರಂಗಪ್ಪ, ತಾಲೂಕು ಕಾರ್ಯದರ್ಶಿ ಶ್ರೀಧರ್, ಜಿಲ್ಲಾ ಕಾರ್ಯದರ್ಶಿ ರಾಮೇಗೌಡ, ಶಿಕ್ಷಕರಾದ ನಾಗೇಶಯ್ಯ, ರೇಚಯ್ಯ, ಡಯಟ್ ಉಪನ್ಯಾಸಕರಾದ ಅನ್ನ ಪೂರ್ಣಮ್ಮ, ಕೃಷ್ಣಪ್ಪ, ಕೃಷ್ಣಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.