ಉಪನಗರಗಳ ನಡುವೆ ವೋಲ್ವೊ ಓಡಾಟ
ನಷ್ಟದಲ್ಲಿ ಕೆಎಸ್‌ಆರ್‌ಟಿಸಿ ನಗರ ವೋಲ್ವೊ ಸೇವೆ | ಯಶಸ್ವಿಯಾದರೆ ಬಿಎಂಟಿಸಿಗೆ ಬಳಕೆ
Team Udayavani, Jun 21, 2019, 3:03 PM IST
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆಯ ವೋಲ್ವೊ ಬಸ್‌ಗಳು ಮಾತ್ರವಲ್ಲ; ಮೈಸೂರು ಮಹಾನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುವ ವೋಲ್ವೊ ಬಸ್‌ಗಳು ಕೂಡ ನಷ್ಟಕ್ಕೆ ಕಾರಣವಾಗುತ್ತಿವೆ. ಹಾಗಾಗಿ, ಆ ಬಸ್‌ಗಳನ್ನೂ ಉಪನಗರಗಳ ನಡುವೆ ಕಾರ್ಯಾಚರಣೆಗಿಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಚಿಂತನೆ ನಡೆಸಿದೆ.
ಮೈಸೂರು ಮಹಾನಗರದಲ್ಲಿ 30ರಿಂದ 35 ವೋಲ್ವೊ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಅವುಗಳಿಂದ ಪ್ರತಿ ವರ್ಷ ಸರಾಸರಿ 8ರಿಂದ 10 ಕೋಟಿ ರೂ. ನಷ್ಟ ಆಗುತ್ತಿದೆ. ಆದ್ದರಿಂದ ಆ ಬಸ್‌ಗಳನ್ನು ಕೊಡಗು, ಕುಶಾಲನಗರ ಸೇರಿದಂತೆ ಸುತ್ತಲಿನ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದೆ. ಇದರ ಸಾಧಕ-ಬಾಧಕಗಳನ್ನು ನೋಡಿಕೊಂಡು ಬಿಎಂಟಿಸಿ ವೋಲ್ವೊ ಬಸ್‌ಗಳನ್ನು ಕೈಗೆತ್ತಿಕೊಳ್ಳಲು ಚಿಂತನೆ ನಡೆದಿದೆ.
ಈಗಾಗಲೇ ಕೆಎಸ್‌ಆರ್‌ಟಿಸಿ ಆರ್ಥಿಕ ನಷ್ಟದಲ್ಲಿದೆ. ಜತೆಗೆ ತನ್ನ ಬಳಿ ಇರುವ ಮೈಸೂರು ಮಹಾನಗರದಲ್ಲಿ ಕಾರ್ಯಾಚರಣೆ ಮಾಡುವ ವೋಲ್ವೊ ಬಸ್‌ಗಳು ಕೂಡ ಹೊರೆಯಾಗಿವೆ. ಹೀಗಿರುವಾಗ, ಬಿಎಂಟಿಸಿಯ ವೋಲ್ವೊ ಬಸ್‌ಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿಗಮ ಹಿಂದೇಟು ಹಾಕುತ್ತಿದೆ. ಆದ್ದರಿಂದ ಮೊದಲು ತನ್ನಲ್ಲಿರುವ ನಗರ ವೋಲ್ವೊ ಬಸ್‌ಗಳ ಮೇಲೆ ಈ ‘ಉಪನಗರಗಳಿಗೆ ವೋಲ್ವೊ ಸಂಚಾರ’ ಪ್ರಯೋಗ ನಡೆಸಿ, ನಂತರ ಬಿಎಂಟಿಸಿ ಬಸ್‌ಗಳತ್ತ ಚಿತ್ತ ಹರಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಮೈಸೂರು ಮಹಾನಗರದಲ್ಲಿ ಸೇವೆ ಸಲ್ಲಿಸುತ್ತಿರುವ ವೋಲ್ವೊ ಬಸ್‌ಗಳ ಪ್ರತಿ ಕಿ.ಮೀ. ಕಾರ್ಯಾಚರಣೆ ವೆಚ್ಚ 52 ರೂ. ಆದರೆ, ಪ್ರತಿ ಕಿ.ಮೀ.ಗೆ ಬರುತ್ತಿರುವ ಆದಾಯ ಕೇವಲ 35 ರೂ. ಅಂದರೆ 20 ರೂ. ನಷ್ಟ ಆಗುತ್ತಿದೆ. ವಾರ್ಷಿಕ ಸರಾಸರಿ 8-10 ಕೋಟಿ ರೂ. ನಷ್ಟ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವೋಲ್ವೊ ಬಸ್‌ಗಳನ್ನು ಸುತ್ತಲಿನ 50 ಕಿ.ಮೀ. ಒಳಗಿರುವ ಉಪ ನಗರಗಳ ನಡುವಿನ ಸಾರಿಗೆ ಸೇವೆಗಾಗಿ ರಸ್ತೆಗಿಳಿಸುವ ಚಿಂತನೆ ನಡೆದಿದೆ. ಅಲ್ಲದೆ, ಐಟಿ ಕಂಪೆನಿಗಳು ಕೂಡ ಇರುವುದರಿಂದ ಬಾಡಿಗೆ ರೂಪದಲ್ಲಿ ಒದಗಿಸುವ ಉದ್ದೇಶವೂ ಇದೆ. ಈ ಸಂಬಂಧ ಎರಡು-ಮೂರು ಕಂಪೆನಿಗಳನ್ನೂ ಸಂಪರ್ಕಿಸಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾಹಿತಿ ನೀಡಿದರು.
ಮೊದಲು ನಮ್ಮಲ್ಲಿನ ನಗರ ಸಾರಿಗೆಯ ವೋಲ್ವೊ ಬಸ್‌ಗಳ ಮೇಲೆ ಈ ಪ್ರಯೋಗ ನಡೆಯಲಿದೆ. ಅದರ ಪರಿಣಾಮವನ್ನು ಅವಲೋಕಿಸಿ, ನಂತರ ಬಿಎಂಟಿಸಿ ವೋಲ್ವೊ ಬಸ್‌ಗಳನ್ನು ಕೂಡ ಇದೇ ಮಾದರಿಯಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಆದರೆ, ಈ ಸಂಬಂಧ ತಜ್ಞರ ಸಮಿತಿ ರಚನೆ ಆಗಲಿದೆ. ಅದು ನೀಡುವ ವರದಿಯನ್ನು ಆಧರಿಸಿ ಇದೆಲ್ಲವೂ ತೀರ್ಮಾನ ಆಗಲಿದೆ ಎಂದೂ ಕಳಸದ್ ಅವರು ಅವರು ಸ್ಪಷ್ಟಪಡಿಸಿದರು.
ಈ ವೋಲ್ವೊ ಬಸ್‌ಗಳಲ್ಲಿ ಆಸನಗಳು ಕಡಿಮೆ ಇರುತ್ತವೆ. ಪುಷ್‌ಬ್ಯಾಕ್ ಇರುವುದಿಲ್ಲ ಎನ್ನುವುದು ಸೇರಿದಂತೆ ನಗರ ಸಂಚಾರಕ್ಕೆ ಪೂರಕವಾಗಿರುತ್ತವೆ. ಆದರೆ, 50 ಕಿ.ಮೀ. ಗಟ್ಟಲೆ ಸಂಚರಿಸುವ ಪ್ರಯಾಣಿಕರು ಕುಳಿತು ಪ್ರಯಾಣಿಸಬೇಕಾಗುತ್ತದೆ. ಹಾಗಾದರೆ, ವಿನ್ಯಾಸ ಬದಲಿಸಬೇಕಾ? ಅದಕ್ಕೆ ತಗಲುವ ವೆಚ್ಚ ಎಷ್ಟು? ದರ ಎಷ್ಟು ನಿಗದಿ ಮಾಡಬೇಕು? ಹಾಗೊಂದು ವೇಳೆ ಯಶಸ್ವಿಯಾದರೆ, ಬಿಎಂಟಿಸಿ ವೋಲ್ವೊ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಪಡೆದು ರಸ್ತೆಗಿಳಿಸಬೇಕಾ ಅಥವಾ ಇದರ ಹೊಣೆಯನ್ನು ಬಿಎಂಟಿಸಿಗೇ ವಹಿಸಬೇಕಾ ಎನ್ನುವುದು ಸೇರಿದಂತೆ ಎಲ್ಲ ತಾಂತ್ರಿಕ ಅಂಶಗಳನ್ನು ಈ ಸಮಿತಿಯಲ್ಲಿ ನಿರ್ಧರಿಸಲಾಗುವುದು ಎಂದೂ ಶಿವಯೋಗಿ ಕಳಸದ ತಿಳಿಸಿದರು.
ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಈ ವೋಲ್ವೊ ಸೇವೆ ವಿಸ್ತರಿಸುವ ಚಿಂತನೆಯೂ ಇದೆ. ಬಳ್ಳಾರಿ, ಬೆಳಗಾವಿ ಸುತ್ತಮುತ್ತ ಉದ್ಯಮಗಳಿವೆ. ಕಲಬುರಗಿ, ಬೀದರ್ ಸೇರಿದಂತೆ ಹೈದರಾಬಾದ್ ಕರ್ನಾಟಕದಲ್ಲಿ ಬಿಸಿಲಿನ ಧಗೆ ತುಂಬಾ ಇರುತ್ತದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಬಿಆರ್‌ಟಿಎಸ್ ಇದೆ. ಇಲ್ಲೆಲ್ಲಾ ಸೇವೆ ವಿಸ್ತರಣೆಗೆ ಅವಕಾಶ ಇದೆ ಎಂದು ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.