ಬೈಂದೂರು ತಾ|: ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧ
ನೆರೆ ಸಾಧ್ಯತೆ ಪ್ರದೇಶಗಳಲ್ಲಿ ಅಲರ್ಟ್, ತತ್‌ಕ್ಷಣ ನೆರವು ನೀಡಿ ಸ್ಪಂದಿಸಲು ಪ್ರತ್ಯೇಕ ವ್ಯವಸ್ಥೆ
Team Udayavani, Jun 22, 2019, 5:41 AM IST
ಕಳೆದ ವರ್ಷ ಮಳೆಗೆ ಮನೆಗಳನ್ನು ಆವರಿಸಿದ ನೆರೆನೀರು. (ಸಂಗ್ರಹ ಚಿತ್ರ)
ಬೈಂದೂರು: ನೂತನ ತಾಲೂಕು ಕೇಂದ್ರವಾದ ಬೈಂದೂರು ವ್ಯಾಪ್ತಿಯಲ್ಲಿ ಮುಂಗಾರಿನ ಪ್ರಾಕೃತಿಕ ವಿಕೋಪ ಎದುರಿಸಲು ಇಲಾಖೆ ಸರ್ವ ಸನ್ನದ್ಧವಾಗಿದೆ. ಈಗಾಗಲೇ ವಿವಿಧ ಹಂತದ ಸಭೆಗಳನ್ನು ಕರೆದು ಪ್ರತ್ಯೇಕ ತಂಡ ರಚಿಸಿ ತತ್‌ಕ್ಷಣ ಸ್ಪಂದಿಸಲು ವಹಿಸಬೇಕಾದ ಮುಂಜಾಗ್ರತೆ ಬಗ್ಗೆ ತಿಳಿಸಲಾಗಿದೆ. ಕಳೆದ ವರ್ಷ ನೆರೆಹಾವಳಿ ಮತ್ತು ಕಡಲ್ಕೊರೆತ ಬೈಂದೂರು ತಾಲೂಕಿನಲ್ಲಿ ಅಪಾರ ನಷ್ಟ ಉಂಟುಮಾಡಿತ್ತು. ಕರಾವಳಿ ಮತ್ತು ಮಲೆನಾಡು ಎರಡು ಭಾಗಗಳು ಈ ತಾಲೂಕು ವ್ಯಾಪ್ತಿಗೆ ಒಳಪಡುವುದರಿಂದ ಸೂಕ್ತ ಮುಂಜಾಗ್ರತೆ ಹಾಗೂ ತಯಾರಿ ನಡೆಸಬೇಕಾದ ಅನಿವಾರ್ಯತೆ ಬಹಳಷ್ಟಿದೆ.
ಕಂದಾಯ ಇಲಾಖೆ ಆಯಾಯ ಗ್ರಾಮ ಮಟ್ಟದಲ್ಲಿ ಪ್ರತ್ಯೇಕ ತಂಡ ರಚಿಸಿ ಈಜುಗಾರರು, ಪೋಲಿಸ್ ಇಲಾಖೆ, ಗಂಜಿ ಕೇಂದ್ರ, ಆ್ಯಂಬುಲೆನ್ಸ್, ದೋಣಿ ಸೌಲಭ್ಯ ಮುಂತಾದವುಗಳ ಬಗ್ಗೆ ಸಮಗ್ರ ಮಾಹಿತಿ ಸಿದ್ಧಪಡಿಸಿದೆ. ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ನೆರವನ್ನು ಪಡೆಯುವ ಮೂಲಕ ಮಳೆಗಾಲ ಎದುರಿಸಲು ಬೈಂದೂರು ತಾಲೂಕಿನ ತಹಶೀಲ್ದಾರರ ತಂಡ ಸಂಪೂರ್ಣ ಸಿದ್ಧªವಾಗಿದೆ.
ಕಡಲ್ಕೊರೆತ ಸಂಭವಿಸಬಹುದಾದ ಸ್ಥಳಗಳು
ಕರ್ಕಿಕಳಿ ಉಪ್ಪುಂದ, ಕಿರಿಮಂಜೇಶ್ವರದ ಹೊಸಹಿತ್ಲು, ಕೊಡೇರಿ, ಮರವಂತೆ, ಪಡುವರಿ, ದೊಂಬೆ, ತಾರಾಪತಿ, ಅಮ್ಮನವರತೊಪು, ಶಿರೂರು ಕರಾವಳಿ, ಕಳಿಹಿತ್ಲು.
ನೆರೆಪೀಡಿತ ಪ್ರದೇಶಗಳು
ಮರವಂತೆ, ಕಂಡುಹಿತ್ಲು, ಹೊಳೆಬಾಗಿಲು, ಮಧ್ಯಸ್ಥರ ಬೆಟ್ಟು, ಕಳಿಹಿತ್ಲು, ನಂದಿಕಂಠ, ಕೋಣಿR, ಕೊಡ್ಗಿತ್ಲು, ಕೆಂಬೈಲು, ಚುಂಗಿಗುಡ್ಡೆ, ಪಡುಕೋಣೆ, ಚಿಕ್ಕೊಳ್ಳಿ, ಹಡವು, ಹೆಬ್ಟಾರ್ ಸಾಲು, ವಕ್ಕೇರಿ,ಬಡಾಕೆರೆ, ಸಾಲುºಡ, ಕಂಡಿಕೇರಿ, ಹೊಳೆಕೆರೆ, ನಾವುಂದ, ಕಳಿಹಿತ್ಲು, ಬಿಜೂರು.
ತುರ್ತು ಸ್ಪಂದನೆ
ಮಳೆಗಾಲ ಕುರಿತಂತೆ ಈಗಾಗಲೇ ವಿವಿಧ ಹಂತದಲ್ಲಿ ಸಭೆ ನಡೆಸಿ ಗ್ರಾಮ ಮಟ್ಟದ ಅಧಿಕಾರಿಗಳನ್ನು ಸೇರಿಸಿ ವಿಶೇಷ ತಂಡ ರಚಿಸಲಾಗಿದೆ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲೂ ಕೂಡ ಇವರನ್ನು ಸಂಪರ್ಕಿಸಬಹುದಾಗಿದೆ. ತುರ್ತು ಸಂದರ್ಭಗಳಲ್ಲಿ ಆಯಾಯ ಇಲಾಖೆಯ ಅಧಿಕಾರಿಗಳು ಸ್ಪಂದಿಸಲಿದ್ದಾರೆ.ದಿನದ 24 ಗಂಟೆಯೂ ಕರೆ ಸ್ವೀಕರಿಸಲಾಗುವುದು. ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಗಾಲ ಕುರಿತಂತೆ ಸಂಪೂರ್ಣ ತಯಾರಿ ನಡೆಸಲಾಗಿದೆ.
– ಬಸಪ್ಪ ಪಿ.ಪೂಜಾರ್, ತಹಶೀಲ್ದಾರರು, ಬೈಂದೂರು
ಪುನರ್ ವಸತಿ ಮತ್ತು ಗಂಜಿ ಕೇಂದ್ರಗಳು
ಸ.ಹಿ.ಪ್ರಾ. ಶಾಲೆ ಬಡಾಕೆರೆ, ಮಹಾಗಣಪತಿ ಕಲ್ಯಾಣ ಮಂಟಪ ನಾವುಂದ, ಮಹಾವಿಷ್ಣು ದೇವಸ್ಥಾನ ಹಡವು, ಸೀತಾರಾಮಚಂದ್ರ ಕಲ್ಯಾಣ ಮಂಟಪ ನಾಡ, ಸ.ಹಿ.ಪ್ರಾ. ಶಾಲೆ ಉಪ್ಪುಂದ, ಸ.ಹಿ.ಪ್ರಾ. ಶಾಲೆ ಕಿರಿಮಂಜೇಶ್ವರ, ಸ.ಹಿ.ಪ್ರಾ.ಶಾಲೆ ಮರವಂತೆ, ಸ.ಹಿ.ಪ್ರಾ. ಶಾಲೆ ಮೂಡು ಮರವಂತೆ, ಸ.ಹಿ.ಪ್ರಾ. ಶಾಲೆ ಹಡವಿನಕೋಣೆ ಶಿರೂರು, ಸರಕಾರಿ ಹಿ.ಪ್ರಾ.ಶಾಲೆ ಬಿಜೂರು.
-ಅರುಣ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.