ಎಎನ್‌ಎಫ್ ಗೆ ಬೆಲ್ಜಿಯಂ ಶೆಫ‌ರ್ಡ್‌ ಶ್ವಾನಗಳು

ಬೆಂಗಳೂರಿನಲ್ಲಿ ವಿಶೇಷ ತರಬೇತಿ

Team Udayavani, Jun 22, 2019, 5:28 AM IST

DOG

ಸಾಂದರ್ಭಿಕ ಚಿತ್ರ.

ಉಡುಪಿ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಶ್ವಾನಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಸೇನಾಪಡೆಗಳ ಮೆಚ್ಚಿನ ಶ್ವಾನ “ಬೆಲ್ಜಿಯಂ ಶೆಫ‌ರ್ಡ್‌ ಮಿಲೆನಿಯೋಸ್‌’ ತಳಿಯ ಶ್ವಾನಗಳು ಬೆಂಗಳೂರಿನಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದು, ಎಎನ್‌ಎಫ್ಗೆ ಶೀಘ್ರದಲ್ಲೇ ಸೇರ್ಪಡೆಯಾಗಲಿವೆ.

ಕಾಡಿನಲ್ಲಿ ನಕ್ಸಲರ ಕುರುಹು, ಶಸ್ತ್ರಾಸ್ತ್ರ, ನೆಲ ಬಾಂಬ್‌, ಅಪಾಯಕಾರಿ ವಸ್ತುಗಳನ್ನು ಪತ್ತೆ ಮಾಡಿ ಎಎನ್‌ಎಫ್(ನಕ್ಸಲ್‌ ನಿಗ್ರಹದಳ) ಪಡೆಗೆ ನೆರವಾಗಲು ಸಿಆರ್‌ಪಿಎಫ್( ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ) ನಿಂದ ವಿಶೇಷ ತರಬೇತಿ ಪಡೆದು ಬರಲಿವೆ. ದಟ್ಟ ಅರಣ್ಯ, ಗುಡ್ಡಗಾಡಿನಲ್ಲಿ ಕೂಂಬಿಂಗ್‌ ನಡೆಸುವಾಗ, ನಕ್ಸಲ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಎಎನ್‌ಎಫ್ಗೆ ನೆರವಾಗಲು 4 ಬೆಲ್ಜಿಯಂ ಶೆಫ‌ರ್ಡ್‌ನ್ನು ಎಎನ್‌ಎಫ್ಗೆ ಸರಕಾರ ನೀಡಿದೆ.

ಸಮಗ್ರ ತರಬೇತಿ
ಒಂದು ತಿಂಗಳಿನಿಂದ 4 ಶ್ವಾನಗಳಿಗೆ ಬೆಂಗಳೂರಿನ ಸಿಆರ್‌ಪಿಎಫ್ ಘಟಕದಲ್ಲಿ ತರಬೇತಿ ನೀಡಲಾಗುತ್ತಿದೆ. 3ರಿಂದ 4 ತಿಂಗಳು ತರಬೇತಿ ನಡೆಯಲಿದೆ. ತರಬೇತಿ ಪೂರ್ಣಗೊಂಡ ಬಳಿಕ ಈ ಶ್ವಾನಗಳು ಎಎನ್‌ಎಫ್ ಪಡೆಯ ಭಾಗವಾಗಿ ಕರ್ತವ್ಯ ನಿರ್ವಹಿಸಲಿವೆ. ಅಲ್ಲದೇ ಇಲ್ಲಿನ 8 ಮಂದಿ ಸಿಬಂದಿ ಹ್ಯಾಂಡ್ಲರ್‌ಗಳಾಗಿ ನೇಮಕಗೊಂಡಿದ್ದು, ಅವರಿಗೂ ತರಬೇತಿ ನಡೆಯುತ್ತಿದೆ. ಅರಣ್ಯದಲ್ಲಿ ಕಾರ್ಯನಿರ್ವಹಿಸುವ ಬಗೆ, ಶಸ್ತ್ರಾಸ್ತ್ರ, ಶಂಕಿತರ ಕುರುಹು ಪತ್ತೆ ಹಚ್ಚುವ ಬಗೆ, ಸಾಹಸ ಪ್ರವೃತ್ತಿಗಳನ್ನು ಶ್ವಾನಗಳಿಗೆ ಕಲಿಸಿಕೊಡಲಾಗುತ್ತದೆ.

ಬೆಲ್ಜಿಯಂ ಶೆಫ‌ರ್ಡ್‌
ಬೆಲ್ಜಿಯಂ ಶೆಫ‌ರ್ಡ್‌ ಮಿಲೆನಿಯೋಸ್‌ ತಳಿಯ ಶ್ವಾನ ಅತ್ಯಂತ ಸೂಕ್ಷ್ಮಗ್ರಾಹಿ, ವಾಸನೆಗಳನ್ನು ಗ್ರಹಿಸುವಲ್ಲಿ ಎತ್ತಿದ ಕೈ. ತಾಳ್ಮೆ, ವೇಗ, ಬುದ್ಧಿಮತ್ತೆಯಲ್ಲಿ ಸೈ ಎನಿಸಿಕೊಂಡಿವೆ. ಸೈನ್ಯ, ಅರೆಸೇನಾ ಪಡೆಗಳಲ್ಲಿ ಈ ತಳಿಯ ಶ್ವಾನವನ್ನು ಬಳಕೆ ಮಾಡಲಾಗುತ್ತಿದೆ. ಬೆಲ್ಜಿಯಂ ಶೆಫ‌ರ್ಡ್‌ ಶ್ವಾನಗಳನ್ನು ಹೊಂದಿದ್ದ ಅಮೆರಿಕದ ವಿಶೇಷ ಕಮಾಂಡೊ ಪಡೆ ಉಗ್ರ ಲಾಡೆನ್‌ ಕಾರ್ಯಚರಣ್ತೆ. ಭಾರತೀಯ ಸೈನ್ಯ, ಇಂಡೋ-ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌, ಸಿಆರ್‌ಪಿಎಫ್ಗಳಲ್ಲಿ ಶ್ವಾನಗಳು ಈಗಾಗಲೆ ಕರ್ತವ್ಯ ನಿರ್ವಹಿಸುತ್ತಿವೆ. ಯಶಸ್ವಿಯಾಗಿ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿರುವ ಈ ಶ್ವಾನಗಳು ಎಂತಹ ಪರಿಸ್ಥಿತಿ, ಪ್ರತಿಕೂಲ ಹವಾಮಾನದಲ್ಲಿಯೂ ಅತ್ಯಂತ ಚುರುಕುತನದಿಂದ ಕಾರ್ಯನಿಭಾಯಿಸುತ್ತವೆ.

ಕಾರ್ಕಳದಲ್ಲಿ ವ್ಯವಸ್ಥೆ
ಕಾರ್ಕಳ ರಾಮಸಮುದ್ರದಲ್ಲಿ ಎಎನ್‌ಎಫ್ ಕೇಂದ್ರ ಘಟಕವಿದ್ದು, ಇಲ್ಲಿಯೇ ಶ್ವಾನಗಳನ್ನು ಇರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 22 ಲಕ್ಷ ರೂ.ವೆಚ್ಚದಲ್ಲಿ ಶ್ವಾನಗೃಹ ನಿರ್ಮಾಣವಾಗುತ್ತಿದೆ. 1,200 ಚದರ ಅಡಿ ವಿಸೀರ್ಣದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, 2-3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅಷ್ಟರಲ್ಲಿ ಶ್ವಾನಗಳಿಗೂ ತರಬೇತಿ ಮುಗಿದಿರುತ್ತದೆ ಎಂದು ಎಎನ್‌ಎಫ್ ಅಧಿಕಾರಿಗಳು ಹೇಳಿದ್ದಾರೆ.

ಎಎನ್‌ಎಫ್ ಸುರಕ್ಷೆಗೆ ಅಗತ್ಯ
ಬೆಲ್ಜಿಯಂ ಶೆಫ‌ರ್ಡ್‌ ಮಿಲೆನಿಯೋಸ್‌ ತಳಿಯ 4 ಶ್ವಾನಗಳಿಗೆ ಬೆಂಗಳೂರಿನ ಸಿಆರ್‌ಪಿಎಫ್ ಘಟಕದಲ್ಲಿ ತರಬೇತಿ ನಡೆಯುತ್ತಿದ್ದು, ಶೀಘ್ರದಲ್ಲೇ ಎಎನ್‌ಎಫ್ಗೆ  ಸೇರಲಿದೆ. ಸ್ಫೋಟಕ ಮತ್ತು ಕುರುಹುಗಳನ್ನು ಪತ್ತೆ ಮಾಡಲು, ಎಎನ್‌ಎಫ್ ಪಡೆಯ ಸುರಕ್ಷತೆಗಾಗಿ ಶ್ವಾನದಳ ಸಹಕಾರಿಯಾಗಲಿದೆ.
– ಬೆಳ್ಳಿಯಪ್ಪ
ಡಿವೈಎಸ್‌ಪಿ, ನಕ್ಸಲ್‌ ನಿಗ್ರಹ ದಳ ಕಾರ್ಕಳ

ಟಾಪ್ ನ್ಯೂಸ್

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

Ranji Trophy: Karnataka to face Uttar Pradesh

Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್‌ ಒತ್ತಡ

Rain-12

Coastal Rain: ಕರಾವಳಿಯಲ್ಲಿ ಗುರಿ ಮೀರಿದ ಹಿಂಗಾರು

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

1st phase of Jharkhand assembly election today

Election: ಝಾರ್ಖಂಡ್‌ ವಿಧಾನಸಭೆಗೆ ಇಂದು 1ನೇ ಹಂತದ ಚುನಾವಣೆ

If you want an American visa, you have to wait 16 months now!

US Visa: ಅಮೆರಿಕ ವೀಸಾ ಬೇಕಿದ್ದರೆ 16 ತಿಂಗಳು ಕಾಯುವುದು ಈಗ ಅನಿವಾರ್ಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

11(1

Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ

Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ

Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ

7(1

Udupi: ನಗರದಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌

Udupi–Kanchi

Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

Ranji Trophy: Karnataka to face Uttar Pradesh

Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್‌ ಒತ್ತಡ

Rain-12

Coastal Rain: ಕರಾವಳಿಯಲ್ಲಿ ಗುರಿ ಮೀರಿದ ಹಿಂಗಾರು

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.