ಶ್ರೀಕೃಷ್ಣಮಠದ ರಾಜಾಂಗಣ: ಯೋಗ ದಿನಾಚರಣೆ
Team Udayavani, Jun 22, 2019, 5:05 AM IST
ಉಡುಪಿ: ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ್ಯ ಕೇಂದ್ರ, ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ, ಸಿದ್ಧ ಸಮಾಧಿಯೋಗ, ಶ್ರೀ ಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಆಶ್ರಯದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಶುಕ್ರವಾರ ಜರಗಿತು.
ಪತಂಜಲಿ ಯೋಗ ಸಮಿತಿಯ ಕರಂಬಳ್ಳಿ ಶಿವರಾಮ ಶೆಟ್ಟಿ ಮತ್ತಿತರಿದ್ದರು. ಅಪಾರ ಸಂಖ್ಯೆಯಲ್ಲಿ ಯೋಗಾಸಕ್ತರು ಪಾಲ್ಗೊಂಡು ಯೋಗಾಭ್ಯಾಸ ನಡೆಸಿದರು.
ಯೋಗಾಸನ ದಿನಚರಿಯ ಭಾಗವಾಗಿರಲಿ
ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಏಕಾದಶಿಯಂತಹ ಹರಿದಿನಗಳಲ್ಲಿ ಆಹಾರವನ್ನಾದರೂ ಬಿಡಬಹುದು, ಯೋಗವನ್ನು ಬಿಟ್ಟಂತಹ ದಿನ ನಮ್ಮ ಬದುಕಿನಲ್ಲಿ ಬಾರದಿರಲಿ. ಯೋಗಾಸನವು ನಮ್ಮ ದಿನಚರಿಯ ಒಂದು ಭಾಗವಾಗಿರಲಿ. ಪತಂಜಲಿ ಸಂಸ್ಥೆಯವರು ಹರಿದ್ವಾರದಲ್ಲಿ ಯೋಗ ಕೇಂದ್ರವನ್ನು ಸ್ಥಾಪಿಸಿ ವಿಶ್ವದಲ್ಲಿ ಯೋಗವನ್ನು ಪಸರಿಸಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.