ಮೊಬೈಲ್‌ನಲ್ಲೇ ಹೈಸ್ಕೂಲು ಪಠ್ಯ ಓದಲು ಸಾಧ್ಯ
ಪಠ್ಯಪುಸ್ತಕಗಳಲ್ಲಿ ಕ್ಯೂಆರ್ ಕೋಡ್
Team Udayavani, Jun 22, 2019, 10:15 AM IST
ಸುಳ್ಯ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪಠ್ಯಪುಸ್ತಕವೇ ಅಂತಿಮವಲ್ಲ. ಮೊಬೈಲ್ ಮೂಲಕವೂ ಪಠ್ಯಕ್ಕೆ ಸಂಬಂಧಿಸಿ ಹೆಚ್ಚಿನ ಅಭ್ಯಾಸಕ್ಕೆ, ಚಟುವಟಿಕೆ ವೀಕ್ಷಣೆಗೆ ಕ್ಯೂಆರ್ ಕೋಡ್ ಈ ಶೈಕ್ಷಣಿಕ ವರ್ಷದಿಂದಲೇ ಸಿದ್ಧಗೊಂಡಿದೆ.
2019-20ನೇ ಸಾಲಿನಲ್ಲಿ ವಿತರಣೆಯಾಗಿದ ಪ್ರೌಢಶಾಲಾ ಪಠ್ಯಪುಸ್ತಕಗಳಲ್ಲಿ ಮೊಬೈಲ್ ಮೂಲಕ ಹೆಚ್ಚುವರಿ ಅಧ್ಯಯನ ವನ್ನು ಸಾಧ್ಯವಾಗಿಸುವ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಇದನ್ನು ದೀಕ್ಷಾ ಅಪ್ಲಿಕೇಶನ್ ಮೂಲಕ ಸ್ಕ್ಯಾನ್ ಮಾಡಿದರೆ ಪಠ್ಯಕ್ಕೆ ಪೂರಕ ಮಾಹಿತಿ, ಚಿತ್ರ, ಇತರ ಚಟುವಟಿಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಇದರಿಂದ ಪಠ್ಯಕ್ಕಿಂತಲೂ ಅಧಿಕ ಮಾಹಿತಿ ಪಡೆದುಕೊಳ್ಳಲು ಅನುವಾಗುತ್ತದೆ.
ಪ್ರೌಢಶಾಲಾ ಪಠ್ಯಪುಸ್ತಕದಲ್ಲಿ ಕೋಡ್
ಈ ಶೈಕ್ಷಣಿಕ ಸಾಲಿನ ಪ್ರೌಢಶಾಲೆ ಪಠ್ಯಪುಸ್ತಕದ ಪ್ರತೀ ಪಾಠದ ಒಂದು ಬದಿಯಲ್ಲಿ ಈ ಕ್ಯೂಆರ್ ಕೋಡ್ ನೀಡಲಾಗಿದೆ. ಪಠ್ಯ ದಲ್ಲಿರುವ ವಿಷಯದ ಬಗ್ಗೆ ಇನ್ನಷ್ಟು ವಿಸ್ತೃತ ಮಾಹಿತಿ ಇದರ ಮೂಲಕ ಲಭ್ಯವಾಗುತ್ತದೆ. ಕ್ಯೂ ಆರ್ ಕೋಡ್‌ಗಳ ಬಳಕೆ, ಪ್ರಯೋಜನದ ಬಗ್ಗೆ ಮೊದಲ ಹಂತದಲ್ಲಿ ಶಾಲಾ ಶಿಕ್ಷಕರಿಗೆ, ಎರಡನೇ ಹಂತದಲ್ಲಿ ಮಕ್ಕಳಿಗೆ ತರಬೇತಿ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಕೇಂದ್ರ ಸರಕಾರ ವಿದ್ಯಾರ್ಥಿ ಗಳಿಗೆಂದು ರೂಪಿಸಿದ ಅಪ್ಲಿಕೇಶನ್ ದೀಕ್ಷಾ. ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಕೊಳ್ಳಬಹುದು.
ಪ್ರೌಢಶಾಲೆಯ 8, 9 ಮತ್ತು 10 ನೇ ತರಗತಿಗಳಿಗೆ ಸಂಬಂಧಿಸಿದ ಪಠ್ಯ ಮಾಹಿತಿ ಇದರಲ್ಲಿದ್ದು, ದೇಶದ 24 ರಾಜ್ಯಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ಮಾಹಿತಿ ಅಡಕವಾಗಿದೆ. ಅಪ್ಲಿಕೇಶನ್ ಹೊಂದಿರುವ ಯಾವುದೇ ವ್ಯಕ್ತಿ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮೂಲಕ ಲಾಗಿನ್ ಆಗಿ ಬೇಕಾದ ರಾಜ್ಯದ ಪಠ್ಯವನ್ನು ಪಡೆಯಲು ಅವಕಾಶವಿದೆ.
ದೀಕ್ಷಾ ಅಪ್ಲಿಕೇಶನ್‌ನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಂಬ ಎರಡು ಆಪ್ಶನ್‌ಗಳಿವೆ. ಇದನ್ನು ತೆರೆದು ಮಾಹಿತಿ ಪಡೆಯಲು ಸಾಧ್ಯ. ಅಧ್ಯಯನ ಯೋಜನೆ, ಪಠ್ಯಕ್ಕೆ ಸಂಬಂಧಿಸಿ ವಿಡಿಯೋ, ಆಡಿಯೋ, ಅಭ್ಯಾಸ ಪ್ರಶ್ನೆಗಳು, ಪಠ್ಯಕ್ಕೆ ಪೂರಕ ಚಿತ್ರಗಳು, ಹೆಚ್ಚುವರಿ ಪ್ರಶ್ನೋತ್ತರ, ಆಕರ್ಷಕ ಗೇಮ್‌ಗಳು ಇಲ್ಲಿವೆ.
ಅಳವಡಿಕೆ ಹೇಗೆ?
ಗೂಗಲ್ ಪ್ಲೇಸ್ಟೋರ್‌ನಲ್ಲಿ ದೀಕ್ಷಾ ಅಪ್ಲಿಕೇಶನ್ ಎಂದು ಟೈಪ್ ಮಾಡಿ, ಡೌನ್‌ಲೋಡ್ ಮಾಡಿಕೊಂಡು ಇಮೇಲ್, ಮೊಬೈಲ್ ಸಂಖ್ಯೆ ಸಹಿತ ಅಗತ್ಯ ದಾಖಲೆ ನಮೂದಿಸಬೇಕು. ಅನಂತರ ಮೊಬೈಲ್ ನಂಬರ್‌ಗೆ ಒಟಿಪಿ ಸಂದೇಶ ಬರುತ್ತದೆ. ಆ ಸಂಖ್ಯೆಯನ್ನು ಅಪ್ಲಿಕೇಶನ್‌ನ ನಿರ್ದಿಷ್ಟ ಸ್ಥಳದಲ್ಲಿ ತುಂಬಿದರೆ ಅಪ್ಲಿಕೇಶನ್ ಇನ್‌ಸ್ಟಾಲ್ ಆಗುತ್ತದೆ.
ಹೆಚ್ಚಿನ ಮಾಹಿತಿ ಸಿಗುತ್ತದೆ
ಕ್ಯೂಆರ್ ಕೋಡ್ ಅನ್ನು ದೀಕ್ಷಾ ಅಪ್ಲಿಕೇಶನ್ ಮೂಲಕ ಸ್ಕ್ಯಾನ್ ಮಾಡಿದಲ್ಲಿ ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ವಿಷಯಗಳನ್ನು ತಿಳಿಯಲು ಸಾಧ್ಯವಿದೆ. ಹೈಸ್ಕೂಲು ಪಠ್ಯಪುಸ್ತಕಗಳಲ್ಲಿ ಇದನ್ನು ಒದಗಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಯೋಜನ ದೊರೆಯಲಿದೆ.
– ವೈ. ಶಿವರಾಮಯ್ಯ ಡಿಡಿಪಿಐ, ಮಂಗಳೂರು
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.