![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Jun 22, 2019, 10:23 AM IST
ಬಸವನಬಾಗೇವಾಡಿ: ಬಸವೇಶ್ವರ ಅಂತಾರಾಷ್ಟ್ರೀಯ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳು.
ಬಸವನಬಾಗೇವಾಡಿ: ಅಂತಾರಾಷ್ಟ್ರೀಯ ಯೋಗ ದಿನಾಚಾರಣೆ ಅಂಗವಾಗಿ ಶುಕ್ರವಾರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.
ಪಟ್ಟಣದ ವಿರಕ್ತಮಠದಲ್ಲಿ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ಪ್ರದರ್ಶನದಲ್ಲಿ ಪಟ್ಟಣದ ನಿವಾಸಿಗಳು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ, ಯೋಗದಿಂದ ಶಾಂತಿ ಸಹಬಾಳ್ವೆಗುಣಗಳು ಬೆಳೆಯುತ್ತವೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಯೋಗಾಭ್ಯಾಸ ರೂಢಿಸಿಕೊಂಡು ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಹಿರಿಯಾಸಂಗಿಯ ವೀರ ಬಸವದೇವರು ಮಾತನಾಡಿ, ಯೋಗದಿಂದ ಮನುಷ್ಯನ ಆಯುಷ್ಯ ವೃದ್ಧಿಯಾಗುತ್ತದೆ. ಶರೀರಕ್ಕೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ. ಯೋಗದಿಂದ ರೋಗ ಮುಕ್ತವಾಗಲು ಸಾಧ್ಯ ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರಿ ಕಾಶೀನಾಥ ಅವಟಿ ಯೋಗಾಸನದ ವಿವಿಧ ಭಂಗಿಗಳನ್ನು ತಿಳಿಸಿಕೊಟ್ಟರು. ವಿ.ಎಂ. ಪರೆಣ್ಣನವರ, ಅಂಬೋಜಿ ಪವಾರ, ವಿವೇಕಾನಂದ ಕಲ್ಯಾಣಶೆಟ್ಟಿ, ಬಸವರಾಜ ಮಾದನಶೆಟ್ಟಿ, ಎಸ್.ಎಸ್. ಹಡಪದ, ಅಶೋಕ ಮುಳವಾಡ, ಅಪ್ಪು ಧನಶೆಟ್ಟಿ, ರಾಜು ಚಿಕ್ಕೊಂಡ, ಪ್ರದೀಪ ಮುಂಜಾನೆ, ಶಂಕರ ಅವಟಿ, ಸಾವಿತ್ರಿ ಕಲ್ಯಾಣಶೆಟ್ಟಿ, ಶೀಲಾ ಅವಟಿ, ಗೀತಾ ಗಬ್ಬೂರ, ಮಹಾದೇವಿ ಒಣರೊಟ್ಟಿ, ಮಹಾದೇವಿ ಬಿರಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಿವಿಧೆಡೆ ಆಚರಣೆ: ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ, ಬಸವೇಶ್ವರ ದೇವಾಲಯದ ಬಸವೇಶ್ವರ ಅಂತಾರಾಷ್ಟ್ರೀಯ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಶ್ವಯೋಗ ದಿನ ಆಚರಿಸಲಾಯಿತು.
ಪಟ್ಟಣದ ಸಿವಿಲ್ ನ್ಯಾಯಾಧೀಶ ವಿ.ಎಸ್. ಪಾಟೀಲ ಮಾತನಾಡಿ, ಯೋಗಾಸನ ಕೇವಲ ವಿಶ್ವಯೋಗ ದಿನಾಚಾರಣೆಗೆ ಸಿಮೀತವಾಗದೇ ಪ್ರತಿನಿತ್ಯ ಮಾಡಬೇಕು ಎಂದರು.
ಶಾಲೆ ಉಪಾಧ್ಯಕ್ಷ ಎಂ.ಎಸ್. ಕೊಟ್ಲಿ ಅಧ್ಯಕ್ಷತೆವಹಿಸಿದ್ದರು. ಶಾಲಾ ಸುಧಾರಣಾ ಸಮಿತಿ ಸದಸ್ಯರಾದ ಭರತ್‌ಕುಮಾರ ಅಗರವಾಲ, ರವಿ ರಾಠೊಡ, ಪ್ರಾಚಾರ್ಯ ರೋಹಿಣಿ ರೋಣದ ಇದ್ದರು. ಸುಧಾ ಚಿನಿವಾಲ ಸ್ವಾಗತಿಸಿದರು. ಎಸ್.ಎಂ. ಬಿಸ್ಟಗೊಂಡ ನಿರೂಪಿಸಿದರು. ಎಸ್.ಎ. ತಾಂಬೆ ವಂದಿಸಿದರು.
ಕೋಲ್ಹಾರ: ಕೊಲ್ಹಾರ ಪಟ್ಟಣದ ಸಂಗಮೇಶ್ವರ ಪಪೂ ಕಾಲೇಜು ಆವರಣದಲ್ಲಿ ವಿಶ್ವಯೋಗ ದಿನಾಚಾರಣೆ ಹಮ್ಮಿಕೊಳ್ಳಲಾಗಿತ್ತು.
ಬಸವನಬಾಗೇವಾಡಿ ಸಿದ್ಧಿ ಸಮಾಧಿ ಯೋಗ ಸಮಿತಿಯ ದಯಾನಂದ ಉಪಾಧ್ಯ ಯೋಗಾಸನದ ವಿವಿಧ ಭಂಗಿಗಳನ್ನು ತಿಳಿಸಿಕೊಟ್ಟರು. ಬಿ.ಯು. ಗಿಡ್ಡಪ್ಪಗೋಳ, ಎಸ್.ಬಿ. ಪತಂಗಿ, ಟಿ.ಟಿ. ಹಗೇದಾಳ, ಕೆ.ಯು. ಗಿಡ್ಡಪ್ಪಗೋಳ, ಈಶ್ವರ ಶೀಲವಂತ, ಬಿ.ಎಸ್. ನಿಂಬಾಳಕರ, ಆರ್.ಕೆ. ಉಮರಾಣಿ ಸೇರಿದಂತೆ ಅನೇಕರು ಇದ್ದರು.
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.