“ಶೌಚ’ ಮ್ಯೂಸಿಯಂ ವೀಕ್ಷಣೆಯ ಸುಖ

ದಿಲ್‌ವಾಲೋಂಕೀ ದಿಲ್ಲಿ

Team Udayavani, Jun 23, 2019, 5:00 AM IST

4

ಶೌಚಾಲಯವು ಮಾನವನ ನೈರ್ಮಲ್ಯ ಸಂಬಂಧಿ ಇತಿಹಾಸದ ಒಂದು ಭಾಗವಷ್ಟೇ ಅಲ್ಲ. ಅದು ಮಾನವ ನಾಗರೀಕತೆಯ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯವೂ ಹೌದು’

ಇಂಥದ್ದೊಂದು ಅರ್ಥಪೂರ್ಣ ವಾಕ್ಯವನ್ನು ನುಡಿದಿದ್ದು ಡಾ. ಬಿಂದೇಶ್ವರ್‌ ಪಾಠಕ್‌. ಈ ಹೆಸರು ಬಹುತೇಕರಿಗೆ ಅಷ್ಟಾಗಿ ಪರಿಚಿತವಲ್ಲದಿರಬಹುದು. ಆದರೆ, ಸುಲಭ ಶೌಚಾಲಯ ಎಂಬುದು ಯಾರಿಗೂ ಈ ದೇಶದಲ್ಲಿ ಅಪರಿಚಿತವಲ್ಲ. ಇಂದು ನಮಗೆ ದೇಶದಾದ್ಯಂತ ಕಾಣಸಿಗುವ ಸುಲಭ ಶೌಚಾಲಯಗಳು ಇವರ ಕನಸಿನ ಕೂಸು. 1970ರಲ್ಲಿ ಬಿಹಾರದ ಚಿಕ್ಕದೊಂದು ಹಳ್ಳಿಯಲ್ಲಿ ಆರಂಭವಾಗಿದ್ದ ಸುಲಭ್‌ ಶೌಚಾಲಯ ಇಂದು ದೇಶದೆಲ್ಲೆಡೆ ಹಬ್ಬಿಕೊಂಡಿದೆ. ಕೋಟ್ಯಾಂತರ ಮಂದಿ ಈ ಸಾರ್ವಜನಿಕ ಶೌಚಾಲಯಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಡಾ. ಪಾಠಕ್‌ರವರು ಸುಲಭ್‌ ಸಾರ್ವಜನಿಕ ಶೌಚಾಲಯಗಳ ಮೂಲಕವಾಗಿ ತಂದಿದ್ದು ನಿಸ್ಸಂದೇಹವಾಗಿಯೂ ಒಂದು ನೈರ್ಮಲ್ಯ ಕ್ರಾಂತಿಯಾಗಿತ್ತು. 1991ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಸಮ್ಮಾನಿತರಾದ ಇವರು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗೌರವಗಳಿಗೆ ಭಾಜನರಾದ ಮಹನೀಯರೂ ಹೌದು.

ಈ ಸಾಧನೆಯ ಕಥೆಗಳು ಏನೇ ಇದ್ದರೂ ಡಾ. ಪಾಠಕ್‌ ಅವರಿಗೆ ನೈರ್ಮಲ್ಯದ ಬಗೆಗಿರುವ ಅಸಾಮಾನ್ಯ ಆಸಕ್ತಿ ಮತ್ತು ಕಾಳಜಿಯನ್ನು ನೋಡಬೇಕಿದ್ದರೆ ದಿಲ್ಲಿಯ ಪಾಲಂ-ದಾಬ್ರಿ ರಸ್ತೆಯಲ್ಲಿರುವ ಸುಲಭ್‌ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೊಮ್ಮೆ ಹೋಗಬೇಕು. ಇದು ಶೌಚಾಲಯಕ್ಕೆಂದೇ ಮೀಸಲಾಗಿರುವ ಮ್ಯೂಸಿಯಂ. ಹಾಗೆ ನೋಡಿದರೆ “ಶೌಚ’ವನ್ನು ನಾವು ಅಸಹ್ಯವೆಂದೋ, ಅದೊಂದು ಚರ್ಚೆಗೆ ಯೋಗ್ಯವಲ್ಲದ ಗಂಭೀರ ವಿಷಯವಲ್ಲವೆಂದೋ ಸಾಮಾನ್ಯವಾಗಿ ಅಸಡ್ಡೆಗೀಡುಮಾಡಿದ್ದೇ ಹೆಚ್ಚು. ಶೂಜಿತ್‌ ಸರ್ಕಾರ್‌ ನಿರ್ದೇಶನದ ಪೀಕು ಚಿತ್ರದಲ್ಲಿ ವೃದ್ಧ ಅಮಿತಾಭರ ಪಾತ್ರವು ಮಾತೆತ್ತಿದರೆ ತನ್ನ ಮಲಬದ್ಧತೆಯ ಬಗ್ಗೆಯಷ್ಟೇ ಗೊಣಗುತ್ತದೆ. ಅದೇನು ಮಾತನಾಡಿದರೂ ಆತನ ಮಾತುಗಳು ಕೊನೆಯಾಗುವುದು ಮಲಬದ್ಧತೆಯ ಬಗೆಗಿನ ಏನಾದರೊಂದು ಟೀಕೆ ಅಥವಾ ದೂರಿನೊಂದಿಗೇ. ಹೀಗಾಗಿ, ಯಾರೇನೇ ಹೇಳಲಿ ಶೌಚವೆನ್ನುವುದು ನಾವಂದುಕೊಂಡಷ್ಟು ಸರಳವೂ ಅಲ್ಲ, ಅನಗತ್ಯ ಅಸಂಬದ್ಧವೂ ಅಲ್ಲ.

ಮ್ಯೂಸಿಯಂ ಎಂಬ ಅದ್ಭುತ
ಇಂಥದ್ದೊಂದು ಮಹಾತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡಿದ್ದ ಡಾ. ಪಾಠಕ್‌ ನೆರವಿಗೆಂದು ದೇಶದಾದ್ಯಂತ ನೂರಕ್ಕೂ ಹೆಚ್ಚು ದೇಶಗಳ ರಾಯಭಾರ ಕಚೇರಿಗಳ ಬಾಗಿಲನ್ನು ತಟ್ಟಿದಾಗ ಅರವತ್ತಕ್ಕೂ ಹೆಚ್ಚಿನ ರಾಯಭಾರ ಕಚೇರಿಗಳು ಇವರ ಆಗ್ರಹಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರಂತೆ. ಮುಂದೆ ತನ್ನದೇ ಸ್ವಂತ ಅಧ್ಯಯನಗಳಿಂದ, ವಿಶ್ವಪರ್ಯಟನೆಗಳಿಂದ ಮತ್ತು ಆಸಕ್ತರ ನೆರವಿನಿಂದ ಈ ಮ್ಯೂಸಿ ಯಮ್ಮಿನ ಕೆಲಸಕ್ಕೆ ನಾಂದಿಹಾಡಿದ್ದ ಡಾ. ಪಾಠಕ್‌ ನಿಧಾನವಾಗಿ ಇತಿಹಾಸವನ್ನೇ ಸೃಷ್ಟಿಸಿದ್ದರು. ಪ್ರಾಯಶಃ ಶೌಚಾಲ ಯಕ್ಕೆಂದೇ ಮೀಸಲಾಗಿ ರುವ ವಸ್ತು ಸಂಗ್ರಹಾಲಯ ವೊಂದು ಈ ಜಗತ್ತಿನಲ್ಲೇ ಮೊದಲನೆಯದ್ದೇನೋ. ಇಂದು ವಿಶ್ವದ ಹಿರಿಯ ನಾಯಕರಿಂದ ಹಿಡಿದು ಖ್ಯಾತನಾಮರೂ, ವಿದ್ಯಾರ್ಥಿಗಳೂ, ಪ್ರವಾಸಿಗಳೂ, ಆಸಕ್ತರೂ ಈ ಮ್ಯೂಸಿಯಮ್ಮಿಗೆ ಬಲು ಆಸಕ್ತಿಯಿಂದ ಬರುತ್ತಾರೆ. ತಾವು ಕಂಡುಕೇಳಿರದ ಅದೆಷ್ಟೋ ಸಂಗತಿಗಳನ್ನು ತಮ್ಮದಾಗಿಸಿಕೊಂಡು ಸಂತಸಭರಿತ ಅಚ್ಚರಿಯೊಂದಿಗೆ ಮರಳುತ್ತಾರೆ.

“ಶೌಚಲೋಕ’: ಏನುಂಟು? ಏನಿಲ್ಲ?
ಅಂದ ಹಾಗೆ ಒಂದು “ಲೋಕ’ ಎಂದು ಕರೆಯುವಷ್ಟು ಶೌಚದ ಜಗತ್ತು ಅಗಾಧವಾಗಿದೆಯೇ? “ಹೌದು!’ ಎಂದು ಎದೆಯುಬ್ಬಿಸಿ ಹೇಳುತ್ತಿದೆ ದಿಲ್ಲಿಯ ಈ ಪುಟ್ಟ ಮ್ಯೂಸಿಯಂ. ಬಾಲಕೃಷ್ಣನ ಪುಟ್ಟ ಬಾಯಿಯಲ್ಲಿ ಯಶೋದೆಗೆ ಸೃಷ್ಟಿಯೇ ಕಂಡಂತೆ ಈ ಪುಟ್ಟದೊಂದು ಕೋಣೆಯಲ್ಲಿ ಜಗತ್ತೇ ತೆರೆದುಕೊಂಡಿದೆ. ಶೌಚಾಲಯಗಳ ಇತಿಹಾಸ, ಶೌಚಾಲಯಗಳ ವಿಕಾಸ, ಸಾಮಾಜಿಕ ವ್ಯವಸ್ಥೆ, ನಾಗರೀಕತೆ, ತಂತ್ರಜ್ಞಾನ, ಸಂಸ್ಕೃತಿ, ಜೀವನಶೈಲಿ, ಆಧ್ಯಾತ್ಮ… ಹೀಗೆ ಸಂಗತಿಯೊಂದನ್ನು ಯಾವ್ಯಾವ ದೃಷ್ಟಿಕೋನಗಳಲ್ಲೆಲ್ಲಾ ನೋಡಬಹುದೋ ಅವೆಲ್ಲವನ್ನೂ ಇಲ್ಲಿ ಯಶಸ್ವಿಯಾಗಿ ಪ್ರಸ್ತುತಪಡಿಸ ಲಾಗಿದೆ. ಕ್ರಿಸ್ತಪೂರ್ವ 2500ನೆ ಅವಧಿಯಿಂದ ಇಂದಿನ ಅತ್ಯಾಧುನಿಕ ಶೌಚಾಲಯಗಳವರೆಗೂ, ರಾಜಾಧಿರಾಜರ ಐಷಾರಾಮಿ ಶೌಚಾಲಯ ಗಳಿಂದ ಜನಸಾಮಾನ್ಯರ ಗುಂಡಿಗಳವರೆಗೂ ಮಾದರಿಗಳನ್ನೂ ಒಳ ಗೊಂಡಂತೆ ಅವುಗಳ ಬಗೆಗಿನ ಕೌತುಕಮಯ ಸತ್ಯಗಳೂ, ಗೂಗಲ್ಲಿಗೂ ಸುಸ್ತು ಹೊಡೆಸು ವಷ್ಟಿನ ಮಾಹಿತಿಗಳೂ ಇಲ್ಲಿವೆ. ಉದಾಹರಣೆಗೆ ಕುಳಿತ ಭಂಗಿಯಲ್ಲಿ ಶೌಚಕ್ರಿಯೆಯನ್ನು ಮಾಡುವ ರೂಢಿಯು ಕ್ರಿಸ್ತಪೂರ್ವ 2100ರ ಈಜಿಪ್ಟಿನಲ್ಲೆ ಇತ್ತೆಂದು ಪುರಾತತ್ವ ಅಧ್ಯಯನಗಳು ಕಂಡುಕೊಂಡಿದ್ದರೆ, 19ನೇ ಶತಮಾನವನ್ನು “ಶೌಚಾಲಯಗಳ ಶತಮಾನ’ವೆಂದೇ ಕರೆಯಲಾಗುತ್ತಿತ್ತಂತೆ. ಏಕೆಂದರೆ ಹಲವು ಬಣ್ಣ, ಗಾತ್ರ ಮತ್ತು ಶೈಲಿಗಳ ಬಗೆಬಗೆಯ ಶೌಚಾಲಯಗಳು ಈ ಶತಮಾನದಲ್ಲಿ ವಿನ್ಯಾಸಗೊಂಡಿದ್ದವು. ಮೊಗಲ್‌ ಸಾಮ್ರಾಟನಾಗಿದ್ದ ಜಹಾಂಗೀರ್‌ ತನ್ನ ಕಾಲದಲ್ಲೇ ದಿಲ್ಲಿಯಿಂದ ನೂರಿಪ್ಪತ್ತು ಕಿಲೋಮೀಟರ್‌ ದೂರದಲ್ಲಿದ್ದ ಅಲ್ವರ್‌ನಲ್ಲಿ ನೂರು ಕುಟುಂಬಗಳ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯವೊಂದನ್ನು ಆರಂಭಿಸಿದ್ದನಂತೆ. ಇನ್ನು ಫ್ರೆಂಚ್‌ ರಾಜನಾಗಿದ್ದ ಕಿಂಗ್‌ ಹದಿನಾಲ್ಕನೆಯ ಲೂಯಿಸ್‌ (1638-1715) ನಿಗೆ ಖಾಸಗಿಯಾಗಿ ಶೌಚಕ್ರಿಯೆಯನ್ನು ಮಾಡುವ ರೂಢಿಯಿರಲಿಲ್ಲ. ಆತನ ರಾಜಸಿಂಹಾಸನವು ಒಂದು ಮಿನಿ ಟಾಯ್ಲೆಟ್‌ ಕೂಡ ಆಗಿತ್ತು. ಇಂಥ ವಿಚಿತ್ರ ಶೌಚಾಲಯಗಳ ಮಾದರಿಗಳು ಬಹುಶಃ ಇಲ್ಲಿ ಮಾತ್ರ ಸಿಗಬಹುದೇನೋ!

ಅಪರಾವತಾರಗಳಲ್ಲಿ “ಶೌಚ’
ಮಾದರಿಗಳು ಮತ್ತು ಮಾಹಿತಿಗಳಲ್ಲಿ ಮುಗಿಯುವುದಾದರೆ ಇದು ಹತ್ತರಲ್ಲಿ ಹನ್ನೊಂದನೇ ಮ್ಯೂಸಿಯಮ್ಮಾಗುತ್ತಿತ್ತು. ಆದರೆ ಅದಕ್ಕಿಂತ ಹೆಚ್ಚಿನವುಗಳೂ ಕೂಡ ಇಲ್ಲಿ ಧಾರಾಳವಾಗಿವೆ. ಶೌಚಾಲಯಗಳ ಬಗ್ಗೆ ಮಾಡಿರುವ ವಿನೋದಮಯ ವ್ಯಂಗ್ಯಚಿತ್ರಗಳು ಪ್ರವಾಸಿಗರನ್ನು ರಂಜಿಸಿದರೆ ವಿಶ್ವದ ವಿಚಿತ್ರ ಶೌಚಾಲಯಗಳ ಬಗೆಗಿರುವ ಸಚಿತ್ರ ಮಾಹಿತಿಗಳು ಆಸಕ್ತರನ್ನು ಅಚ್ಚರಿಗೀಡುಮಾಡುತ್ತವೆ. ಇನ್ನು ಶೌಚಾಲಯಗಳ ಕುರಿತು ಬಂದಿರುವ ಸಾಹಿತ್ಯಕ್ಕೂ ಬರವೇನಿಲ್ಲ. ಭಾರತದ ಉರ್ದುಕವಿ ಚಿರ್ಕಿನ್‌ರನ್ನೂ ಸೇರಿದಂತೆ ಫ್ರೆಂಚ್‌ ಲೇಖಕರಾದ ಗಿಲ್ಲಿಸ್‌ ಕೊರೊಝೆಟ್‌, ಬೋಲಿಯೋರಂಥಾ ಸೃಜನಶೀಲರು ಶೌಚದ, ಶೌಚಾಲಯಗಳ ಬಗ್ಗೆ ಬರೆದಿರುವ ಕಿಲಾಡಿ ಕವಿತೆಗಳು, ವಿನೋದಮಯ ಕಥೆಗಳು, ನುಡಿಗಟ್ಟುಗಳು, ಜಾನಪದ ಕಥೆಗಳು ಇಲ್ಲಿಯ ಗೋಡೆಗಳನ್ನು ಅಲಂಕರಿಸಿವೆ.
1857ರಲ್ಲಿ ಮೊತ್ತಮೊದಲ ಬಾರಿಗೆ ಟಾಯ್ಲೆಟ್‌ ಪೇಪರ್‌ ಅನ್ನು ಜಗತ್ತಿಗೆ ಪರಿಚಯಿಸಿದ ಅಮೆರಿಕದ ಜೋಸೆಫ್ ಗಯೆಟ್ಟಿಯಂಥ ಪ್ರತಿಭಾವಂತರನ್ನೂ, ಆಧುನಿಕ ಶೌಚಾಲಯಗಳ ಲೋಕವನ್ನು ಇನ್ನಿಲ್ಲದಂತೆ ಪ್ರಭಾವಿಸಿದ ಬ್ರಿಟಿಷ್‌ ಕೊಳಾಯಿಗಾರ ಥಾಮಸ್‌ ಕ್ರೇಪರ್‌ರಂಥವರನ್ನೂ ಜಗತ್ತು ಮರೆಯಲು ಸಾಧ್ಯವಿಲ್ಲ. ಜೊತೆಗೇ ಭಾರತದಲ್ಲಿ ಸ್ವತ್ಛಭಾರತವೆಂಬುದು ಒಂದು ಜನಪ್ರಿಯ ಘೋಷಣೆಯಾಗುವ ವರ್ಷಗಳ ಮೊದಲೇ ತನ್ನ ಸ್ವಯಂಸೇವಕರ ತಂಡವನ್ನು ಕಟ್ಟಿಕೊಂಡು ಈ ನಿಟ್ಟಿನಲ್ಲಿ ಅವಿರತ ದುಡಿದ ಕನಸುಗಾರ ಡಾ. ಪಾಠಕ್‌. ಸುಲಭ್‌ ಶೌಚಾಲಯಗಳು ಈ ನಿಟ್ಟಿನಲ್ಲೊಂದು ಮಹಾಮೈಲುಗಲ್ಲು.
“ಸುಲಭ್‌’ ಬಿತ್ತಿರುವ ಕನಸು ಸ್ವತ್ಛ ಮತ್ತು ಸ್ವಸ್ಥ ದೇಹ, ದೇಶ, ಸಮಾಜ ಮತ್ತು ಜಗತ್ತಿನದ್ದು. ಎಲೆಮರೆಕಾಯಿಯಂತಿರುವ ದಿಲ್ಲಿಯ ಈ ತಾಣವು ನಿಜಕ್ಕೂ ಮಹಾನಗರಿಯ ಒಂದು ಹೆಮ್ಮೆ.

ಪ್ರಸಾದ್‌ ನಾೖಕ್‌

ಟಾಪ್ ನ್ಯೂಸ್

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.