“ಯೋಗಾಭ್ಯಾಸವನ್ನು ರೂಢಿಸಿಕೊಳ್ಳಿ’
ಸರಕಾರಿ ಫಿಶರೀಸ್ ವೊಕೇಶನಲ್ ಶಾಲೆ
Team Udayavani, Jun 23, 2019, 5:27 AM IST
ಕಾಸರಗೋಡು: ಯೋಗ ವನ್ನು ಬದುಕಿನ ಭಾಗವಾಗಿಸುವ ಸಂದೇಶ ವನ್ನು ನೀಡುವ ಮೂಲಕ ಚೆರುವ ತ್ತೂರು ಗ್ರಾಮಪಂಚಾಯತ್‌ನ ಸರಕಾರಿ ಪಿಷರೀಸ್ ವೊಕೇಶನಲ್ ಸರಕಾರಿ ಶಾಲೆ ಯೋಗ ದಿನಾಚರಣೆ ನಡೆಸಿತು.
ಶಾಲೆಯ 8ನೇ ತರಗತಿಗಳಿಗೆ ಯೋಗದ ತರಬೇತಿ ನೀಡಲಾಯಿತು. 6 ವಿಭಾಗಗಳ 180 ಮಕ್ಕಳು ತರಬೇತಿಯಲ್ಲಿ ಭಾಗವಹಿಸಿದರು.
ಯೋಗಾಚಾರ್ಯ ಅನಿಲ್‌ಯೋಗಾ ಸನಗಳ ಕುರಿತು ಮಾಹಿತಿ ನೀಡುತ್ತಾ, ಬದುಕಲ್ಲಿ ಯೋಗವನ್ನು ಅಳವ ಡಿಸಿಕೊಳ್ಳುವ ಸಂದೇಶ ನೀಡಲಾಯಿತು ಹಾಗೂ ದಿನಲೂ ಯೋಗಮಾಡುವಂತೆ ಹೇಳಿದರು ಶಿಕ್ಷಕರೂ ಭಾಗವಹಿಸಿದರು.ಶಾಲಾ ಸಭಾಂಗಣದಲ್ಲಿ ನಡೆದ ಸಮಾ ರಂಭದಲ್ಲಿ ಯೋಗಾಚಾರ್ಯ ಅನಿಲ್, ಶಾಲೆಯ ಕ್ರೀಡಾ ಶಿಕ್ಷಕ ಎಂ.ರಾಜು ತರಬೇತಿಗೆ ನೇತೃತ್ವ ನೀಡಿದರು.
ತರಬೇತಿಗೆ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಯೋಗ ಬದುಕಿನ ಕುರಿತು ಜಾಗೃತಿ ತರಗತಿ, ರೋಗಗಳಿಂದ ಮುಕ್ತಿ, ಆಂತರಿಕ ಅವಯವಗಳ ಸಾಮರ್ಥ್ಯ ಹೆಚ್ಚಳ, ಶ್ವಾಸಕೋಶದ ಬಲಗೊಳ್ಳುವಿಕೆ, ಏಕಾಗ್ರತೆಯ ಹೆಚ್ಚಳ, ಆತ್ಮವಿಶ್ವಾಸ ಹೆಚ್ಚಳ, ಖನ್ನತೆ, ಒತ್ತಡಗಳಿಂದ ವಿಮುಕ್ತಿ , ಆರೋಗ್ಯ ಸಮಸ್ಯೆಗಳಿಗೆ ಯೋಗದಿಂದ ಮುಕ್ತಿ ಲಭಿಸುತ್ತದೆ ಎಂದು ಮಾಹಿತಿ ನೀಡಲಾಯಿತು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.