ರಾಂಪುರ ಕೆರೆಯಲ್ಲಿ ನೊರೆ ಹೆಚ್ಚುವ ಮುನ್ನ ವ್ಯವಸ್ಥೆ ಅತ್ಯಗತ್ಯ
Team Udayavani, Jun 23, 2019, 3:05 AM IST
ಮಹದೇವಪುರ: ಅಳೆತ್ತರಕ್ಕೆ ಬೆಳೆದ ಜೊಂಡು ಸಸ್ಯ, ಕೊಳಚೆ ನೀರು ಮತ್ತು ತ್ಯಾಜ್ಯದಿಂದ ಹದಗೆಟ್ಟ ರಾಂಪುರ ಕೆರೆಯೂ ಈಗ ಬೆಳ್ಳಂದೂರು, ವರ್ತೂರು ಕೆರೆಯಂತೆ ನೊರೆ ಪ್ರಾರಂಭವಾಗಿದೆ. ವ್ಯವಸ್ಥೆ ಕಲ್ಪಿಸದಿದ್ದರೆ ನೊರೆಯಿಂದ ಪರಿತಪಿಸುವ ದಿನಗಳು ದೂರಿವಿಲ್ಲ.
ಕ್ಷೇತ್ರದ ರಾಂಪುರ ಸಮೀಪ 108 ಎಕರೆ ವಿಸ್ತೀರ್ಣವುಳ್ಳ ಕೆರೆಯ ದುಸ್ಥಿತಿ ಇದು. 2 ದಶಕಗಳ ಹಿಂದೆ ರೈತರ ಜೀವನಾಡಿಯಾಗಿದ್ದ ಕೆರೆಯು ಇಂದು ಕಲುಷಿತ ನೀರಿನಿಂದ ಅವ್ಯವಸ್ಥೆಯ ಅಗರವಾಗಿದೆ.
ಹೆಬ್ಟಾಳ, ನಾಗವಾರ, ಥಣಿಸಂದ್ರ, ಹೆಣ್ಣೂರು, ಗೆದಲ್ಲಹಳ್ಳಿ ಭಾಗದ ಕೊಳಚೆ ನೀರು ಈ ಕರೆಗೆ ಸೇರ್ಪಡೆಯಾಗುತ್ತಿರುವುದರಿಂದ ಹುಳು ತುಂಬಿಕೊಂಡು ವಿವಿದ ಜಾತಿಯ ಸಸ್ಯ ಬೆಳೆದಿದ್ದು ಹುಲ್ಲುಗಾವಲಿನಂತೆ ಭಾಸವಾಗುತ್ತಿದೆ.
ಗೆದಲ್ಲಹಳ್ಳಿ ಸಮೀಪ ಕಲುಷಿತ ನೀರನ್ನು ಶುದ್ಧೀಕರಿಸುವ ಘಟಕವಿದೆ ಅದರೂ ನೀರನ್ನು ಶುದ್ಧೀಕರಿಸಲು ಸಾಮರ್ಥ್ಯ ಕಡಿಮೆ ಇರುವುದರಿಂದ ಕೊಳಚೆ ಮಿಶ್ರಿತ ಚರಂಡಿ ನೀರು ಕೆರೆ ಸೇರುತ್ತಿದೆ. ಇದ್ದರಿಂದ ಬೇಸಾಯಕ್ಕೆ ನೆರವಾಗಿದ್ದ ಕೆರೆಯು ವಿಷಕಾರಿಯಾಗಿದೆ. ಅಲ್ಲದೆ, ಸ್ಥಳಿಯರ ಅರೋಗ್ಯದ ಮೇಲೆ ಪರಿಣಾಮಬಿರುತ್ತಿದೆ.
ರಾಂಪುರ ಕೆರೆಯಲ್ಲೂ ನೊರೆ: ರಾಂಪುರ ಕೆರೆಯಲ್ಲೂ ನೊರೆಯ ಹಾವಳಿ ತಪ್ಪಿಲ್ಲ. ನೊರೆಯಿಂದಾಗಿ ಕೆರೆಯ ಸಮೀಪ ಅಲ್ಪಸಲ್ಪ ಕೃಷಿ ಚಟುವಟಿಕೆ ಮಾಡುತ್ತಿರುವವರ ಪಾಡು ಹೇಳತೀರದು. ಗಾಳಿ ಬಿಸಿದಾಗ ನೊರೆಯು ತರಕಾರಿ ಸೊಪ್ಪುನಂತಹ ಬೆಳೆಗಳ ಮೇಲೆ ಬಿದ್ದರೆ ಬೆಳೆ ನಾಶವಾಗುತ್ತಿದೆ. ಅಲ್ಲದೆ ಸುತ್ತಮುತ್ತಲ ಗ್ರಾಮದ ಮೇಲೂ ಪರಿಣಾಮ ಬೀರುತ್ತಿದೆ.
ಸಾಂಕ್ರಾಮಿಕ ರೋಗ ಭೀತಿ: ಕಲುಷಿತ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳ ಭೀತಿಯಿಂದ ದಿನ ಕಳೆಯುವಂತಾಗಿದೆ. ಸಂಜೆ 5 ಗಂಟೆಯ ನಂತರ ಮನೆಬಾಗಿಲು ತೆರೆಯುವಂತಿಲ್ಲ. ರಾಂಪುರ, ಅದೂರು, ಚನ್ನಸಂದ್ರ, ಕನಕನಗರ, ಮಾರುಗೊಂಡನಹಳ್ಳಿ, ಬಿಳಿಶಿವಾಲೆ, ಸೇರಿದಂತೆ ಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೊಳೆಗಳ ಕಾಟ ಹೆಚ್ಚಾಗಿದೆ. ಕೆರೆಯ ಪಕ್ಕದಲ್ಲಿಯೇ ಇರುವ ರಾಂಪುರ ಗ್ರಾಮದ ನಿವಾಸಿಗಳು ಡೆಂಘೀ ಜ್ವರಕ್ಕೆ ಮೃತಪಟ್ಟಿರುವ ನಿದರ್ಶನವಿದೆ.
ನಿರ್ವಹಣೆ ಮರೀಚಿಕೆ: ಈ ಕೆರೆಯು ಬಿಬಿಎಂಪಿ ವ್ಯಾಪ್ತಿಗೆ ಒಳಪಡುತ್ತದೆ. ಕಂದಾಯ ಇಲಾಖೆಯ ಅಧೀನದಲ್ಲಿದ್ದ ಕೆರೆಯನ್ನು ಬಿಡಿಎಗೆ ಹಸ್ತಾಂತರಿಸಲಾಗಿದ್ದು, ನಿರ್ವಹಣೆ ಇಲ್ಲದೆ ಸೂರಗಿದೆ. ಕೆರೆಗೆ ರಾತ್ರೋರಾತ್ರಿ ಕೋಳಿ ತ್ಯಾಜ್ಯ ಸುರಿಯಲಾಗುತ್ತಿದ್ದು ಕಲುಷಿತಗೊಳ್ಳಲು ಕಾರಣವಾಗುತ್ತಿದೆ. ಕೆಲವೊಮ್ಮೆ ಬಿಬಿಎಂಪಿ ತ್ಯಾಜ್ಯವನ್ನು ಸುರಿದಿರುವ ನಿದರ್ಶನಗಳು ಇವೆ. ಕೆರೆಗೆ ತಂತಿಬೇಲಿ ಅಳವಡಿಸಲಾಗಿದ್ದರೂ ಕೆಲವೆಡೆ ಬೇಲಿಯನ್ನು ಕಿತ್ತು ಹಾಕಲಾಗಿದೆ.
ಒತ್ತವರಿ ಸಮಸ್ಯೆ: ಕೆರೆಗೆ ಸಂರ್ಪಕ ಕಲ್ಪಿಸುವ ರಾಜಕಾಲುವೆಗಳು ಭೂಗಳ್ಳರಿಂದ ಒತ್ತುವರಿಯಾಗುತ್ತಿವೆ. 15 ವರ್ಷಗಳ ಹಿಂದೆ ಕೃಷಿ ಚಟುವಟಿಕೆಗೆ ನೇರವಾಗಿದ್ದ ಕೆರೆಯ ನೀರು ಇಂದು ರಾಸಯಾನಿಕ ಮಿಶ್ರಿತ ಕಲುಷಿತ ನೀರಿನಿಂದ ಕೂಡಿದೆ.
ಇದ್ದರಿಂದ ಬೇಸಾಯ ಮಾಡುತ್ತಿದ್ದ ಭೂಮಿಯಲ್ಲಿ ಜೊಂಡು ಸಸ್ಯ ಹಾಗೂ ಹುಲ್ಲು ಬೆಳೆದು ಬಂಜಾರು ಪ್ರದೇಶವಾಗಿ ಪರಿವರ್ತಿತವಾಗಿದೆ, ಕೃಷಿಯನ್ನು ಅವಲಂಬಿಸಿದವರು ನಗರ ಪ್ರದೇಶದತ್ತ ಉದ್ಯೋಗಹರಸಿ ಬರುತ್ತಿದ್ದಾರೆ. ಕೆರೆಯು ಕಲುಷಿತವಾಗಿರುವುದರಿಂದ ಕೊಳವೆ ಬಾವಿಗಳ ನೀರು ಸಹ ಮಿಶ್ರಣಗೊಂಡಿದ್ದು. ಕುಡಿವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಕೆರೆಯಿಂದ ಆಗುತ್ತಿರುವ ದುಷ್ಪರಿಣಾಗಳ ಬಗ್ಗೆ ಹಲವುಬಾರಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮಾನವಿ ನೀಡಲಾಗಿದೆ. ಅದರೆ ಇಲ್ಲಿಯವರಗೆ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.
ಕೆರೆ ಅಭಿವೃದ್ಧಿಗೆ 5 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ನಂತರ ಕೆರೆ ತಂತಿ ಬೇಲಿ. ಹೂಳು ತೆಗೆಯಲು, ಕೆರೆ ಮಧ್ಯದಲ್ಲಿ ಐ ಲ್ಯಾಂಡ್ ನಿರ್ಮಾಣ, ವಾಯುವಿಹಾರಿಗಳಿಗೆ ನಡಿಗೆ ಪಥ ನಿರ್ಮಿಸಲು ಸುಮಾರು 20 ಕೋಟಿಗೂ ಹೆಚ್ಚು ಅನುದಾನ ಅವಶ್ಯಕತೆಯಿದೆ ಇದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು.
-ಜಗನಾಥ್, ಉಪ ವನಪಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.