ಕ್ರೀಡಾಂಗಣದಲ್ಲಿ ಡಾ| ರಾಜೇಶ್ ಭಟ್ ಸಾವು
ಬ್ಯಾಡ್ಮಿಂಟನ್ ಟೂರ್ನಿ ಸಂದರ್ಭ ಹೃದಯಾಘಾತ
Team Udayavani, Jun 23, 2019, 9:31 AM IST
ಮಂಗಳೂರು: ನಗರದ ಹಿರಿಯ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ, ಮಣ್ಣಗುಡ್ಡ ಗಾಂಧಿನಗರದ ಭಟ್ ನರ್ಸಿಂಗ್ ಹೋಮ್‌ನ ಆಡಳಿತ ನಿರ್ದೇಶಕರಾಗಿದ್ದ ಡಾ| ರಾಜೇಶ್ ಟಿ. ಭಟ್ (49) ಅವರು ಜೂ. 22ರಂದು ಬ್ಯಾಡ್ಮಿಂಟನ್ ಆಡಲು ಸಿದ್ಧತೆ ನಡೆಸುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಡಾ| ವೀಣಾ ಭಟ್ ಮತ್ತು ಪುತ್ರನನ್ನು ಅಗಲಿದ್ದಾರೆ.
“ಮಂಗಳೂರು ಪ್ರೀಮಿಯರ್ ಲೀಗ್’ ಬ್ಯಾಡ್ಮಿಂಟನ್ ಟೂರ್ನಿ ನಗರದ ಮಂಗಳಾ ಸ್ಟೇಡಿಯಂ ಬಳಿಯ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಿದ್ದು, ಬೆಳಗ್ಗೆ 7 ಗಂಟೆಗೆ ಶಾಸಕ ಡಾ| ವೈ. ಭರತ್ ಶೆಟ್ಟಿ ಉದ್ಘಾಟಿಸಿದ್ದರು. ಒಟ್ಟು 8 ತಂಡಗಳು ಇದರಲ್ಲಿ ಭಾಗವಹಿಸುತ್ತಿದ್ದು, ಡಾ| ರಾಜೇಶ್ ಟಿ. ಭಟ್ ಅವರು “ಸಿಎಸ್‌ಬಿ’ ಸ್ ಸುಪ್ರೀಂ ಸ್ಕಾ ಡ್ ತಂಡದ ಸದಸ್ಯರಾಗಿದ್ದರು.
ಟೂರ್ನಿ ಉದ್ಘಾಟನೆಗೊಂಡಿದ್ದರೂ ಪಂದ್ಯಾಟ ಆರಂಭವಾಗಿರಲಿಲ್ಲ. “ಸಿಎಸ್‌ಬಿ’ಸ್ ಸುಪ್ರೀಂ ಸ್ಕಾ ಡ್ ತಂಡದ ಡಾ| ರಾಜೇಶ್ ಭಟ್ ಮತ್ತು ಇತರ ತಂಡಗಳ ಸದಸ್ಯರು ಕ್ರೀಡಾಂಗಣದಲ್ಲಿ ಪ್ರಾಕ್ಟೀಸ್‌ನಲ್ಲಿ ತೊಡಗಿದ್ದರು.
ಈ ಸಂದರ್ಭ ಡಾ| ರಾಜೇಶ್ ಡಿ. ಭಟ್ ಅವರು ಎದೆನೋವು ಬರುತ್ತಿದೆ ಎಂದು ಹೇಳಿ ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ಸಿ.ಎಸ್. ಭಂಡಾರಿ ಅವರ ಮೇಲೆ ಕುಸಿದು ಬಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಸಾವನ್ನಪ್ಪಿದ್ದರು. ಅವರ ಹಠಾತ್ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಶನಿವಾರದ ಬ್ಯಾಡ್ಮಿಂಟನ್ ಟೂರ್ನಿಯನ್ನು ರದ್ದುಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.