ನನಸಾದ ನನಸಾದದಶಕಗಳ ದಶಕಗಳ ಕನಸು


Team Udayavani, Jun 23, 2019, 11:54 AM IST

kopala-tdy-1..

ಗಂಗಾವತಿ: ತುಂಗಭದ್ರಾ ನದಿಗೆ ವಿಜಯನಗರದ ಅರಸರು ನಿರ್ಮಿಸಿದ್ದರೆನ್ನಲಾಗುವ 800 ವರ್ಷಗಳ ಹಿಂದಿನ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯಕ್ಕೆ ರಾಜ್ಯ ಸರಕಾರ ಏಷಿಯನ್‌ ಬ್ಯಾಂಕ್‌ ನೆರವಿನೊಂದಿಗೆ 372 ಕೋಟಿ ರೂ. ಮಂಜೂರಿ ಮಾಡಿ ಕಾಮಗಾರಿ ಆರಂಭಿಸಿದೆ. ವಿಜಯನಗರ ಕಾಲುವೆಗಳು ಹೊಸಪೇಟೆ, ಕೊಪ್ಪಳ, ಗಂಗಾವತಿ ಮತ್ತು ಸಿರಗುಪ್ಪಾ ತಾಲೂಕಿನಲ್ಲಿದ್ದು ತುಂಗಭದ್ರಾ ನದಿಗೆ ನೈಸರ್ಗಿಕವಾಗಿ ಅಣೆಕಟ್ಟು ನಿರ್ಮಿಸಿ ನೆಲಮಟ್ಟದಲ್ಲಿ ಕಾಲುವೆಗಳನ್ನು ತೋಡಿ ರೈತರ ಭೂಮಿಗೆ ವಿಜಯನಗರದ ಅರಸರು ನೀರಾವರಿ ವ್ಯವಸ್ಥೆ ಮಾಡಿದ್ದರು. ಅಂದಿನ ಕಾಲದಲ್ಲಿ ಇಲ್ಲಿನ ರೈತರು ತೋಟಗಾರಿಕೆ, ಹೂವು ಮತ್ತು ಗಡ್ಡೆಗಳನ್ನು ಬೆಳೆಯುತ್ತಿದ್ದರು. ಇದರಿಂದಾಗಿ ವಿಜಯನಗರ ಸಾಮ್ರಾಜ್ಯದಲ್ಲಿ ಕೃಷಿ ಕ್ಷೇತ್ರ ಸಮೃದ್ಧವಾಗಿತ್ತು. ಪ್ರೌಢದೇವರಾಯನ ಕಾಲದಲ್ಲಿ ಈ ಅಣೆಕಟ್ಟುಗಳು, ಕೆರೆಗಳು ಮತ್ತು ನೆಲಮಟ್ಟ ಮತ್ತು ಗಂಗಾವತಿ ಮೇಲ್ಮಟ್ಟ, ಕೆಳಮಟ್ಟದ

ಅಣೆಕಟ್ಟು ನಿರ್ಮಿಸಿ ವರ್ಷದ 12 ತಿಂಗಳು ಕಾಲುವೆ ಮೂಲಕ ನೀರಾವರಿಯನ್ನು ಇಂದಿಗೂ ಕಲ್ಪಿಸಲಾಗುತ್ತಿದೆ. ನೀರಾವರಿ ಇಲಾಖೆ ಸರಿಯಾಗಿ ನಿರ್ವಾಹಣೆ ಮಾಡದ ಕಾರಣ ಅಣೆಕಟ್ಟು ಮತ್ತು ಕಾಲುವೆಗಳು ಶಿಥಿಲಗೊಂಡು ನೀರಿನ ಸೋರಿಕೆ ಅಧಿಕವಾಗುಗಿತ್ತು.

ಇಲ್ಲಿಯ ರೈತರು ವಿಜಯನಗರ ಕಾಲುವೆಗಳನ್ನು ದುರಸ್ತಿ ಮಾಡಿಸುವಂತೆ ದಶಕಗಳಿಂದ ಮನವಿ ಮಾಡುತ್ತಿದ್ದರು. 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಸೇರಿ ಕಾಲುವೆಗಳ ವ್ಯಾಪ್ತಿಯ ಶಾಸಕರು ವಿಜಯನಗರ ಕಾಲುವೆಗಳ ದುರಸ್ತಿಗೊಳಿಸಲು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ವಿಜಯನಗರ ಕಾಲುವೆಗಳ ದುರಸ್ತಿ ಮಾಡಲು 500 ಕೋಟಿ ಮಂಜೂರಿ ಮಾಡಲು ನಿರ್ಣಯ ತೆಗೆದುಕೊಂಡಿದ್ದರು.

ಈ ಕಾಲುವೆಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಯುನೆಸ್ಕೋ ಮತ್ತು ನೀರನಾಯಿ ಸಂರಕ್ಷಿತ ಪ್ರದೇಶದಲ್ಲಿ ಬರುವುದರಿಂದ ಕಾಮಗಾರಿಗೆ ಆರ್ಥಿಕ ನೆರವು ನೀಡುವ ಏಷಯನ್‌ ಅಭಿವೃದ್ಧಿ ಬ್ಯಾಂಕ್‌ ಪರಿಸರ ಸಂರಕ್ಷಣೆ ಮಾಡುವ ಜತೆ ಕಾಲುವೆ ಕಾಮಗಾರಿ ಹೇಗೆ ನಿರ್ವಹಿಸಬೇಕೆಂದು ಹಲವು ಭಾರಿ ರೈತರು ಪರಿಸರ ತಜ್ಞರ ಜತೆ ಸಭೆ ನಡೆಸಿ ಸಲಹೆಗಳನ್ನು ಸ್ವೀಕರಿಸಿದ ನಂತರ ಇದೀಗ ಕಾಮಗಾರಿ ನಡೆಸಲು ಅನುಮತಿ ನೀಡಿದೆ. ಈಗಾಗಲೇ ಜಂಗಲ್‌ ಕಟಿಂಗ್‌ ನಡೆಸಿದ್ದು, ಮುಂದಿನ ಡಿಸೆಂಬರ್‌ನಲ್ಲಿ ಪೂರ್ಣಪ್ರಮಾಣದ ಕಾಮಗಾರಿ ನಡೆಯಲಿದೆ. ಪ್ರಸ್ತುತ ಹುಲಿಗಿ-ಶಿವಪೂರ, ಸಾಣಾಪೂರ-ಆನೆಗೊಂದಿ ಮತ್ತು ಗಂಗಾವತಿ ಮೇಲ್ಮಟ್ಟ, ಕೆಳಮಟ್ಟದ ಅಣೆಕಟ್ಟು ನಿರ್ಮಾಣಕ್ಕೆ ತಾಂತ್ರಿಕ ತೊಂದರೆ ಇದ್ದು, ಸರಕಾರ ಇವುಗಳಿಗೆ ಪ್ರತೇಕ ಟೆಂಡರ್‌ ಕರೆಯಲಿದೆ. ಸದ್ಯ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯ ನಡೆಯಲಿದೆ.

 

ವರ್ಷದ 12ತಿಂಗಳು ನೀರಾವರಿ ಕಲ್ಪಿಸುವ ವಿಜಯನಗರ ಕಾಲುವೆಗಳು ಮತ್ತು ಅಣೆಕಟ್ಟುಗಳ ಶಾಶ್ವತ ದುರಸ್ತಿಗಾಗಿ ಒಟ್ಟು 372 ಕೋಟಿ ಮಂಜೂರಾಗಿದೆ. ಕಾಮಗಾರಿಯನ್ನು ಆರ್‌.ಎನ್‌. ಶೆಟ್ಟಿ ಕಂಪನಿ ನಿರ್ವಹಿಸಲಿದೆ. ಸದ್ಯ ಕಾಲುವೆಗಳ ದುರಸ್ತಿ ನಡೆಯಲಿದ್ದು, ಶೀಘ್ರದಲ್ಲೇ ಅಣೆಕಟ್ಟುಗಳ ದುರಸ್ತಿಗೆ ಪ್ರತೇಕ ಟೆಂಡರ್‌ ಕರೆಯಲಾಗುತ್ತದೆ. ಗಂಗಾವತಿ ಭಾಗದಲ್ಲಿ 94 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಡಿಸೆಂಬರ್‌ನಿಂದ ಕೆಲಸ ಆರಂಭವಾಗಲಿದೆ. ರೈತರು ಒಂದು ಬೆಳೆಯನ್ನು ಬಿಡಬೇಕಾಗುತ್ತದೆ. ಮೂಲ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಿ ರೈತರಿಗೆ ಅನುಕೂಲ ಮಾಡಲಾಗುತ್ತದೆ.

ಪರಣ್ಣಮುನವಳ್ಳಿ,ಶಾಸಕರು

 

.ಕೆ.ನಿಂಗಜ

ಟಾಪ್ ನ್ಯೂಸ್

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

2-koppala

Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

5-govt-office

ಕೃಷ್ಣ ನಿಧನ;ಪ್ರಮುಖ‌ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ

1-gangavathi

ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.