ಅರಣ್ಯ ಇಲಾಖೆಯಿಂದ 47,500 ಗಿಡ ನೆಡಲು ಯೋಜನೆ
Team Udayavani, Jun 24, 2019, 5:56 AM IST
ಕುಂದಾಪುರ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛಮೇವ ಜಯತೇ ಆಂದೋಲನ ಮೂಲಕ ತಾಲೂಕಿನ 65 ಗ್ರಾ.ಪಂ.ಗಳು ಈಗಾಗಲೇ ಹಸಿರು ಕರ್ನಾಟಕ ನಿರ್ಮಾಣದತ್ತ ಜವಾಬ್ದಾರಿಯುತ ಹೆಜ್ಜೆ ಇಟ್ಟಿದ್ದು, ತಾಲೂಕಿನಾದ್ಯಂತ ಹಸಿರು ಕ್ರಾಂತಿ ಮೊಳಗಿದೆ.
ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ಗ್ರಾ.ಪಂ., ಶಾಲೆ, ರಸ್ತೆ ಬದಿ ಸಹಿತ ಖಾಲಿ ಸ್ಥಳಗಳಲ್ಲಿ 47,500 ಗಿಡಗಳನ್ನು ನೆಡುವ ಸಲುವಾಗಿ ಹಾಲಾಡಿ ನರ್ಸರಿಯಲ್ಲಿ ಬೆಳೆಸಿದೆ. ಪ್ರತಿ ಗ್ರಾ.ಪಂ. ಗೆ ಬೇಡಿಕೆಗೆ ಅನುಗುಣವಾಗಿ ಅಥವಾ 500 ಗಿಡಗಳಂತೆ ನೀಡಲಾಗುತ್ತಿದ್ದು ತಾಲೂಕಿನ 65 ಗ್ರಾ.ಪಂ.ಗಳಿಗೆ ಗಿಡ ನೆಡುವ ಜವಾಬ್ದಾರಿ ನೀಡಿದೆ.
ಸಸಿಗಳು
ಉದ್ಯೋಗ ಖಾತ್ರಿ ಯೋಜನೆಯಿಂದ ಫಲಾನುಭವಿಗಳಿಗೆ ಅರಣ್ಯ ಗಿಡ ನಾಟಿಗೆಂದು ನೀಡಲಾಗುತ್ತದೆ. ಸಾರ್ವಜನಿಕ ಸಸಿ ವಿತರಣೆಗಾಗಿ (ಆರ್‌ಎಸ್‌ಪಿಡಿ) ಯೋಜನೆ ಮೂಲಕ 18 ಸಾವಿರ ವಿವಿಧ ತಳಿಯ ಸಸ್ಯಗಳು, 6 ಸಾವಿರ ಮರಗಳಾಗುವ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ. ಹಸಿರು ಕರ್ನಾಟಕ ಯೋಜನೆಯಡಿ 23 ಸಾವಿರ ವಿವಿಧ ತಳಿಯ ಗಿಡಗಳು, 500 ಗಂಧದ ಸಸಿಗಳನ್ನು ಬೆಳೆಸಲಾಗಿದೆ. ಆರ್‌ಎಸ್‌ಪಿಡಿಯಲ್ಲಿ 1,047 ಗಂಧದ ಸಸಿಗಳನ್ನು ಬೆಳೆಸಲಾಗಿದೆ.
ಎಸ್‌ಎಎಂಎಫ್ ಯೋಜನೆ
ಸಬ್‌ಮಿಷನ್ ಆನ್ ಆ್ಯಗ್ರೋಫಾರೆಸ್ಟ್ರಿ (ಎಸ್‌ಎಎಂಎಫ್) ಯೋಜನೆ ಮೂಲಕವೂ ಗಿಡಗಳ ನಾಟಿಗೆ ಅವಕಾಶವಿದೆ. 6×9 ಅಳತೆ ಚೀಲದ ಸಸಿಗೆ 1 ರೂ., 8×12 ಅಳತೆ ಚೀಲದ ಸಸಿಗೆ 3 ರೂ. ಪಾವತಿಸಿ ಫಲಾನುಭವಿಗಳು ಗಿಡ ಪಡೆಯಬಹುದು. ಬೌಂಡರಿ ಪ್ಲಾಂಟಿಗ್‌ಗೆ ಪ್ರತಿ ಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 100ರಿಂದ 500ರಂತೆ ಪ್ರತಿಗಿಡಕ್ಕೆ 14 ರೂ., 1 ಹೆಕ್ಟೇರ್‌ನಲ್ಲಿ 500ರಿಂದ 1,000ದಂತೆ ಪ್ರತಿ ಗಿಡಕ್ಕೆ 10 ರೂ., 1 ಹೆಕ್ಟೇರ್‌ನಲ್ಲಿ 1,000ದಿಂದ 1,200ರಂತೆ ಪ್ರತಿ ಗಿಡಕ್ಕೆ 7 ರೂ. ಪ್ರೋತ್ಸಾಹ ಧನ ಲಭ್ಯವಾಗ ಲಿದೆ. ನಿರ್ವಹಣೆ ವೆಚ್ಚವೂ ಸಿಗಲಿದೆ.
ವಿವಿಧ ತಳಿ
ಆರ್‌ಎಸ್‌ಪಿಡಿಯಲ್ಲಿ ನುಗ್ಗೆ, ಸೀತಾಫಲ, ಸಾಗುವಾನಿ, ನೆಲ್ಲಿ, ಹೊನ್ನೆ, ರೈನ್‌ಟ್ರೀ, ಬಿಲ್ವಪತ್ರೆ, ಬಿದಿರು, ಮತ್ತಿ, ಮಹಾಗನಿ, ದಾಳಿಂಬೆ, ಟೋಕೋಮಾ, ಮುರಿಯ, ಕಹಿಬೇವು ಇವುಗಳನ್ನು ಒಟ್ಟು 18 ಸಾವಿರ ಗಿಡಗಳನ್ನು 6×9 ಗಾತ್ರದ ಚೀಲದಲ್ಲಿ, ಮಹಾಗನಿ, ನೇರಳೆ, ಪೇರಳೆ, ಗೇರು, ಟೋಕೋಮಾ, ಶ್ರೀಗಂಧದ 6 ಸಾವಿರ ಗಿಡಗಳನ್ನು 8×12 ಚೀಲದಲ್ಲಿ ಬೆಳೆಸಲಾಗಿದೆ.
ಹಸಿರು ಕರ್ನಾಟಕ ಯೋಜನೆಯಲ್ಲಿ 6×9 ಚೀಲದಲ್ಲಿ ನುಗ್ಗೆ, ಸೀತಾಫಲ, ಸಾಗುವಾನಿ, ನೆಲ್ಲಿ, ಹೊನ್ನೆ, ರೈನ್‌ಟ್ರೀ, ಬಿಲ್ವಪತ್ರೆ, ಬಿದಿರು, ಮತ್ತಿ, ಮಹಾಗನಿ, ದಾಳಿಂಬೆ, ಟೋಕೋಮಾ, ಮುರಿಯ, ಕಹಿಬೇವು, ಬೋರೆ, ಸೀಮಾರೂಬಾ ಜಾತಿಯ ಒಟ್ಟು 23 ಸಾವಿರ ಗಿಡಗಳನ್ನು ಬೆಳೆಸಲಾಗಿದೆ. 14×20 ಗಾತ್ರದ ಚೀಲದಲ್ಲಿ 500 ಶ್ರೀಗಂಧದ ಗಿಡಗಳನ್ನು ಬೆಳೆಸಲಾಗಿದೆ. ಹಸಿರು ಕರ್ನಾಟಕ ಯೋಜನೆಯಲ್ಲಿ ಗಿಡಗಳನ್ನು ಉಚಿತವಾಗಿ ನೀಡಲಾಗಿದೆ.
ಶಾಲಾ ಕಾಲೇಜುಗಳಿಗೆ ಗ್ರಾ.ಪಂ. ಮೂಲಕ ನೀಡಲಾಗಿದೆ. ಈ ಮೂಲಕ ಮಕ್ಕಳಲ್ಲೂ ಹಸಿರು ಕ್ರಾಂತಿ ಚಿಂತನೆ ಬೆಳೆಸಲಾಗಿದೆ. ಹಾಲಾಡಿ ನರ್ಸರಿ ದೂರವಾಯಿತು. ಬಾಡಿಗೆ ತುಂಬ ತೆರಬೇಕಾಗುತ್ತದೆ ಎಂಬ ದೂರುಗಳೂ ಸಾರ್ವಜನಿಕರಿಂದ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.