ಸ್ಥಳೀಯರಿಂದಲೇ ಕಡಲ್ಕೊರೆತ ತಡೆ ಯತ್ನ !

ಮರಳ ಚೀಲ ಪೇರಿಸಿಟ್ಟು ದೈತ್ಯ ಅಲೆಗಳಿಗೆ ಪ್ರತಿರೋಧ

Team Udayavani, Jun 24, 2019, 10:10 AM IST

MARAVANTHE3

ಉಪ್ಪುಂದ: ಮರವಂತೆಯಲ್ಲಿ ಕಡಲು ಕೊರೆತ ತಡೆಗೆ ಕ್ರಮ ಕೈಗೊಳ್ಳುವಂತೆ ಮಾಡಿರುವ ಮನವಿಗಳಿಗೆ ಸರಕಾರ, ಇಲಾಖೆಗಳು ಕಿವಿಗೊಡದ್ದ ರಿಂದ ರೋಸಿಹೋಗಿರುವ ಸ್ಥಳೀಯ ಮೀನುಗಾರರು ಸ್ವತಃ ಮರಳು ತುಂಬಿದ ಚೀಲಗಳನ್ನು ಪೇರಿಸಿಟ್ಟು ಅಲೆಗಳನ್ನು ತಡೆಯುವ ಸಾಹಸಕ್ಕೆ ಕೈಹಾಕಿದ್ದಾರೆ.

ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಕೇರಳ ಮಾದರಿಯ ಔಟ್‌ ಡೋರ್‌ ಬಂದರು ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ನಡುವೆ ಉತ್ತರ ಮತ್ತು ದಕ್ಷಿಣದ ತಡೆಗೋಡೆಯ ಮಧ್ಯ ಭಾಗದಲ್ಲಿ ಗಾಳಿಯ ಒತ್ತಡ ಅಧಿಕಗೊಂಡು ಕಡಲಿನ ಆರ್ಭಟ ಹೆಚ್ಚುತ್ತಿದೆ. ಕಳೆದ ಮಳೆಗಾಲದಿಂದೀಚೆಗೆ ಬುದ್ಧಿವಂತರ ಮನೆ ಮಂಜುನಾಥ, ಬಬ್ಬರ್ಯ ಕೋಡಿ ಮನೆ ರಾಮಚಂದ್ರ, ದೇವಿ, ಸುಬ್ರಹ್ಮಣ್ಯ, ಅಣ್ಣಪ್ಪ, ಸುಕ್ರ ಅವರ ಮನೆಯ ಅಂಗಳಕ್ಕೆ ನೀರು ನುಗ್ಗುತ್ತಿದೆ. ಸರಕಾರವನ್ನು ನಂಬಿ ಕೂತರೆ ಈ ಮಳೆಗಾಲದಲ್ಲಿ ಆಸ್ತಿಪಾಸ್ತಿ ಉಳಿಸಿಕೊಳ್ಳಲು ಸಾಧ್ಯವಾಗದು ಎಂದು ನಿರ್ಧರಿಸಿ ತಾವೇ ಕ್ರಮಕ್ಕೆ ಮುಂದಾಗಿದ್ದಾರೆ. 10 ಲಕ್ಷ ರೂ. ವೆಚ್ಚದಲ್ಲಿ 100ರಿಂದ 500 ಕಿಲೋ ಸಾಮರ್ಥ್ಯದ 1 ಸಾವಿರ  ದೊಡ್ಡ ಚೀಲ ಗಳಲ್ಲಿ ಮರಳು ತುಂಬಿ 120 ಮೀ. ದೂರದ ವರೆಗೆ ಇರಿಸಿ ಅಲೆಗಳು ಅಂಗಳಕ್ಕೇರದಂತೆ ತಡೆಯಲು ಯತ್ನಿಸಿದ್ದಾರೆ.

ಭರವಸೆಯಲ್ಲೇ ಉಳಿದ ಜಾಗ
ಕಳೆದ ಬಾರಿ ಅಲೆಗಳ ಹೊಡೆತಕ್ಕೆ ಮೀನುಗಾರರ 6 ಮನೆಗಳು ಸಂಪೂರ್ಣ ಜಖಂಗೊಂಡಿದ್ದವು. ಸ್ಥಳಕ್ಕಾಗಮಿಸಿದ್ದ ಮೀನುಗಾರಿಕೆ ಸಚಿವ ವೆಂಕಟರಾವ್‌
ನಾಡ ಗೌಡ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಸಂತ್ರಸ್ತ ರಿಗೆ ಪರ್ಯಾಯ ಜಾಗ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಮರವಂತೆಯ ಗಾಂಧಿನಗರದ ಸರ್ವೆ ನಂಬ್ರ 57ಎಯಲ್ಲಿ ಪಂಚಾಯತ್‌ ಜಾಗ ಇದ್ದು, ಅದನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ ಕಾರ್ಯಗತಗೊಂಡಿಲ್ಲ.

ಮರಳು ಚೀಲದ ತಡೆಗೋಡೆ
ಇಲ್ಲಿ ಸುಮಾರು 400 ಮೀ. ಉದ್ದಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಅಲೆಗಳ ಹೊಡೆತಕ್ಕೆ ಕಲ್ಲುಗಳು ಕಡಲಾಳ ಸೇರುತ್ತಿವೆ. ಬೇಸಗೆಯಲ್ಲೂ ಕಂಡು ಬಂದಿದ್ದ ಕೊರೆತ ಈಗ ತೀವ್ರ ಸ್ವರೂಪದಲ್ಲಿದ್ದು, ತೀರ ಪ್ರದೇಶದ ರಸ್ತೆ, ಮನೆ, ತೆಂಗಿನ ಮರಗಳು, ಮೀನುಗಾರಿಕೆ ಶೆಡ್‌ಗಳು ಅಪಾಯದಲ್ಲಿವೆ.

ಶಾಶ್ವತ ಯೋಜನೆಗಿಲ್ಲ ಅನುದಾನ
ತಡೆಗೋಡೆ ಅವೈಜ್ಞಾನಿಕವಾಗಿರುವುದರಿಂದ ಒಳ ಭಾಗದಿಂದ ಮರಳು ಕೊಚ್ಚಿ ಹೋಗುತ್ತಿದೆ. ತಡೆಗೋಡೆ ನೆಲಮಟ್ಟದಿಂದ 2 ಅಡಿ ಕೆಳಗಡೆ ಇರುವುದರಿಂದ ಅಲೆಗಳು ಮೇಲೇರಿ ಬರುತ್ತಿವೆ. 2 ಮೀ. ಎತ್ತರದ ಗೋಡೆ  ನಿರ್ಮಿಸುವ ಚಿಂತನೆ ಇದೆ. ಮೀನುಗಾರಿಕೆ ಸ. ಎಂಜಿನಿ ಯರ್‌ 50 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿದ್ದು, ಕೂಡಲೇ ಕಾರ್ಯಗತಗೊಳಿಸುವಂತೆ ಮೀನುಗಾರರು ಮನವಿ ಮಾಡುತ್ತಿದ್ದಾರೆ. ಆದರೆ ಇಲಾಖಾಧಿಕಾರಿಗಳು ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ಹಣ ಬಿಡುಗಡೆ ಮಾಡಿ
ಅಪಾಯದಲ್ಲಿರುವ ಮೀನು ಗಾರರಿಗೆ ಪರ್ಯಾಯ ನಿವೇಶನ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಜಾಗ ಮಂಜೂರಾಗಿಲ್ಲ. ಹೊರ ಬಂದರು ಕಾಮಗಾರಿಯನ್ನು ಶೀಘ್ರ ಪೂರ್ಣ ಗೊಳಿಸಬೇಕು. ಪ್ರಸ್ತುತ ಮೀನುಗಾರರು ತಮ್ಮ ಹಣದಿಂದ ಮರಳು ತುಂಬಿದ ಚೀಲಗಳನ್ನಿಟ್ಟು ತಾತ್ಕಾಲಿಕ ರಕ್ಷಣೆ ಮಾಡಿಕೊಂಡಿದ್ದಾರೆ. ಶಾಶ್ವತ ಯೋಜನೆಗೆ ಸರಕಾರ ಕೂಡಲೇ ಹಣ ಬಿಡುಗಡೆ ಮಾಡಲಿ.
– ಮೋಹನ ಖಾರ್ವಿ,ಮೀನುಗಾರರ ಮುಖಂಡ

ಕೃಷ್ಣ ಬಿಜೂರು

ಟಾಪ್ ನ್ಯೂಸ್

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

byndoor

Udupi: ಬೈಕಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

24-tma-pai

Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ

12(2)

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

11

Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

byndoor

Udupi: ಬೈಕಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.