ಮಿಷನ್ ವಾರಿಯರ್ಸ್‌ನಿಂದ ಹಸಿರೀಕರಣಕ್ಕೆ ಪಣ
ಪ್ರಜ್ಞಾವಂತರಿಂದ 10 ಸಾವಿರ ಸಸಿ ನೆಡುವ ಕಾರ್ಯ
Team Udayavani, Jun 24, 2019, 1:31 PM IST
ಕಲಬುರಗಿ: 10 ಸಾವಿರ ಸಸಿ ನೆಡುವ ಗುರಿಯೊಂದಿರುವ 'ಮಿಷನ್ 10ಕೆ ವಾರಿಯರ್ಸ್' ತಂಡದ ಸದಸ್ಯರು.
ರಂಗಪ್ಪ ಗಧಾರ
ಕಲಬುರಗಿ: ಗುಲಬರ್ಗಾ ಅಥವಾ ಕಲಬುರಗಿ ಎಂದಾಕ್ಷಣ ನೆನಪಿಗೆ
ಬರುವುದೇ ರಣಬಿಸಿಲು. ಇತ್ತೀಚೆಯ ವರ್ಷಗಳಲ್ಲಿ ಮಳೆ ಅಭಾವ,
ಭೀಕರ ತಾಪಮಾನದಿಂದ ಧರೆಯೇ ಬೆಂಕಿಯುಂಡೆಯಂತೆ ಆಗಿದೆ.
ಇದಕ್ಕೆ ಪರಿಹಾರ ಕಂಡುಕೊಳ್ಳಲು ಯುವಕರ ಪಡೆಯೊಂದು ಬರದ ನಾಡಿನಲ್ಲಿ ಹಸಿರು ಕ್ರಾಂತಿ ಮಾಡುತ್ತಿದೆ.
ಸತತ ಮೂರು ವರ್ಷಗಳಿಂದ ಮಳೆಯಾಗದೇ ಭಯಂಕರ ಬರ
ಹಾಗೂ ಕುಡಿಯುವ ನೀರಿಗೆ ಪ್ರತಿಯೊಬ್ಬರೂ ತತ್ತರಿಸಿದ್ದೇವೆ. ಎಲ್ಲಿ
ನೋಡಿದರೂ ಬಟಾಬಯಲೇ ಕಾಣುತ್ತಿದೆ. ಇದರಿಂದ ಹೊರಬರಲು ಹಸಿರು ಯೋಜನೆಯೇ ಪರಿಹಾರ. ಇದನ್ನು ಮನಗಂಡ ಪ್ರಜ್ಞಾವಂತ ಯುವಕರು ಜೊತೆಗೂಡಿ 10 ಸಾವಿರ ಗಿಡಗಳನ್ನು ಬೆಳೆಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ನಗರ ಹೊರ ವಲಯದ ಶರಣ ಸಿರಸಗಿ ಗ್ರಾಮದ ಬಳಿಯಿರುವ
ಭೂಮಾಪನ ತರಬೇತಿ ಕೇಂದ್ರದ ಸಮೀಪದ ವಿಶಾಲವಾದ 22 ಎಕರೆ ಭೂಪ್ರದೇಶದಲ್ಲಿ ಯುವಕರ ತಂಡ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಕಾಡು ಬೆಳೆಸುತ್ತಿದೆ. ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ ಅವರು ಯುವಕರ ಹಸಿರು ಪ್ರೀತಿ ಮೆಚ್ಚಿ ಈ ಭೂಮಿಯನ್ನು ಪ್ರಯೋಗಕ್ಕೆ ನೀಡಿದ್ದಾರೆ. ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ನೀರುಣಿಸಲಾಗುತ್ತಿದ್ದು, ಇದೇ ಪ್ರದೇಶದಲ್ಲಿ 10 ಸಾವಿರ ಮರ-ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಅಲ್ಲದೇ, ನಗರದ ವಿವಿಧ ಬಡಾವಣೆಯಲ್ಲೂ ಗಿಡ-ಮರಗಳನ್ನು ನೆಡುವ ಉದ್ದೇಶ, ಗುರಿ ತಂಡಕ್ಕಿದೆ.
ಮಿಷನ್ 10ಕೆ ವಾರಿಯರ್ಸ್: ಗಿಡಗಳನ್ನು ನೆಟ್ಟು ಪರಿಸರವನ್ನು
ಉಳಿಸಿದಾಗ ಮಾತ್ರ ನಮ್ಮ ಮುಂದಿನ ಪೀಳಿಗೆ ಉಳಿಯಲು ಸಾಧ್ಯ.
ಈ ನಿಟ್ಟಿನಲ್ಲಿ ಈಗಾಲೇ ಪ್ರತಿಯೊಬ್ಬರು ಕಾರ್ಯೋನ್ಮುಖರಾಗಬೇಕಿದೆ ಎನ್ನುವ ತಂಡದ ಸದಸ್ಯರು, 10 ಸಾವಿರ ಸಸಿಗಳನ್ನು ನೆಡುವ ತಮ್ಮ ಕಾರ್ಯಕ್ಕೆ “ಮಿಷನ್ 10ಕೆ ವಾರಿಯರ್ಸ್’ ಎಂಬ ಹೆಸರಿಟ್ಟುಕೊಂಡಿದ್ದಾರೆ.
ಅರಣ್ಯ ಇಲಾಖೆಯಿಂದ ಪ್ರತಿ ಸಸಿಗೆ ಮೂರು ರೂ. ನೀಡಿ ಖರೀದಿಸಲಾಗಿದೆ. ಗಿಡ ನೆಡಲು ನಿತ್ಯವೂ ಶ್ರಮದಾನ ನಡೆಯುತ್ತಿದೆ.
ಜೆಸಿಬಿ ಸಹಾಯದಿಂದ ಗುಂಡಿ ತೋಡಿಸಿ, ಗಿಡ ನೆಟ್ಟು ನೀರು ಹರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಸಿಗಳ ಆಯ್ಕೆಯಲ್ಲಿ ಯುವಕರು ಜಾಣ್ಮೆ ತೋರುತ್ತಿದ್ದಾರೆ. ಪರಿಸರಕ್ಕೆ ಹೊಂದಿಕೊಳ್ಳುವ ಮತ್ತು ಅಲ್ಪ ನೀರು ಬಯಸುವ ಸಸಿಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಬಿಡುವಿನಲ್ಲಿ ಯುವತಿಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಸಿರು ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಬರ, ನೀರಿನ ಅಭಾವ ಸೃಷ್ಟಿಯಾಗುವ ಆತಂಕ ಇದೆ. ಇಂತಹ ಭೀತಿಯಿಂದ ಹೊರಬರಲು
ಹಸಿರೀಕರಣವೊಂದೇ ಪರಿಹಾರ ಮಾರ್ಗ. ಪ್ರಕೃತಿ ಉಳಿಸಲು ಗಿಡ
ನೆಡುವ ಮಹತ್ವದ ಕಾರ್ಯ ಆಗಬೇಕಾಗಿದೆ. ನಗರ ಹೊಸತನದಿಂದ
ಕಂಗೊಳಿಸುವಂತಾಗಬೇಕು ಎನ್ನುತ್ತಾರೆ ತಂಡದ ಪ್ರಮುಖ ಡಾ| ನಾಗನಾಥ ಯಾದಗಿರಿ.
3ನೇ ವರ್ಷದ ಕಾರ್ಯ: ನಗರದಲ್ಲಿ ಹಸಿರು ವಾತಾವರಣ ಆವರಿಸಬೇಕೆಂದು ಕಳೆದ ಮೂರು ವರ್ಷಗಳಿಂದ ಈ ಯುವಕರ
ತಂಡ ಶ್ರಮಿಸುತ್ತಿದೆ. ಮೊದಲ ವರ್ಷ ನಗರದ ವಿವಿಧ ಬಡಾವಣೆಗಳಲ್ಲಿ ಒಂದು ಸಾವಿರ ಸಸಿಗಳನ್ನು ನೆಡಲಾಗಿತ್ತು. ಆ ವರ್ಷ ಅಷ್ಟೊಂದು ಸಫಲವಾಗಿರಲಿಲ್ಲ. ಆದರೂ ಕುಗ್ಗದೆ ಎರಡನೇ ವರ್ಷ 1,400 ಗಿಡಗಳನ್ನು ನೆಟ್ಟಿರುವ ಯುವಕರು ಇದರಲ್ಲಿ ಶೇ.80ರಷ್ಟು ಯಶಸ್ಸು ಕಂಡಿದ್ದಾರೆ. ಹಲವು ಬಡಾವಣೆಗಳಲ್ಲಿ 8ರಿಂದ 10 ಅಡಿಯಷ್ಟು ಎತ್ತರಕ್ಕೆ ಗಿಡಗಳು ಬೆಳೆದು ನಿಂತಿವೆ. ಹಸಿರು ಕಾರ್ಯಕ್ಕೆ ವೇಗದ ಅಗತ್ಯತೆ ಅರಿತು ಈ ವರ್ಷ 10 ಸಾವಿರ ಗಿಡಗಳನ್ನು ನೆಡುವ ಗುರಿಯೊಂದಿಗೆ ಈ ತಂಡ ಮುನ್ನಡೆಯುತ್ತಿದೆ. ಬಡಾವಣೆಗಳಲ್ಲಿ ನೆಡುವ ಗಿಡಗಳನ್ನು ರಕ್ಷಿಸುವ ಜವಾಬ್ದಾರಿ ಅಲ್ಲಿನ ನಿವಾಸಿಗಳಿಗೆ ವಹಿಸಲಾಗುತ್ತಿದೆ. ಯಾರು ಗಿಡಗಳನ್ನು ಪೋಷಿಸುತ್ತೇವೆ ಎನ್ನುತ್ತಾರೋ ಅಂತಹವರ ಮನೆಗಳ
ಮುಂದೆ ಸಸಿಗಳನ್ನು ನೆಡಲು ಯುವ ಪಡೆ ಸನ್ನದ್ಧವಾಗಿದೆ.
ಭಿನ್ನ ಹಿನ್ನೆಲೆಯ ವಾರಿಯರ್ಸ್
‘ಮಿಷನ್ 10ಕೆ ವಾರಿಯರ್ಸ್’ ತಂಡದ ಸದಸ್ಯರು ಭಿನ್ನ ನೆಲೆ, ವಿಭಿನ್ನ ಉದ್ಯೋಗ ಹೊಂದಿದ್ದರೂ ಗುರಿ ಮಾತ್ರ ಹಸಿರೀಕರಣವೇ. ತಂಡದಲ್ಲಿ ಸರ್ಕಾರಿ ನೌಕರರು, ಬ್ಯಾಂಕ್ ನೌಕರರು, ವೈದ್ಯರು, ಮೆಡಿಕಲ್ ರೆಪ್ರಸೆಂಟೇಟಿವ್ ಗಳು, ವಿದ್ಯಾರ್ಥಿಗಳು ಇದ್ದಾರೆ. ಆಗಾಗ ಯೋಧರು, ಟೆಕ್ಕಿಗಳು ಸಹ ತಂಡದ ಭಾಗಿದಾರರು ಆಗುತ್ತಾರೆ.!
ಡಾ| ನಾಗನಾಥ ಯಾದಗಿರಿ, ಡಾ| ಶರಣೇಂದ್ರ ಪಾಗಾ, ಗುರುಭೀಮ ಬೂದಿ, ನಾಗರಾಜ ನಾಲವಾರ, ಅನಿಲ ತಂಬಾಕೆ, ಬಸವ ರೆಡ್ಡಿ, ಮಹಾಂತೇಶ, ಮಹಾದೇವನ್ ಶಾಸ್ತ್ರಿ, ವರ್ಧಮಾನ್, ಅಮಿತ್ ತಂಬೆ, ಪ್ರಭು ಪಾಟೀಲ, ಅನ್ವೀರ್ ಕಲಬುರಗಿ, ಲಕ್ಷ್ಮೀಕಾಂತ ಜೋಳದ್, ಅವಿನಾಶ ಕುಲಕರ್ಣಿ ಸೇರಿ ಹಲವರು ತಂಡದ ಕಾಯಂ ಸದಸ್ಯರು ತಮ್ಮ ಶ್ರಮದಾನ, ಕ್ಷೇತ್ರಕಾರ್ಯದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ, ಪರಿಸರದ ಕಾಳಜಿ ಮೂಡಿಸುತ್ತಿದ್ದಾರೆ. ಇದರಿಂದ ಪ್ರೇರಣೆಗೊಂಡ ಬೇರೆ-ಬೇರೆ
ಸ್ಥಳಗಳಲ್ಲಿ ವಾಸವಿರುವ ಸಮಾನ ಮನಸ್ಕರು ಕಲಬುರಗಿಗೆ
ಬಂದಾಗ ತಂಡದ ಕಾರ್ಯಕ್ಕೆ ಸಹಕಾರ ನೀಡುತ್ತಾರೆ. ಮೇಘಾಲಯ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಆರ್‌ಪಿಎಫ್ ಯೋಧ ಎಚ್. ಪೂಜಾರಿ ಇತ್ತೀಚೆಗೆ ಊರಿಗೆ ಬಂದಾಗ ಎರಡು ದಿನಗಳ ಕಾಲ ತಂಡದ ಸದಸ್ಯರೊಂದಿಗೆ ಸೇರಿ ಗಡಿಗಳನ್ನು ನೆಟ್ಟು ನೀರುಣಿಸಿದ್ದಾರೆ.
ಪರಿಸರ ಉಳಿಸುವ ಮತ್ತು ಬೆಳೆಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಇದಕ್ಕಾಗಿ ನಮ್ಮ ತಂಡದೊಂದಿಗೆ ಪ್ರತಿಯೊಬ್ಬರು ಕೈಜೋಡಿಸಬಹುದು. ಸಸಿಗಳು ನಿಮ್ಮಲ್ಲಿ (ನಾಗರಿಕರು) ಇದ್ದರೂ ನಾವೇ ಬಂದು ನೆಟ್ಟು ಹೋಗುತ್ತೇವೆ. ಡಾ| ನಾಗನಾಥ ಯಾದಗಿರಿ,
ಮಿಷನ್ 10ಕೆ ವಾರಿಯರ್ಸ್ (ಮೊ.ಸಂ. 9742850007).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.