ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಶರಣೆ ಅಕ್ಕನಾಗಮ್ಮ ಪಾತ್ರ ಹಿರಿದು
ಸಾಮಾಜಿಕ ಪರಿವರ್ತನೆಯಲ್ಲಿ ಶರಣೆಯರು ವಹಿಸಿದ ಪಾತ್ರ ನಮಗೆಲ್ಲ ದಾರಿದೀಪ
Team Udayavani, Jun 24, 2019, 5:03 PM IST
ಚಿಕ್ಕಮಗಳೂರು: ಶ್ರೀ ಸೋಮೇಶ್ವರ ಕನ್ವೆನ್ಷನ್‌ಹಾಲ್ನಲ್ಲಿ ಏರ್ಪಡಿಸಿದ್ದ ಕಾರಹುಣ್ಣಿಮೆ ಸಮಾರಂಭವನ್ನು ನಾಗರತ್ನ ಸೋಮಶೇಖರ್ ಉದ್ಘಾಟಿಸಿದರು.
ಚಿಕ್ಕಮಗಳೂರು: ವಚನ ಸಾಹಿತ್ಯ ಸಂರಕ್ಷಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಶರಣೆ ಅಕ್ಕನಾಗಮ್ಮ ಧಿಧೀರಮಹಿಳೆ ಎಂದು ಶಿವಮೊಗ್ಗದ ಚೈತನ್ಯಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಸೋಮಶೇಖರ್ ಹೇಳಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ವಿಜಯಪುರ ಬಡಾವಣೆಯ ಶರಣೆ ಅಕ್ಕನಾಗಲಾಂಬಿಕೆ ತಂಡ ನಗರದ ಶ್ರೀಸೋಮೇಶ್ವರ ಕನ್ವೆನ್ಷನ್‌ಹಾಲ್ನಲ್ಲಿ ಏರ್ಪಡಿಸಿದ್ದ ಕಾರಹುಣ್ಣಿಮೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. 12ನೆಯ ಶತಮಾನದಲ್ಲೆ ಶರಣಕ್ರಾಂತಿಯ ಸಂದರ್ಭ ಮಹಿಳೆಯರಿಗೆ ಸಮಾನತೆ ಕಲ್ಪಿಸಲಾಗಿತ್ತು. ಅನುಭವ ಮಂಟಪದ ವೈಚಾರಿಕ ಬೆಳವಣಿಗೆ ಕಾಯಕನಿಷ್ಠೆಯಲ್ಲಿ ಅಕ್ಕ, ಮುಕ್ತಾಯಕ್ಕ, ಸತ್ಯಕ್ಕ ಲಕ್ಕಮ್ಮ, ನಾಗಲಾಂಬಿಕೆ ಸೇರಿದಂತೆ ಹಲವು ಶರಣೆಯರು ಮುಂಚೂಣಿಯಲ್ಲಿದ್ದರು ಎಂದರು.
ಕಲ್ಯಾಣಕ್ರಾಂತಿಯ ನಂತರ ಶರಣ ಸಮೂಹ ದಿಕ್ಕೆಟ್ಟಾಗ ಧೀರ ಮಹಿಳೆ ಅಕ್ಕನಾಗಲಾಂಬಿಕೆ ವಚನಸಾಹಿತ್ಯವನ್ನು ಓಲೆಗರಿಗಳ ಕಟ್ಟುಗಳನ್ನು ಶರಣತಂಡದೊಂದಿಗೆ ಹೊರಗೆಸಾಗಿಸಿದ್ದು, ಮಹತ್ವದಕಾರ್ಯ. ದಟ್ಟಅರಣ್ಯದ ಉಳುವಿಯತ್ತ ಸಾಗಿದ ಈಕೆಯ ತಂಡ ನಂತರ ಜಿಲ್ಲೆಯ ತರೀಕೆರೆಯ ಎಣ್ಣೆಹೊಳೆ ಮಠಕ್ಕೆ ಬಂದು ತಂಗಿ ಇಲ್ಲೆ ಐಕ್ಯವಾದ ಐತಿಹ್ಯವಿದೆ. ಅಂದು ಅಕ್ಕನಾಗಲಾಂಬಿಕೆ ಧೈರ್ಯಸ್ಥೈರ್ಯಗಳಿಂದ ಸಮಯೋಜಿತವಾಗಿ ಆಲೋಚಿಸಿ ಶರಣರ ಸಾಹಿತ್ಯವ ಸಂರಕ್ಷಿಸಿ ಹೊರತರದಿದ್ದರೆ ಅಪೂರ್ವ ಅನುಭವದ ಗಣಿಯಾದ ವಚನಗಳು ನಮಗೆ ಸಿಗುವುದು ಕಷ್ಟವಾಗುತ್ತಿತ್ತು ಎಂದರು.
ಅಕ್ಕನಾಗಲಾಂಬಿಕೆ ಬಸವಣ್ಣನವರ ಅಕ್ಕ. ಒಂದುರೀತಿಯಲ್ಲಿ ಬಸವಣ್ಣನವರು ಸೇರಿದಂತೆ ಹಲವು ಶರಣೆಯರ ಸ್ಫೂರ್ತಿಯ ಸೆಲೆ. ಈಕೆಯ ಮಗ ಚನ್ನಬಸವಣ್ಣ ಬೆಳಗಿನ ವಚನಗಳ ಮೂಲಕ ತನ್ನದೇ ಛಾಪು ಮೂಡಿದ್ದಾರೆ ಎಂದ ನಾಗರತ್ನ, ಅಂದು ಶರಣೆಯರು ಸಾಮಾಜಿಕ ಪರಿವರ್ತನೆಯಲ್ಲಿ ವಹಿಸಿದ ಪಾತ್ರ ನಮಗೆಲ್ಲ ದಾರಿದೀಪ ಎಂದು ಹೇಳಿದರು.
ಮಹಿಳೆಯರು ಇಂದು ಅಡುಗೆ ಮನೆಯಲ್ಲೇ ಕುಳಿತು ಕಾಲಕಳೆಯುವ ಸಮಯ ಎಂದೋ ಮುಗಿದು ಹೋಗಿದೆ. ನೇವಿ, ಲ್ಯಾಂಡ್‌ಆರ್ಮಿ, ಅಂತರಿಕ್ಷಾಯಾನದಲ್ಲೂ ಹೆಣ್ಣುಮಕ್ಕಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೈಗಾರಿಕೆ, ಉದ್ಯಮ, ವ್ಯಾಪಾರದಲ್ಲೂ ಮಹಿಳೆ ನೈಪುಣ್ಯತೆ ತೋರುತ್ತಿರುವುದು ನಿಸರ್ಗದ ಕೊಡುಗೆ ಎಂದರು. ಅಕ್ಕಮಹಾದೇವಿ ಮಹಿಳಾ ಸಂಘದಅಧ್ಯಕ್ಷೆ ಗೌರಮ್ಮಬಸವೇಗೌಡ ಮಾತನಾಡಿ, ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಕಾರ್ಯಗಳಲ್ಲಿ ಸಾಧ್ಯವಾದಷ್ಟು ಕೈಜೋಡಿಸುವ ಮೂಲಕ ಸಮಾಜದಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದರು.
ಅಕ್ಕನಾಗಲಾಂಬಿಕೆ ತಂಡದ ಮುಖ್ಯಸ್ಥೆ ಪಾರ್ವತಿ ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಿಲೋಕೇಶ್ ಸ್ವಾಗತಿಸಿದರು. ಸುಮಿತ್ರಾ ಶಾಸ್ತ್ರಿ ಪರಿಚಯಿಸಿದರು. ರೇಣುಕಾಕುಮಾರ್ ನಿರೂಪಿಸಿದರು. ಲಲಿತಾನಾಗರಾಜ್ ವಂದಿಸಿದರು. ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್, ಖಜಾಂಚಿ ಯಮುನಾ ಸಿ.ಶೆಟ್ಟಿ, ಕಾರ್ಯದರ್ಶಿ ರೇಖಾ ಉಮಾಶಂಕರ್, ಪದಾಧಿಕಾರಿಗಳಾದ ಭಾರತಿ ಶಿವರುದ್ರಪ್ಪ, ನಾಗಮಣಿ, ಪಾರ್ವತಿ ಬಸವರಾಜ್ ಇದ್ದರು.
ಅನುರಾಧರೇಣುಕ ಮತ್ತು ಮಂಜುಳಾ ಯೋಗೀಶ್ ಅವರು ಶಿವನ ಭಕ್ತಿಗೀತೆ, ಸುಧಾ ರಾಜಶೇಖರ್ ಹಾಗೂ ವನಜಾಕ್ಷಿ ವಚನಗಾಯನ. ಸವಿತಾ ಮತ್ತು ಸರಳದೇವರಾಜ್ ತಂಡ ಜಾನಪದ ನೃತ್ಯ ಗಮನಸೆಳೆಯಿತು. ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.