ಕೊನೆಗೂ ನೀವು ನಗದೇ ಇದ್ದರೆ…

ಬಾರೋ ಸಾಧನೆಕೇರಿಗೆ

Team Udayavani, Jun 25, 2019, 5:00 AM IST

3

ಜಾನ್‌ ಆಬರ್‌ನೆತಿ, 18ನೇ ಶತಮಾನದಲ್ಲಿದ್ದ ಪ್ರಸಿದ್ಧ ಬ್ರಿಟಿಷ್‌ ವೈದ್ಯ. ಸರ್ಜನ್‌ ಆಗಿ, ವೈದ್ಯ ಶಿಕ್ಷಕನಾಗಿ ಆಬರ್‌ನೆತಿ ಹೆಸರು ಮಾಡಿದ್ದ. ವೈದ್ಯನಾಗಿ ಅವನದು ಸ್ವಲ್ಪ ಮುಂಗೋಪದ ಸ್ವಭಾವ. ಯಾವ ಕ್ಷಣದಲ್ಲಿ ರೋಗಿಯ ಮೇಲೆ ಹೇಗೆ ಹರಿಹಾಯುತ್ತಾನೆ ಅಂತ ಹೇಳುವಂತಿರಲಿಲ್ಲ. ಒಮ್ಮೆ ಇವನ ಕೆಟ್ಟ ಬಾಯಿಂದ ಕುಪಿತನಾದ ರೋಗಿಯೊಬ್ಬ, “ನೀವು ಹೇಳಿದ ಮಾತನ್ನೆಲ್ಲ ನೀವೇ ನುಂಗುವ ಹಾಗೆ ಮಾಡುತ್ತೇನೆ’ ಎಂದು ಕೂಗಿಹೇಳಿದಾಗ ಆಬರ್‌ನೆತಿ ಹೇಳಿದ್ದು: “ಪ್ರಯೋಜನಲ್ಲ. ನುಂಗಿದ ಮರುಕ್ಷಣದಲ್ಲೇ ಅವು ಬಾಯಿಂದ ಹೊರ ಹಾರುತ್ತವೆ’.

ಇಂಥ ಆಬರ್‌ನೆತಿಗೆ ಒಂದು ದಿನ ಒಬ್ಬ ರೋಗಿ ಸಿಕ್ಕಿದ. “ಏನು ಕಾಯಿಲೆ?’. “ಡಾಕ್ಟರ್‌, ದೈಹಿಕವಾದ ಕಾಯಿಲೆ ಏನೂ ಇಲ್ಲ. ನನಗೆ ವಿಪರೀತ ಖನ್ನತೆ ಕಾಡುತ್ತಿದೆ. ಜೀವನ ಬೇಸರವಾಗಿದೆ. ಯಾವೊಂದು ಸಂಗತಿಯೂ ರುಚಿಸುತ್ತಿಲ್ಲ. ಬೇಸರದಿಂದ ಬಾಡಿ ಬಳಲಿ ಹೋಗಿದ್ದೇನೆ. ಏನಾದರೂ ಮದ್ದು ಕೊಡಿ’.

ರೋಗಿಯ ಮುಖವನ್ನೂ, ಅವನ ಒಟ್ಟು ಪರಿಸ್ಥಿತಿಯನ್ನೂ ಕಂಡು ಆಬರ್‌ನೆತಿಯಂಥ ಆಬರ್‌ನೆತಿಯ ಮನಸ್ಸು ಕೂಡ ಕರಗಿ ನೀರಾಗಿ ಹರಿಯಿತು! “ನೋಡಿ ಇವರೇ, ನಿಮಗೆ ಸದ್ಯಕ್ಕೆ ಬೇಕಿರುವುದು ಮನಸ್ಸಮಾಧಾನ. ಹೃದಯ ಹಗುರವಾಗಬೇಕಿದೆ. ಒಳಗಿನ ದುಃಖವನ್ನೆಲ್ಲ ಹೊರಹಾಕಬೇಕಿದೆ. ನೀವೊಂದು ಕೆಲಸ ಮಾಡಿ. ಗ್ರಿಮಾಲ್ಡಿ ಅನ್ನೋ ಕಲಾವಿದ ಇದ್ದಾನೆ. ಪ್ರೇಕ್ಷಕರನ್ನು ಭರ್ಜರಿಯಾಗಿ ನಗಿಸುತ್ತಾನೆ. ಅವನ ಒಂದೆರಡು ಶೋಗಳಲ್ಲಿ ಪ್ರೇಕ್ಷಕನಾಗಿ ಕೂತು ಬನ್ನಿ. ಆಮೇಲೂ ನಿಮ್ಮ ಖನ್ನತೆ ಹಾಗೇ ಇದ್ದರೆ ಮದ್ದು ಕೊಡೋಣಂತೆ’ ಎಂದ ಆಬರ್‌ನೆತಿ.

ರೋಗಿ ಮುಖವನ್ನು ಇನ್ನಷ್ಟು ಕುಗ್ಗಿಸಿ ಹೇಳಿದ, “ಡಾಕ್ಟರ್‌, ನಾನೇ ಆ ಗ್ರಿಮಾಲ್ಡಿ’!

ಟಾಪ್ ನ್ಯೂಸ್

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Arrest

Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ

1

Brahmavara: ಉದ್ಯೋಗ ಭರವಸೆ ನೀಡಿ ಹಣ ವಂಚನೆ

12

Manipal: ರೈಲಿನಲ್ಲಿ ಲಕ್ಷಾಂತರ ರೂ. ಒಡವೆ ಕಳ್ಳತನ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.