ಕರ್ನಾಟಕ-ಕೇರಳ ಗಡಿ ಗ್ರಾಮ: ಆನೆ ಉಪಟಳ
9 ಗ್ರಾಮಗಳ 63 ಪ್ರದೇಶಗಳಲ್ಲಿ ಹಾನಿ; 259 ಪ್ರಕರಣಗಳು: 25.96 ಲಕ್ಷ ರೂ. ವಿತರಣೆ
Team Udayavani, Jun 25, 2019, 5:19 AM IST
ಆನೆ ತಡೆ ಪಿಲ್ಲರ್ ಸನಿಹದಲ್ಲೇ ಆನೆ ನುಸುಳಲು ಬಳಸಿದ ದಾರಿ.
ಮಂಡೆಕೋಲು: ಕರ್ನಾಟಕ-ಕೇರಳ ಗಡಿ ಗ್ರಾಮದ ಕೃಷಿ ತೋಟಗಳಿಗೆ ನುಗ್ಗುವ ಗಜಪಡೆಗೆ ಅಂಕುಶ ಹಾಕಲು ಅರಣ್ಯ ಇಲಾಖೆ ಅನುಷ್ಠಾನಿಸಿದ ಯಾವ ತಂತ್ರಗಳು ಕೂಡ ಫಲ ಕೊಡುತ್ತಿಲ್ಲ.
ಕಾಡಾನೆ ನಿಯಂತ್ರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ರಕ್ಷಣ ಬೇಲಿಗಳನ್ನೇ ಹಿಂಡಾನೆಗಳು ದಾಟಿಕೊಂಡೇ ಕೃಷಿ ತೋಟಕ್ಕೆ ನುಗ್ಗುತ್ತಿವೆ.
ಈ ಬಗ್ಗೆ “ಉದಯವಾಣಿ’ ಪ್ರತಿನಿಧಿ ಗಡಿ ಗ್ರಾಮಗಳಲ್ಲಿ ಆನೆ ಹಾವಳಿ ಸ್ಥಿತಿ-ಗತಿಗಳ ಬಗ್ಗೆ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದ ವಾಸ್ತವ ಪರಿಸ್ಥಿತಿ ಇದು.
9 ಗ್ರಾಮ; 259 ಪ್ರಕರಣ
ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ 9 ಗ್ರಾಮಗಳ 63 ಪ್ರದೇಶಗಳು ಕಾಡಾನೆ ಹಾವಳಿಗೆ ನಲುಗಿವೆ. ಹತ್ತಾರು ವರ್ಷಗಳಿಂದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಕಳೆದ 7 ವರ್ಷಗಳಲ್ಲಿ 9 ಗ್ರಾಮಗಳಲ್ಲಿ ಕೃಷಿ ತೋಟಕ್ಕೆ ಆನೆ ದಾಳಿಯಿಟ್ಟ ಬಗ್ಗೆ ಬೆಳೆಗಾರರು ಅರಣ್ಯ ಇಲಾಖೆಯಲ್ಲಿ ದಾಖಲಿಸಿದ ಪ್ರಕರಣಗಳ ಸಂಖ್ಯೆ 259. ದೂರು ನೀಡದಿರುವ ಹಲವು ಪ್ರಕರಣಗಳು ಇವೆ. ಇಲ್ಲಿ ಆನೆ ತೋಟಕ್ಕೆ ನುಗ್ಗುವುದು ನಿರಂತರ.
ಫಲ ಕಾಣದ ನಿಯಂತ್ರಣ
ಆನೆ ಬಾಧಿತ ಪ್ರದೇಶದಲ್ಲಿ ಹಲವೆಡೆ ಆನೆ ಅಗರ್ (ಕಂದಕ), ರೈಲ್ವೇ ಹಳಿ ನಿರ್ಮಾಣ, ಸುರಕ್ಷಾ ಬೇಲಿ ಮೊದಲಾದ ನಿಯಂತ್ರಕ ಸಾಧನ ಅನುಷ್ಠಾನಿಸಲಾಗಿದ್ದು, ಅದರಿಂದ ಶಾಶ್ವತ ಪರಿಹಾರ ಸಿಕ್ಕಿಲ್ಲ. ಆನೆ ದಾಳಿ ಇಡುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ. ರಕ್ಷಣ ಬೇಲಿ ಸನಿಹದಲ್ಲೇ ದಾರಿ ಮಾಡಿಕೊಂಡು ಕೃಷಿ ತೋಟಕ್ಕೆ ನುಸುಳುತ್ತಿರುವುದಕ್ಕೆ ಹಲವು ಸಾಕ್ಷಿಗಳು ಕಂಡು ಬರುತ್ತಿವೆ.
ಬೇಲಿ ದುಬಾರಿ!
ಸಬ್ಸಿಡಿ ದರದಲ್ಲಿ ಕೃಷಿಕರು ಸ್ವತಃ ತಮ್ಮ ಜಮೀನು ಸುತ್ತ ಸೋಲಾರ್ ಬೇಲಿ ಅಳವಡಿಸುವ ಯೋಜನೆ ಸರಕಾರದ ಮೂಲಕ ಇದೆಯಾದರೂ ಅದರ ವೆಚ್ಚವೇ ದುಬಾರಿ. ಸಬ್ಸಿಡಿ ಹಣ ಸಿಕ್ಕಿದರೂ 1 ಕಿ.ಮೀ. ದೂರಕ್ಕೆ 1.15 ಲಕ್ಷ ರೂ. ವೆಚ್ಚವನ್ನು ಫಲಾನುಭವಿಯೇ ಭರಿಸಬೇಕು. ಇದು ಸಣ್ಣ ಪುಟ್ಟ ಕೃಷಿಕರಿಂದ ಅಸಾಧ್ಯ.
ಕಡತ ಪರಿಶೀಲನೆ
ಆನೆ ದಾಳಿಯಿಂದ ನಷ್ಟ ಪರಿಹಾರ ಮೊತ್ತ ವನ್ನು ಫಲಾನುಭವಿಗಳಿಗೆ ಅರಣ್ಯ ಇಲಾಖೆ ಪಾವತಿಸುತ್ತಲಿದೆ. 30 ಫಲಾನುಭವಿಗಳಿಗೆ 5.95 ಲ.ರೂ.ಪಾವತಿಸಲು ಬಾಕಿ ಇದೆ. 2019-20ನೇ ಸಾಲಿನಲ್ಲಿ ಜೂ. 18ರ ತನಕ 5 ಹಾನಿ ಪ್ರಕರಣ ದಾಖಲಾಗಿದ್ದು, ಉಪ ವಲಯ ಅರಣ್ಯಧಿಕಾರಿಗಳ ಕಚೇರಿಯಲ್ಲಿ ಕಡತ ಪರಿಶೀಲನೆ ಪ್ರಗತಿಯಲ್ಲಿದೆ.
ದಾಳಿ ನಿರಂತರ
ಕಾಡಾನೆ ಕೃಷಿ ತೋಟಕ್ಕೆ ನಿರಂತರವಾಗಿ ದಾಳಿಯಿಡುತ್ತಿದೆ. ಅರಣ್ಯ ಭಾಗದಲ್ಲಿ ಇಲಾಖೆ ಅಳವಡಿಸಿರುವ ಸುರಕ್ಷಾ ಬೇಲಿ ದಾಟಿಕೊಂಡೇ ಕೃಷಿ ತೋಟಕ್ಕೆ ನುಗ್ಗುತ್ತಿದೆ. ಇಲ್ಲಿ ನಿಯಂತ್ರಣಕ್ಕೆ ತಾತ್ಕಾಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ಅತ್ಯಗತ್ಯ.
– ಶ್ರೀಶ ಶರ್ಮ, ಬೋಳುಗಲ್ಲು, ಕೃಷಿಕ
ಸ್ಥಳಾಂತರಕ್ಕೆ ಮಾಹಿತಿ
ಹಲವು ನಿಯಂತ್ರಣ ಕ್ರಮ ಕೈಗೊಂಡಿದೆ. ನಷ್ಟಕ್ಕೆ ಪರಿಹಾರ ವಿತರಿಸಲಾ ಗುತ್ತಿದೆ. ಹಿಂಡಾನೆ ಗುಂಪೊಂದು ಪದೇ ಪದೇ ದಾಳಿ ಮಾಡುತ್ತಿದ್ದು, ಆನೆ ಸ್ಥಳಾಂತರಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾಹಿತಿ ನೀಡಲಾಗಿದೆ.
– ಮಂಜುನಾಥ ಎನ್.
ವಲಯ ಅರಣ್ಯಾಧಿಕಾರಿ, ಸುಳ್ಯ ವಲಯ
-ಶಿವಪ್ರಸಾದ್ ಮಣಿಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.