ಶಿಸ್ತು ಬದ್ಧವಾಗಿರಲಿ ಜೀವನ ಕ್ರಮ
Team Udayavani, Jun 25, 2019, 5:00 AM IST
ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳು ನಿತ್ಯವೂ ನಮ್ಮನ್ನು ಕಾಡುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ ಜೀವನ ಕ್ರಮವೇ ಆಗಿರುತ್ತದೆ. ದೈನಂದಿನ ವ್ಯವಹಾರಗಳಲ್ಲಿ ನ ಒತ್ತಡಗಳೇ ಹೆಚ್ಚಾಗಿ ನಮ್ಮ ದೈಹಿಕ, ಮಾನಸಿಕ ನೆಮ್ಮದಿಯನ್ನು ಕಸಿಯುತ್ತದೆ. ಇದರಿಂದ ಆರೋಗ್ಯವೂ ಕೆಡುತ್ತದೆ. ಇದರಿಂದ ಹೊರ ಬರುವುದು ಕಷ್ಟವೇನಲ್ಲ. ಜೀವನಕ್ರಮದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡರೆ ಸಾಕು.
·ಏನು ತಿನ್ನುತ್ತೀರಿ?
ಜೀವನ ಕ್ರಮ ಆರೋಗ್ಯಕರವಾಗಿರಬೇಕು ಎಂದಾದರೆ ಏನು ತಿನ್ನುತ್ತೀರಿ ಎಂಬುದರತ್ತ ನಿಮ್ಮ ಗಮನ ಸದಾ ಇರಬೇಕು. ತಿಂಡಿ ತಿನಿಸುಗಳನ್ನು ತಿನ್ನುವಾಗ ಆರೋಗ್ಯದ ಕಡೆ ಗಮನ ಹರಿಸಬೇಕು. ರಸ್ತೆ ಬದಿಯಲ್ಲಿ ಸಿಗುವ ಕರಿದ, ಸಿಹಿ ತಿನಿಸು, ಚಾಟ್ಸ್‌ಗಳಿಂದ ದೂರವಿದ್ದರೆ ಒಳ್ಳೆಯದು. ಹಾಗೆಯೇ ಪಿಜ್ಜಾ, ಬರ್ಗರ್ ನಂತಹ ತಿನಿಸುಗಳು ಕೂಡ ಆರೋಗ್ಯವನ್ನು ಕೆಡಿಸುತ್ತವೆ. ಪೌಷ್ಟಿಕಾಂಶಗಳಿಂದ ಕೂಡಿರುವ ಹಣ್ಣುಹಂಪಲು, ಹಸಿರು ತರಕಾರಿಗಳು ನಮ್ಮ ದೈಹಿಕ ಆರೋಗ್ಯ ಮತ್ತು ಮಾನಸಿಕ ಸದೃಢತೆಯನ್ನು ಕಾಪಾಡುತ್ತವೆ.
·ನೀರು ಎಷ್ಟು ಸೇವಿಸುತ್ತೀರಿ?
ನಿತ್ಯ ಬದುಕಿನಲ್ಲಿ ನೀರು ಎಷ್ಟು, ಯಾವಾಗ ಸೇವನೆ ಮಾಡುತ್ತೇವೆ ಎಂಬುದು ಕೂಡ ಮುಖ್ಯವಾಗಿರುತ್ತದೆ. ನಿತ್ಯವೂ ಬೆಳಗ್ಗೆ ಎದ್ದ ತತ್‌ಕ್ಷಣ ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಹೀಗೆ ಮಾಡಿದರೆ, ವಾಯು, ಬೆನ್ನು ಹಾಗೂ ಮೈ ಕೈ ನೋವುಗಳು ಮಾಯವಾಗುವುದು. ಮಲಮೂತ್ರ ವಿಸರ್ಜನೆಯ ದೃಷ್ಟಿಯಿಂದಲೂ ಇದು ಉಪಯೋಗಕಾರಿ. ಹೊಟ್ಟೆ ಮತ್ತು ಕಿಡ್ನಿಯ ಆರೋಗ್ಯಕ್ಕೂ ಪ್ರಯೋಜನಕಾರಿ.
·ಊಟದ ಕ್ರಮ ಏನು, ಹೇಗೆ?
ದವಸ ಧಾನ್ಯಗಳಿಂದ ತಯಾರಿಸಿದ ಆಹಾರ ಬಳಕೆಯಿಂದ ದೈಹಿಕ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಯಾಗುವುದು. ಊಟ ಮಾಡುವುದಕ್ಕೂ ಸುಮಾರು ಎರಡು ಗಂಟೆ ಮೊದಲು ಹಣ್ಣಿನ ಜ್ಯೂಸ್, ರಸಾಯನಗಳ ಸೇವನೆಯಿಂದ ಆರೋಗ್ಯ ಸಮಸ್ಥಿತಿಯಲ್ಲಿಡಬಹುದು.
ನಿಯಮಿತ ಆಹಾರ ಕ್ರಮದ ಜತೆಗೆ ಅದಕ್ಕೆ ತಕ್ಕಂತೆ ವ್ಯಾಯಾಮ, ಯೋಗವನ್ನು ಪಾಲಿಸಿದರೆ ದೇಹ ಸುಸ್ಥಿತಿಯಲ್ಲಿಡಬಹುದು. ಜತೆಗೆ ವಾಕಿಂಗ್, ಜಾಗಿಂಗ್‌ನಿಂದಲೂ ಮನಸ್ಸು ಉಲ್ಲಸಿತವಾಗಿರಬಹುದು.
ಇತ್ತೀಚಿನ ದಿನಗಳಲ್ಲಿ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ತಂತ್ರಜ್ಞಾನಗಳು. ಹೀಗಾಗಿ ಇವುಗಳ ಬಳಕೆಗೆ ಕಡಿವಾಣ ಇರಲೇಬೇಕು. ದಿನಕ್ಕೆ ಕನಿಷ್ಠ 6 ಗಂಟೆಗಳಷ್ಟು ನಿದ್ದೆ ಎಲ್ಲರಿಗೂ ಅಗತ್ಯ. ಸಂಗೀತ, ಮನಸ್ಸಿಗೆ ಮುದ ಕೊಡುವ ಕೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ರಾತ್ರಿಯ ನಿದ್ದೆ ಚೆನ್ನಾಗಿ ಆಗುತ್ತದೆ. ಇದರಿಂದ ದೇಹ, ಮನಸ್ಸಿನ ಮೇಲಾಗುವ ಒತ್ತಡ ಕಡಿಮೆಯಾಗುತ್ತದೆ.
••ದೀಕ್ಷಿತ್ ಅಮೀನ್ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.