ಚಗತೆ ಚಮಕ್‌


Team Udayavani, Jun 26, 2019, 5:00 AM IST

5

ಒಂದೆರಡು ಮಳೆ ಬಿದ್ದ ಕೂಡಲೇ, ವಸುಂಧರೆಯ ಒಡಲಲ್ಲಿ ಹಸಿರು ಚಿಗುರುತ್ತದೆ. ಖಾಲಿ ನಿವೇಶನಗಳಲ್ಲಿ, ರಸ್ತೆ ಬದಿಯಲ್ಲಿ ಹುಟ್ಟಿಕೊಳ್ಳುವ ಗಿಡಗಳಲ್ಲಿ ತಗತೆ ಸೊಪ್ಪು ಅಥವಾ ಚಗತೆ ಸೊಪ್ಪು ಕೂಡಾ ಒಂದು. ಒಗರು ರುಚಿ ಹಾಗೂ ತನ್ನದೇ ಆದ ವಿಶಿಷ್ಟ ವಾಸನೆ ಹೊಂದಿರುವ ಈ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಮತ್ತು ನಾರಿನಂಶ ಹೇರಳವಾಗಿದೆ. ಯಾರೂ ನೆಟ್ಟು ಬೆಳೆಸದೆ, ತನ್ನಿಂತಾನೇ ಬೆಳೆಯುವ ಚಗತೆ ಸೊಪ್ಪಿನಿಂದ, ಚಟ್ನಿ, ತಂಬುಳಿ, ತೊವ್ವೆ, ಸಾರು, ಸಾಂಬಾರು, ರೊಟ್ಟಿ, ಪಲಾವ್‌ ಹೀಗೆ ಬಗೆಬಗೆಯ ಅಡುಗೆ ಮಾಡಬಹುದು.

1. ಚಗತೆ ತಂಬುಳಿ:
ಬೇಕಾಗುವ ಸಾಮಗ್ರಿ: ಎಳೆಯ ಚಗತೆಸೊಪ್ಪು-ಒಂದು ಹಿಡಿ, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು-1, ಕಾಳುಮೆಣಸು-ಅರ್ಧ ಚಮಚ, ಜೀರಿಗೆ- ಅರ್ಧ ಚಮಚ, ಮೊಸರು/ ಮಜ್ಜಿಗೆ- 2 ಕಪ್‌, ಉಪ್ಪು, ಒಗ್ಗರಣೆಗೆ : ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಬಾಣಲೆಗೆ ಸೊಪ್ಪನ್ನು ಹಾಕಿ ಸ್ವಲ್ಪ ಬಾಡಿಸಿಕೊಳ್ಳಿ. ಇದಕ್ಕೆ ತೆಂಗಿನತುರಿ, ಹಸಿರುಮೆಣಸು, ಕಾಳುಮೆಣಸು, ಜೀರಿಗೆ ಸೇರಿಸಿ ಚಟ್ನಿಯ ಹದಕ್ಕೆ ರುಬ್ಬಿ. ಮಿಶ್ರಣಕ್ಕೆ ಮೊಸರು/ ಮಜ್ಜಿಗೆ ಬೆರೆಸಿ (ಬೇಕಿದ್ದರೆ ಹೆಚ್ಚುವರಿ ನೀರು ಸೇರಿಸಿ). ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ.

2. ಚಗತೆ ಸಾರು
ಬೇಕಾಗುವ ಸಾಮಗ್ರಿ: ಎಳೆಯ ಚಗತೆಸೊಪ್ಪು- ಅರ್ಧ ಕಪ್‌, ಟೊಮ್ಯಾಟೋ-2, ಈರುಳ್ಳಿ -1, ಸಾರಿನ ಪುಡಿ-1 ಚಮಚ, ಬೆಂದ ತೊಗರಿಬೇಳೆ- ಅರ್ಧ ಕಪ್‌, ಹುಣಸೆ ರಸ- ಸ್ವಲ್ಪ, ಉಪ್ಪು, ಚಿಟಿಕೆ ಬೆಲ್ಲ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ- ಎಣ್ಣೆ, ಸಾಸಿವೆ, ಕರಿಬೇವು, ಇಂಗು ಅಥವಾ ಬೆಳ್ಳುಳ್ಳಿ

ಮಾಡುವ ವಿಧಾನ: ಚಗತೆಸೊಪ್ಪು, ಟೊಮ್ಯಾಟೋ, ಈರುಳ್ಳಿಯನ್ನು ಬಾಣಲೆಗೆ ಹಾಕಿ, ಹಸಿವಾಸನೆ ಹೋಗುವಷ್ಟು ಬಾಡಿಸಿ, ರುಬ್ಬಿಕೊಳ್ಳಿ. ಬೆಂದ ತೊಗರಿಬೇಳೆ, ಸಾರಿನ ಪುಡಿ, ಉಪ್ಪು, ಹುಣಸೆ ರಸ, ಬೆಲ್ಲ ಸೇರಿಸಿ, ತಿಳಿಸಾರಿನ ಹದಕ್ಕೆ ಕುದಿಸಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. ಇಂಗು ಅಥವಾ ಬೆಳ್ಳುಳ್ಳಿ ಸೇರಿಸಿ ಒಗ್ಗರಣೆ ಕೊಡಿ. ಈ ಸಾರನ್ನು ಅನ್ನದೊಂದಿಗೆ ಬಳಸಬಹುದು ಅಥವಾ ಸೂಪ್‌ನಂತೆ ಸವಿಯಬಹುದು.

3. ಚಗತೆ ಪಲಾವ್‌
ಬೇಕಾಗುವ ಸಾಮಗ್ರಿಗಳು: ಅಕ್ಕಿ- 1 ಕಪ್‌, ನೀರು- 3 ಕಪ್‌, ಹೆಚ್ಚಿದ ತರಕಾರಿಗಳು- 3 ಕಪ್‌, ಗೋಡಂಬಿ, ಚಗತೆಸೊಪ್ಪು- ಒಂದು ಕಪ್‌, ಚಕ್ಕೆ, ಶುಂಠಿ, ಲವಂಗ, ಬೆಳ್ಳುಳ್ಳಿ- 4 ಎಸಳು, ತೆಂಗಿನ ತುರಿ – ಕಾಲು ಕಪ್‌, ಎಣ್ಣೆ- ನಾಲ್ಕು ಚಮಚ, ಉಪ್ಪು.

ಮಾಡುವ ವಿಧಾನ: ಕ್ಯಾರೆಟ್‌, ಆಲೂಗಡ್ಡೆ, ಬೀನ್ಸ್, ಈರುಳ್ಳಿ ಮೊದಲಾದ ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳಿ. ಜೊತೆಗೆ ಗೋಡಂಬಿ ಸೇರಿಸಿ.

ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಚಗತೆಸೊಪ್ಪನ್ನು ಬಾಡಿಸಿ. ಇದಕ್ಕೆ ಮಸಾಲೆ ವಸ್ತುಗಳನ್ನೂ, ತೆಂಗಿನ ತುರಿಯನ್ನೂ ಸೇರಿಸಿ ತರಿತರಿಯಾಗಿ ರುಬ್ಬಿ. ಕುಕ್ಕರ್‌ನಲ್ಲಿ ಎಣ್ಣೆ ಹಾಕಿ, ರುಬ್ಬಿದ ಮಸಾಲೆಯನ್ನು ಹಸಿವಾಸನೆ ಹೋಗುವಷ್ಟು ಹುರಿಯಿರಿ. ಅದೇ ಕುಕ್ಕರ್‌ಗೆ ಹೆಚ್ಚಿದ ತರಕಾರಿಗಳು ಮತ್ತು ತೊಳೆದ ಅಕ್ಕಿಯನ್ನು ಹಾಕಿ, 3 ಕಪ್‌ ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸೌಟಿನಲ್ಲಿ ಕೈಯಾಡಿಸಿ, ಮೂರು ವಿಷಲ್‌ ಬರುವಷ್ಟು ಬೇಯಿಸಿದರೆ ಪಲಾವ್‌ ರೆಡಿ.

4.ಚಗತೆ ಸೊಪ್ಪಿನ ಪತ್ರೊಡೆ
ಬೇಕಾಗುವ ಸಾಮಗ್ರಿ: ಕುಸುಬಲಕ್ಕಿ – 2 ಕಪ್‌, ಚಗತೆಸೊಪ್ಪು- 3 ಕಪ್‌, ತೆಂಗಿನತುರಿ- ಅರ್ಧ ಕಪ್‌, ಒಣಮೆಣಸು- 4, ಕೊತ್ತಂಬರಿ ಬೀಜ- 2 ಚಮಚ, ಜೀರಿಗೆ- ಅರ್ಧ ಚಮಚ, ಚಿಟಿಕೆ ಇಂಗು, ಹುಣಸೇಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬಾಡಿಸಿದ ಬಾಳೆಲೆ.

ಮಾಡುವ ವಿಧಾನ: ಕುಸುಬಲಕ್ಕಿಯನ್ನು 6-7 ಗಂಟೆ ನೀರಿನಲ್ಲಿ ನೆನೆಸಿ. ಚಗತೆ ಸೊಪ್ಪನ್ನು ಹೆಚ್ಚಿಟ್ಟುಕೊಳ್ಳಿ. ಒಣಮೆಣಸು, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಇಂಗನ್ನು ಹುರಿಯಿರಿ. ನೆನೆದ ಅಕ್ಕಿಗೆ, ತೆಂಗಿನ ತುರಿ, ಹುಣಸೆಹಣ್ಣು ಹಾಗೂ ಹುರಿದ ಮಸಾಲೆ ಸೇರಿಸಿ, ಸ್ವಲ್ಪ ನೀರು ಸೇರಿಸಿ ಇಡ್ಲಿಯ ಹದಕ್ಕೆ ರುಬ್ಬಿ. ಅದಕೆ Rಉಪ್ಪು ಹಾಗೂ ಚಗತೆ ಸೊಪ್ಪನ್ನು ಸೇರಿಸಿ.

ಹಿಟ್ಟನ್ನು ಬಾಳೆಲೆಯ ಮಧ್ಯಕ್ಕೆ ಸುರಿದು, ಎಲೆಯ ನಾಲ್ಕೂ ಅಂಚುಗಳನ್ನು ಮಡಚಿ. ಮಡಚಿದ ಬಾಳೆಲೆಯ ಅಂಚುಗಳು ಬಿಚ್ಚದಂತೆ, ಇಡ್ಲಿಪಾತ್ರೆ/ಕುಕ್ಕರ್‌ನಲ್ಲಿ ಒಂದರ ಮೇಲೊಂದು ಜೋಡಿಸಿ. ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ.(ಇಡ್ಲಿಯ ಅಚ್ಚಿನಲ್ಲಿಯೂ ಬೇಯಿಸಬಹುದು)

(ಬಿಸಿ ಪತ್ರೊಡೆಗೆ ತುಪ್ಪ, ಜೋನಿಬೆಲ್ಲ, ಚಟ್ನಿ ನೆಂಚಿಕೊಂಡು ಸವಿಯಬಹುದು. ಪತ್ರೊಡೆಯನ್ನು ಪುಡಿ ಮಾಡಿ, ಹಸಿಮೆಣಸು, ಈರುಳ್ಳಿ, ಕಾಯಿತುರಿ ಹಾಕಿ ಒಗ್ಗರಣೆ ಕೊಡಬಹುದು. ಸಿಹಿ ಇಷ್ಟವಿದ್ದರೆ ಕಾಯಿ-ಬೆಲ್ಲ ಸೇರಿಸಿ ಒಗ್ಗರಣೆ ಮಾಡಿದರೂ ರುಚಿಯಾಗಿರುತ್ತೆ.)

-ಹೇಮಮಾಲಾ.ಬಿ, ಮೈಸೂರು

ಟಾಪ್ ನ್ಯೂಸ್

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.