ಉದ್ಯೋಗ ಚೀಟಿ ಹೆಚ್ಚಿಸಿ ಕೆಲಸ ನೀಡಿ: ಮೋಹನ್‌ರಾಜ್‌

Team Udayavani, Jun 26, 2019, 5:13 AM IST

udyoga-cheeti

ಪಡುಬಿದ್ರಿ: ಗ್ರಾ.ಪಂ.ನ ಉದ್ಯೋಗ ಚೀಟಿ ಹೆಚ್ಚಿಸಿ ಕೆಲಸ ನೀಡ
ಬೇಕು. ಆ ಮೂಲಕ ಜಿಲ್ಲೆಯಲ್ಲಿ ಉದ್ಯೋಗ ಖಾತರಿಯ ಪ್ರಗತಿ ಸಾಧಿಸುವಂತಾಗ ಬೇಕು. ಸಾಮುದಾಯಿಕ ಕೆಲಸ ಕಾರ್ಯ ಹೆಚ್ಚಾಗಬೇಕು. ಕೆರೆಗಳ ಹೂಳೆತ್ತುವ ಕೆಲಸಗಳನ್ನು ಸಾಮೂಹಿಕವಾಗಿ ದುಡಿಯುವ ಕೈಗಳು ನಿರ್ವಹಿಸುವಂತಾಗಬೇಕು ಎಂದು ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಮೋಹನ್‌ರಾಜ್‌ ಹೇಳಿದರು.

ಅವರು ಜೂ. 25ರಂದು ಪಡುಬಿದ್ರಿ ಗ್ರಾ. ಪಂ. ಸಭಾಭವನದಲ್ಲಿ ನಡೆದ 2019 –
20ನೇ ಸಾಲಿನ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಅಧಿನಿಯಮದ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.

ನಿಯಮ ಸಡಿಲಿಸಿ
ಉದ್ಯೋಗ ಖಾತರಿ ಯೋಜನೆಯಡಿ ಮೀನುಗಾರಿಕೆಯಲ್ಲಿ ಕೈರಂಪಣಿ, ನಾಡ ದೋಣಿ ಮೀನುಗಾರಿಕೆಯ ಸಹಿತ ಭತ್ತದ ಕೃಷಿಯನ್ನು ಸೇರಿಸುವಂತೆಯೂ ಬಾವಿ ತೋಡುವಂತಹ ಕೆಲಸಕ್ಕೆ ಸಣ್ಣ ಹಾಗೂ ಅತಿ ಸಣ್ಣ ರೈತರು ಭಾಗಿಯಾಗುವುದಕ್ಕೆ ಯಾವುದೇ ನಿರ್ದಿಷ್ಟ ಅಧಿಸೂಚನೆ ಇಲ್ಲದಿ
ದ್ದರೂ ಕನಿಷ್ಠ 50 ಸೆಂಟ್ಸ್‌ ಭೂಮಿಯನ್ನು ಹೊಂದಿರಬೇಕೆಂಬ ನಿಯಮ ಅನುಸರಿಸು ತ್ತಿರುವುದನ್ನು ಸಡಿಲಿಸಿ 10 ಅಥವಾ 15 ಸೆಂಟ್ಸ್‌ಗಳಿಗೆ ಇಳಿಸಬೇಕೆಂದು ಸಭೆಯಲ್ಲಿ ಆಗ್ರಹಿಸಿ ಠರಾವು ಮಂಡಿಸಲಾಯಿತು.

ಸಾಮಾಜಿಕ ಪರಿಶೋಧನೆಯ ತಾಲೂಕು ಸಂಯೋಜಕ ರಾಜು ಮೂಲ್ಯ,
ಸಭೆಯಲ್ಲಿ ಪರಿಶೋಧನೆಯ ವೇಳೆ ಗಮನಿಸಲಾದ ಆಕ್ಷೇಪಣೆ ತಿಳಿಸಿ ಪಡುಬಿದ್ರಿ ಗ್ರಾ.ಪಂ.ನಲ್ಲಿ 732 ಉದ್ಯೋಗ ಚೀಟಿಗಳಿದ್ದು ಪ್ರಥಮ ಹಂತದಲ್ಲಿ 2,44,496 ರೂ.ಗಳನ್ನು ಕೂಲಿಯಾಗಿ ಪಾವತಿಸಲಾಗಿದೆ. ಇದು ಪಡುಬಿದ್ರಿ ಯಂತಹ ಪಂಚಾಯತ್‌ನಲ್ಲಿ ಕನಿಷ್ಠ 15 ಲಕ್ಷಗಳವರೆಗಾದರೂ ಆಗಬೇಕಾಗಿರು ವುದು ಪ್ರಗತಿಯ ದೃಷ್ಟಿಯಲ್ಲಿ ಅತ್ಯವಶ್ಯಕ ಎಂದವರು ತಿಳಿಸಿದರು.

ಕಾಮಿನಿ ನದಿಗೆ ಕಲ್ಲಿದ್ದಲು ನೀರು : ಆಕ್ಷೇಪ
ಕೃಷಿ ಅಧಿಕಾರಿಯಾಗಿ ಸಭೆಯಲ್ಲಿದ್ದ ಸಹಾಯಕ ನಿರ್ದೇಶಕ ಮೋಹನ್‌ರಾಜ್‌ ಕಾಮಿನಿ ನದಿಗೆ ಯುಪಿಸಿಎಲ್‌ ಕಲ್ಲಿದ್ದಲು ನೀರನ್ನು ಬಿಡಲಾಗಿದ್ದು ಒಂದೇ ದಿನದಲ್ಲಿ ಸಹಸ್ರಾರು ಮೀನುಗಳ ಮಾರಣ ಹೋಮವಾಗಿದೆ. ಕೃಷಿಕರು ಬಿತ್ತಿದ ಬಿತ್ತನೆ ಬೀಜ ನಾಶ ಹೊಂದಿದೆ ಎಂಬ ಪಡುಹಿತ್ಲುವಿನ ಲೋಹಿತಾಶ್ವ ಎಂಬವರ ಪ್ರಶ್ನೆಗೆ ಉತ್ತರಿಸಿ ಮೊದಲಾಗಿ ನೀರು ಕಲುಷಿತಗೊಂಡಿರುವುದನ್ನು ಪರಿಸರ ಇಲಾಖೆಯ ಪರಿಶೀಲನೆಗೊಳಪಡಿಸಿ ದೃಢೀಕರಿಸಿಕೊಳ್ಳಬೇಕು. ಆ ಬಳಿಕ ರೈತರು ತಮ್ಮ ಗ್ರಾ.ಪಂ. ಮೂಲಕ ಯೋಜನಾ ಕಂಪೆನಿಗೂ ನೋಟಿಸ್‌ ನೀಡಬೇಕು. ಎಲ್ಲವೂ ಖಾತರಿಗೊಂಡಾಗ ರೈತರ ಪ್ರತೀ ಹೆಕ್ಟೇರ್‌ ಕೃಷಿ ಭೂಮಿಗೆ 7,000 ರೂ. ಪರಿಹಾರವನ್ನು ಇಲಾಖೆಯಿಂದ ನೀಡಬಹುದಾದ ಸೌಲಭ್ಯಗಳಿವೆ ಎಂದವರು ತಿಳಿಸಿದರು.

ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ದಮಯಂತಿ ವಿ. ಅಮೀನ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೈ. ಸುಕುಮಾರ್‌ ಉಪಸ್ಥಿತರಿದ್ದರು. ಗ್ರಾ. ಪಂ.
ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಟಾಪ್ ನ್ಯೂಸ್

CT-Ravi

MUDA Case: ಸಿದ್ದರಾಮಯ್ಯ ಕಳಂಕ ರಹಿತರೆಂದು ತನಿಖೆಯಲ್ಲಿ ಸಾಬೀತಾಗಲಿ: ಎಂಎಲ್‌ಸಿ ಸಿ.ಟಿ.ರವಿ

15-uv-fusion

UV Fusion: ಮೃಗಗಳ ಜಗತ್ತು

1-wqeqwewqe

Belagavi DCC Bank ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ‌ ದಿಢೀರ್ ರಾಜೀನಾಮೆ

1-tirr

Tirupati laddu; ತನಿಖೆಗೆ ಸ್ವತಂತ್ರ ಎಸ್‌ಐಟಿ: ಸುಪ್ರೀಂ ನಿರ್ಧಾರಕ್ಕೆ ಟಿಡಿಪಿ ಸ್ವಾಗತ

India: SCO ಶೃಂಗದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಜೈಶಂಕರ್‌ ಪಾಕ್‌ ಗೆ ಪ್ರಯಾಣ

India: SCO ಶೃಂಗದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಜೈಶಂಕರ್‌ ಪಾಕ್‌ ಗೆ ಪ್ರಯಾಣ

14-uv-fusion

Women: ಕ್ಷಮಯಾ ಧರಿತ್ರಿ

1pawan

Wait And See…: ಪವನ್ ಕಲ್ಯಾಣ್ ‘ಸನಾತನ ಧರ್ಮ’ ಎಚ್ಚರಿಕೆಗೆ ಉದಯನಿಧಿ ಪ್ರತಿಕ್ರಿಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ: ಮನೆಗೆ ಹೊಸತನ ತರುವ ಕದಿರು; ನವರಾತ್ರಿಯ ವೇಳೆ ನಡೆಯುವ ವಿಶಿಷ್ಟ ಆಚರಣೆ

Udupi: ಮನೆಗೆ ಹೊಸತನ ತರುವ ಕದಿರು; ನವರಾತ್ರಿಯ ವೇಳೆ ನಡೆಯುವ ವಿಶಿಷ್ಟ ಆಚರಣೆ

9

Kaup ಹೊಸ ಮಾರಿಗುಡಿ: ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CT-Ravi

MUDA Case: ಸಿದ್ದರಾಮಯ್ಯ ಕಳಂಕ ರಹಿತರೆಂದು ತನಿಖೆಯಲ್ಲಿ ಸಾಬೀತಾಗಲಿ: ಎಂಎಲ್‌ಸಿ ಸಿ.ಟಿ.ರವಿ

15-uv-fusion

UV Fusion: ಮೃಗಗಳ ಜಗತ್ತು

1-wqeqwewqe

Belagavi DCC Bank ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ‌ ದಿಢೀರ್ ರಾಜೀನಾಮೆ

1-tirr

Tirupati laddu; ತನಿಖೆಗೆ ಸ್ವತಂತ್ರ ಎಸ್‌ಐಟಿ: ಸುಪ್ರೀಂ ನಿರ್ಧಾರಕ್ಕೆ ಟಿಡಿಪಿ ಸ್ವಾಗತ

India: SCO ಶೃಂಗದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಜೈಶಂಕರ್‌ ಪಾಕ್‌ ಗೆ ಪ್ರಯಾಣ

India: SCO ಶೃಂಗದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಜೈಶಂಕರ್‌ ಪಾಕ್‌ ಗೆ ಪ್ರಯಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.