ಕೈಗೆ ಮರೆವಿನ ಚಾಟಿ

ಪಿವಿಎನ್‌, ಡಾ.ಸಿಂಗ್‌ರನ್ನು ನೆನಪೇ ಮಾಡಿಕೊಳ್ಳಲ್ಲ: ಮೋದಿ ಟೀಕೆ

Team Udayavani, Jun 26, 2019, 6:00 AM IST

41

ನವದೆಹಲಿ: ”ಈ ದೇಶಕ್ಕೆ ಒಳಿತು ಮಾಡಿದವರನ್ನು ಕಾಂಗ್ರೆಸ್‌ ನಾಯಕರು ಎಂದಿಗೂ ನೆನೆಯುವುದಿಲ್ಲ. ಹಾಗೇನಾದರೂ ನೆನೆದರೆ ಅದು ಗಾಂಧಿ-ನೆಹರು ಕುಟುಂಬದವರನ್ನು ಮಾತ್ರ” ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

17ನೇ ಲೋಕಸಭೆಯ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣಕ್ಕೆ ಸದನದಲ್ಲಿ ಸಲ್ಲಿಸಲಾದ ವಂದನಾರ್ಪಣೆ ಮೇಲಿನ ಭಾಷಣದಲ್ಲಿ ಅವರು, ”ಈ ದೇಶಕ್ಕೆ ಮಾಜಿ ಪ್ರಧಾನಿಗಳಾದ ವಾಜಪೇಯಿ ಅವರ ಕೊಡುಗೆ ಅಪಾರವಾಗಿದೆ. ಆದರೆ, ಅದನ್ನೆಂದೂ ಕಾಂಗ್ರೆಸ್ಸಿಗರು ನೆನೆಯುವುದಿಲ್ಲ. ಅದು ಹೋಗಲಿ, ಅವರದ್ದೇ ಪಕ್ಷದ ಇಬ್ಬರು ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್‌ ಹಾಗೂ ಮನಮೋಹನ್‌ ಸಿಂಗ್‌ ಅವರ ಉತ್ತಮ ಕೆಲಸಗಳ ಬಗ್ಗೆಯಾದರೂ ಎಂದಾದರೂ ಮಾತನಾಡಿದ್ದಾರೆಯೇ? ಅದೂ ಇಲ್ಲ” ಎಂದರು. ಅಂದಹಾಗೆ, 2ನೇ ಬಾರಿಗೆ ಪ್ರಧಾನಿಯಾದ ನಂತರ ಲೋಕಸಭೆಯಲ್ಲಿ ಅವರು ಮೊದಲ ಭಾಷಣ ಇದಾಗಿತ್ತು.

ಸದೃಢ ದೇಶವೇ ನಮ್ಮ ಗುರಿ: ”ಸ್ವಾರ್ಥ ಮನೋಭಾವದ ಕಾಂಗ್ರೆಸ್‌ನ ನೇತೃತ್ವ ಹೊಂದಿದ್ದ ಯುಪಿಎ ಸರ್ಕಾರದ ಸತತ ಎರಡು ಅಧಿಕಾರಾವಧಿಯಲ್ಲಿ ರೋಸಿಹೋಗಿದ್ದ ಜನತೆ, ಆ ಆಡಳಿತದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಎನ್‌ಡಿಎಗೆ ಮತ ಹಾಕಿ ಅಧಿಕಾರಕ್ಕೆ ತಂದರು. ಈಗ ಮತ್ತೆ ಅಧಿಕಾರ ಕೊಟ್ಟಿದ್ದಾರೆ. ಚುನಾವಣೆಯ ಸೋಲು, ಗೆಲುವುಗಳ ಲೆಕ್ಕಾಚಾರ ಮೀರಿ ನಾವು ಜನಸೇವೆ ಮಾಡಬೇಕಿದೆ. ಈ ನಿಟ್ಟಿನಲ್ಲಿ, ಭಾರತವನ್ನು ಶಕ್ತಿಶಾಲಿ, ಸುರಕ್ಷೆ, ಅಭಿವೃದ್ಧಿಗೊಂಡ ಹಾಗೂ ಐಕ್ಯತೆಯ ರಾಷ್ಟ್ರವನ್ನಾಗಿ ರೂಪಿಸುವ ಪಣ ತೊಟ್ಟಿದ್ದೇವೆ” ಎಂದರು. ಅಲ್ಲದೆ, ತಮ್ಮ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದರು.

ಮುಸ್ಲಿಮರು ಗಟರ್‌ನಲ್ಲಿ ವಾಸಿಸಲಿ ಎಂದರು!: ”ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಮಾಜಿ ನಾಯಕ ಆರಿಫ್ ಮೊಹಮ್ಮದ್‌ ಖಾನ್‌, ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಮುಸ್ಲಿಮರು ಗಟರ್‌ನಲ್ಲಿ ವಾಸಿಸಲಿ’ ಎಂದಿದ್ದರು” ಎಂದು ಮೋದಿ ಹೇಳಿದರು. ಇದಷ್ಟೇ ಅಲ್ಲ, ಖಾನ್‌ ಅವರು ಮುಸ್ಲಿಮರನ್ನು ಅಭಿವೃದ್ಧಿಗೊಳಿಸುವುದು ಕಾಂಗ್ರೆಸ್‌ ಕೆಲಸವಲ್ಲ ಎಂದೂ ತಮ್ಮ ಪಕ್ಷದ ನಾಯಕರು ತಿಳಿಸಿದ್ದರು ಎಂದು ಹೇಳಿದ್ದನ್ನು ಉಲ್ಲೇಖೀಸಿದರು. ”ಮುಸ್ಲಿಮರ ಬಗ್ಗೆ ಕಾಂಗ್ರೆಸ್‌ ಹೊಂದಿರುವ ಇಂಥ ಮನಸ್ಥಿತಿ ನಾಚಿಕೆಗೇಡಿನ ಸಂಗತಿ. ಮುಸ್ಲಿಮರನ್ನು ಅಭಿವೃದ್ಧಿಗೊಳಿಸುತ್ತೇವೆ ಎನ್ನುತ್ತಿದ್ದ ಕಾಂಗ್ರೆಸ್‌, ಅಧಿಕಾರದಲ್ಲಿರುವವರೆಗೂ ಸತತವಾಗಿ ಮುಸ್ಲಿಮರ, ಅದರಲ್ಲೂ ವಿಶೇಷವಾಗಿ ಆ ಸಮುದಾಯದ ಮಹಿಳೆಯರಿಗೆ ನಂಬಿಕೆದ್ರೋಹ ಮಾಡಿದೆ” ಎಂದರು. ಈ ಮೂಲಕ ತ್ರಿವಳಿ ತಲಾಖ್‌ ವಿಧೇಯಕಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ ಅನ್ನು ಕುಟುಕಿದರು.

”ಗುಜರಾತ್‌ನಲ್ಲಿ ನಿರ್ಮಾಣವಾದ ಸರ್ದಾರ್‌ ಪಟೇಲ್ ಅಣೆಕಟ್ಟು, ಸರ್ದಾರ್‌ ಪಟೇಲರ ಕನಸಾಗಿತ್ತು. ಆದರೆ, ಅದನ್ನು ನಿರ್ಮಿಸಲು ಅನೇಕ ಅಡೆತಡೆಗಳಿದ್ದವು. ನಾನು ಗುಜರಾತ್‌ ಸಿಎಂ ಆಗಿದ್ದಾಗ ಮಂದಗತಿಯಲ್ಲಿ ಸಾಗುತ್ತಿದ್ದ ಆ ಯೋಜನೆಗೆ ವೇಗವನ್ನು ನೀಡಿದೆ. ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಆ ಯೋಜನೆಗೆ ಪ್ರೋತ್ಸಾಹ ಸಿಕ್ಕಿತು. ಈಗ ಅಣೆಕಟ್ಟು ನಿರ್ಮಾಣವಾಗಿದೆ. ಅದೇ ರೀತಿ ನಾನು ಇಡೀ ದೇಶದ ಉಳಿದ ಯೋಜನೆಗಳಿಗೂ ಗಮನ ನೀಡುತ್ತೇನೆ” ಎಂದು ಮೋದಿ ತಿಳಿಸಿದರು.

ತುರ್ತು ಪರಿಸ್ಥಿತಿ ಕರಾಳ ನೆನಪು

1975ರಿಂದ 1977ರವರೆಗೆ ದೇಶದಲ್ಲಿ ಜಾರಿಯಲ್ಲಿದ್ದು ತುರ್ತು ಪರಿಸ್ಥಿತಿ ಈ ದೇಶದ ಪ್ರಜಾಪ್ರಭುತ್ವದ ಇತಿಹಾಸಕ್ಕೆ ಕಳಂಕವಾಗಿದೆ ಎಂದು ವ್ಯಾಖ್ಯಾನಿಸಿದ ಮೋದಿ, ”ಆ ಕಳಂಕ ಎಂದಿಗೂ ಮಾಸುವುದಿಲ್ಲ. ಇಂದು ಜೂ. 25. 44 ವರ್ಷಗಳ ಹಿಂದೆ, ಇದೇ ದಿನ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಇದನ್ನು ಹೇರಿದವರು ಯಾರು? ಈ ದೇಶದ ಸಂವಿಧಾನವನ್ನು ನೆಲಸಮ ಮಾಡಿದವರು ಯಾರು, ಮಾಧ್ಯಮಗಳನ್ನು ಹತ್ತಿಕ್ಕಿದವರು ಯಾರು, ನ್ಯಾಯಾಂಗ ವನ್ನು ಭೂಗತ ಮಾಡಿದವರು ಯಾರು’ ಎಂದು ನಾನು ಇಂದು ಕಾಂಗ್ರೆಸ್ಸನ್ನು ಕೇಳಬಯಸುತ್ತೇನೆ’ ಎಂದ ಅವರು, ”ಆ ಕರಾಳ ದಿನಗಳನ್ನು ನಾವೆಂದಿಗೂ ಮರೆಯುವುದಿಲ್ಲ” ಎಂದರು.

ಹಲವು ಜನಪರ ಯೋಜನೆಗಳ ಜಾರಿ

ಕೆಲ ದಿನಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿರುವ ನಮ್ಮ ಸರ್ಕಾರ, ಈ ದೇಶದ ಅಭಿವೃದ್ಧಿಗಾಗಿ ಹಲವಾರು ಜನಪರ ನೀತಿಗಳನ್ನು ಜಾರಿಗೊಳಿಸಲಿದೆ. ಆ ನೀತಿಗಳು ವರ್ತಕರಿಗೆ, ಯುವಜನರಿಗೆ ಹಾಗೂ ದೇಶದ ಎಲ್ಲಾ ಕ್ಷೇತ್ರಗಳ ಸುಧಾರಣೆಗೆ ಸಹಾಯಕವಾಗುವಂಥ ಕಾನೂನುಗಳಾಗಿರುತ್ತವೆ ಎಂದರು. ಜತೆಗೆ, ದೇಶವನ್ನು ಐದು ಲಕ್ಷಕೋಟಿ ಡಾಲರ್‌ ಮೊತ್ತದ ಆರ್ಥಿಕತೆಯನ್ನಾಗಿಸಲು ಎಲ್ಲರೂ ಶ್ರಮಪಡಬೇಕು ಎಂದರು.

ಅಂಬೇಡ್ಕರ್‌ ಸ್ಮರಣೆ

ನಾವಿಂದು ಜಲ ಸಂಪನ್ಮೂಲಗಳ ಬಗ್ಗೆ ಮಾತನಾಡುತ್ತೇವೆ. ಈ ಸಂದರ್ಭದಲ್ಲಿ ನಾವು ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಸ್ಮರಿಸಿಕೊಳ್ಳಬೇಕು. ದೇಶದಲ್ಲಿ ನೀರಾವರಿ ಹಾಗೂ ಕೃಷಿಯ ಬಗ್ಗೆ ಅವರು ಹೆಚ್ಚು ಒತ್ತು ಕೊಟ್ಟಿದ್ದರು ಎಂದ ಅವರು, ಲಾಲ್ ಬಹದ್ದೂರ್‌ ಶಾಸ್ತ್ರಿಯವರ ‘ಜೈ ಜವಾನ್‌, ಜೈ ಕಿಸಾನ್‌’ ಜತೆಗೆ ನಾವಿಂದು ‘ಜೈ ಅನುಸಂಧಾನ್‌’ ಎಂಬ ಹೊಸ ವಿಚಾರವನ್ನೂ ಸೇರಿಸಿಕೊಳ್ಳಬೇಕಿದೆ ಎಂದರು. ಇದೇ ವೇಳೆ, ಕೃಷಿ ವಲಯದ ಅಭಿವೃದ್ಧಿಗಾಗಿ ಹಲವಾರು ನೀತಿಗಳನ್ನು ಸರ್ಕಾರ ಜಾರಿಗೆ ತರಲಿದೆ. ಹನಿ ನೀರಾವರಿ ಯೋಜನೆಯನ್ನು ದೇಶವ್ಯಾಪಿ ಅಳವಡಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇದೇ ವೇಳೆ, ಕೃಷಿ ಸಂಬಂಧಿತ ವಲಯಗಳಾದ ಗೋದಾಮುಗಳು ಹಾಗೂ ಆಹಾರ ಸಂಸ್ಕರಣಾ ರಂಗಗಳಲ್ಲಿ ಖಾಸಗಿ ಕಂಪನಿಗಳ ಬಂಡವಾಳ ಹೂಡಿಕೆ ಬಗ್ಗೆ ಪ್ರಸ್ತಾಪಿಸಿದರು.

ಟಾಪ್ ನ್ಯೂಸ್

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Bias, misinformation complaint: Notice from Center to Wikipedia

Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್‌

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.