ನಾಗನಾಳ ಕಲ್ಲು ಗಣಿಗಾರಿಕೆ ಅನುಮೋದನೆ ರದ್ದು ಮಾಡಿ
Team Udayavani, Jun 26, 2019, 12:34 PM IST
ಕೋಲಾರ ತಾಲೂಕಿನ ನಾಗನಾಳ ಸರ್ವೇ ನಂ. 42 ರಲ್ಲಿ ನೀಡಿರುವ ಕಲ್ಲು ಗಣಿಗಾರಿಕೆಯ ಅನುಮೋದನೆ ರದ್ದುಪಡಿಸಿ ಮರುಪರಿಶೀಲಿಸಬೇಕೆಂದು ಗ್ರಾಮಸ್ಥರು ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.
ಕೋಲಾರ: ತಾಲೂಕಿನ ನಾಗನಾಳ ಸರ್ವೇ ನಂ.42ರಲ್ಲಿ ನೀಡಿರುವ ಕಲ್ಲುಗಣಿಗಾರಿಕೆಯ ಅನುಮೋದನೆಯನ್ನು ರದ್ದುಪಡಿಸಿ ಮರುಪರಿಶೀಲಿಸಬೇಕೆಂದು ಒತ್ತಾಯಿಸಿ ನಾಗನಾಳ ಮತ್ತು ಮೇಡಿಹಾಳ ಸುತ್ತಮುತ್ತಲಿನ ಗ್ರಾಮಸ್ಥರು ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.
ಮೇಡಿಹಾಳ ಮತ್ತು ಬೆಟ್ಟಹೊಸಪುರ ಗ್ರಾಮಗಳಲ್ಲಿ ಈಗಾಗಲೇ ಜಲ್ಲಿಕ್ರಶರ್‌ಗಳು ಹಾಗೂ ಕಲ್ಲುಗಣಿ ಕ್ವಾರಿಗಳು ಸೂಕ್ತವಲ್ಲದ ಕಾರ್ಯಾಚರಣೆ ಪರಿಯು ವಾಯುಮಾಲಿನ್ಯದ ಗುಣಮಟ್ಟವನ್ನು ಅಪಾಯಕಾರಿಯಾಗಿಸಿದೆ. ಪ್ರಕೃತಿಯ ವಾತಾವರಣ ಅಸಮತೋಲನ ಆಗುವಷ್ಟರ ಮಟ್ಟಿಗೆ ಕಲುಷಿತಗೊಳಿಸಿದೆ. ಸಾರ್ವಜನಿಕರ ಸುವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ದೀನದಲಿತರು, ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗೆ ಸರಕಾರ ಕಾನೂನು ಬದ್ಧವಾಗಿ ಜಮೀನು ಮಂಜೂರು ಮಾಡಿರುತ್ತಾರೆ. ಆದರೆ ಸೂಕ್ತವಲ್ಲದ ಸ್ಥಳದಲ್ಲಿ ಜಲ್ಲಿಕ್ರಶರ್ ಮತ್ತು ಕಲ್ಲುಗಣಿಗಾರಿಕೆಯಿಂದಾಗಿ ನಮಗೆ ನೀಡಿರುವ ಜಮೀನಿನಲ್ಲಿ ಸಾಗುವಳಿ ಮಾಡಲು ಸಾಧ್ಯವಿಲ್ಲದಂತಾಗಿದೆ.
ಕಲ್ಲುಗಣಿಗಾರಿಕೆಯಲ್ಲಿ ಅಪಾಯಕಾರಿ ನ್ಪೋಟಕಗಳನ್ನು ಸಿಡಿಸುವ ಮೂಲಕ ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ಉತ್ಪತ್ತಿಯಾಗುವ ನೈಟ್ರೋಜನ್ ಡೈ ಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮತ್ತು ಇನ್ನಿತರೆ ಸೀಸದ ಅಂಶಗಳು ಗಾಳಿಯಲ್ಲಿ ಬೆರೆಯುತ್ತ ವಾಯಮಾಲಿನ್ಯವನ್ನು ಉಂಟುಮಾಡುತ್ತಿದೆ. ಈ ಗಾಳಿಯನ್ನು ಉಸಿರಾಡುತ್ತಿರುವ ಗ್ರಾಮಸ್ಥರು ಹೃದಯ ಮತ್ತು ಶ್ವಾಸಕೋಶದ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಾಳಿಯಲ್ಲಿ ಬರುವ ಕಲ್ಲಿನ ಪುಡಿ ರೈತರು ಬೆಳೆದ ಬೆಳೆಗಳ ಮತ್ತು ಜಾನುವಾರುಗಳು ತಿನ್ನುವ ಹುಲ್ಲಿನ ಮೇಲೆ ಬೀಳುತ್ತಿರುವುದರಿಂದ ಜಾನುವಾರುಗಳು ಸಾವನ್ನಪ್ಪುತ್ತಿವೆ. ರೈತರು ಬೆಳೆದ ಬೆಳೆಗಳು ಕೈಗೆ ಸಿಗದೆ ಬೀದಿಪಾಲಾಗುವ ಸಂದರ್ಭ ಒದಗಿದೆ. ಇನ್ನು ಪಕ್ಕದಲ್ಲಿರುವ ಅರಣ್ಯ ಭೂಮಿಯಲ್ಲಿ ಕ್ರಷರ್ ಸ್ಥಾಪನೆಗೆ ಅನುಮತಿ ನೀಡಲು ಅರ್ಜಿ ಸಲ್ಲಿಸಿದ್ದು, ಅನುಮೋದನೆಯನ್ನು ನೀಡಿದೆ.
ಇದರಿಂದ ಆ ಸ್ಥಳದಲ್ಲಿ ಬೆಳೆದಿರುವ ಅಕೇಶಿಯಾ, ಹೊನ್ನೆ, ನೇರಳೆ, ಮರಗಳಿರುತ್ತವೆ. ಇದನ್ನೇ ನಂಬಿಕೊಂಡಿರುವ ಪ್ರಾಣಿ ಪಕ್ಷಿಗಳು ನಾಶವಾಗುತ್ತವೆ. ಇದಕ್ಕೆ ಸಂಬಂ—ಸಿದಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಲಾಗಿದೆ. ಇದೆಲ್ಲವೂ ಅ—ಕಾರಿಗಳಿಗೆ ತಿಳಿದಿದ್ದರೂ ಸಹ ಸಾರ್ವಜನಿಕರ ಹಿತದೃಷ್ಟಿಯಿಂದ ಗಾಳಿಗೆ ತೂರಿ ಕಲ್ಲುಗಣಿಕಾರಿಕೆಗೆ ನಾಗನಾಳ ಸರ್ವೇ ನಂ. 42 ರಲ್ಲಿ ಅನುಮೋದಿಸಿದ್ದು, ಕೂಡಲೇ ಅನುಮೋದನೆಯನ್ನು ರದ್ದುಪಡಿಸಿ ಮರುಪರಿಶೀಲಿಸಬೇಕೆಂದು ನಾಗನಾಳ ಮತ್ತು ಮೇಡಿಹಾಳ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ (ಕೆ.ಡಿ.ಎಸ್.ಎಸ್) ಭೀಮವಾದ ಜಿಲ್ಲಾ ಸಂಚಾಲಕ ಮೇಡಿಹಾಳ ಚಂದ್ರಶೇಖರ್, ನಾಗನಾಳ ಶಂಕರ್, ಉರಿಗಿಲಿ ಆನಂದ್, ಕಲ್ಲೂರು ಆಂಜಿ, ಕೊಳಗಂಜನಹಲಿ ಚಂದ್ರಿ, ರಾಜಕಲ್ಲಹಳ್ಳಿ ಶಾಂತಕುಮಾರ್, ಸುನೀಲ್, ನಾಗರಾಜ್, ಕಲ್ಲೂರು ಚಂದ್ರು, ರಾಂಪುರ ವೆಂಕಟೇಶ್, ಜನ್ನಘಟ್ಟ ಹೆಚ್. ನಾರಾಯಣಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.