ರಸ್ತೆ ಅವ್ಯವಸ್ಥೆಗೆ ಜನ ಹೈರಾಣ

ನಿಗದಿತ ಸಮಯಕ್ಕೆ ಮುಗಿಯದ ಕಾಮಗಾರಿ • ಗುಂಡಿ ಮುಚ್ಚದ್ದಕ್ಕೆ ಆತಂಕ

Team Udayavani, Jun 26, 2019, 12:40 PM IST

kolar-tdy-3..

ಮುಳಬಾಗಿಲು: ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಂದ ಮಹಿಳೆಯರು, ವೃದ್ಧರು, ಮಕ್ಕಳು ಆತಂಕದಲ್ಲೇ ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ಸಣ್ಣ ರಸ್ತೆ ಅಭಿವೃದ್ಧಿ ಪಡಿಸಲು ಎರಡು ಮೂರು ತಿಂಗಳು ತೆಗೆದುಕೊಳ್ಳುವುದರಿಂದ ಜನ ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿಕೊಂಡು ಓಡಾಡುವಂತಾಗಿದೆ.

ನಗರದ ವರದರಾಜ ಟ್ಯಾಕೀಸ್‌ನಿಂದ ಮುತ್ಯಾಲಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿವಿಧ ಕಾರಣಗಳಿಗಾಗಿ ಹಲವು ವಾರಗಳಿಂದ ಹಗೆಯುತ್ತಲೇ ಇದ್ದಾರೆ. ಮೊದಲು ಚರಂಡಿ ನಿರ್ಮಾಣಕ್ಕಾಗಿ ಹಗೆದು ಹಲವು ವಾರಗಳ ಕಾಲ ಚರಂಡಿ ಕಾರ್ಯ ನಡೆಯದೆ ಹಾಗೆ ಬಿಡಲಾಗಿತ್ತು.

ನಂತರ ಚರಂಡಿ ನಿರ್ಮಾಣಗೊಂಡರೂ ಚರಂಡಿ ಪಕ್ಕದಲ್ಲಿ ತೋಡಿದ್ದ ಗುಂಡಿಗಳನ್ನು ಮುಚ್ಚಿಲ್ಲ. ಪ್ರತಿನಿತ್ಯ ಶಾಲಾ ಮಕ್ಕಳು ಓಡಾಡುವ ಈ ರಸ್ತೆಯು ಎಷ್ಟು ಅಪಾಯಕಾರಿಯಾಗಿದೆ ಎಂದರೆ ಸೈಕಲ್ ತುಳಿಯಲು ಆಗದ ಮಟ್ಟಿಗೆ ಹದಗೆಟ್ಟಿದೆ. ಕೆಲವರು ತೆರೆದ ಗುಂಡಿಗಳಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ವಾರದ ಹಿಂದೆ ರಸ್ತೆ ಅಭಿವೃದ್ಧಿ ಪಡಿಸುವುದಾಗಿ ಹೇಳಿ ಸಮತಟ್ಟು ಮಾಡಿದ್ದು, ಈಗ ಮೇಲೆದ್ದ ಕಲ್ಲುಗಳಿಂದ ಸಂಚಾರ ದುಸ್ಥರವಾಗಿದೆ.

ಸಾಹಿತಿ ಬೇಸರ: ರಸ್ತೆಯ ನಿರ್ಮಾಣ ಕಾಮಗಾರಿಯಿಂದಾಗಿ ಮನೆಗಳಿಗೆ ಹಾಕಿಕೊಂಡಿದ್ದ ನೀರು, ಶೌಚಾಲಯ, ಚರಂಡಿ ಪೈಪುಗಳು ಹಾಳಾಗಿವೆ. ಮನೆ ಒಳಗೆ ವಾಹನಗಳನ್ನು ನಿಲ್ಲಿಸಲು, ನಿಲ್ಲಿಸಿದ್ದನ್ನು ಹೊರತೆಗೆಯಲು ಸಾಧ್ಯವಾಗದಷ್ಟು ಆಳಕ್ಕೆ ರಸ್ತೆ ಹಗೆಯಲಾಗಿದೆ. ಇದರಿಂದ ದೂರದ ಯಾರಧ್ದೋ ಮನೆಗಳಲ್ಲಿ ವಾಹನ ನಿಲ್ಲಿಸುವ ಅನಿವಾರ್ಯತೆ ಇದೆ. ಕಾಮಗಾರಿ ಬೇಗ ಮುಗಿದ್ರೆ ಸಹಿಸಿಕೊಳ್ಳಬಹುದು. ಆದರೆ, ವಾರ, ತಿಂಗಳು ಕಳೆದ್ರೂ ಹಗೆದ ರಸ್ತೆಗಳು, ಕಿತ್ತು ಹಾಕಿದ ಪೈಪ್‌ಲೈನ್‌ ಸಂಪರ್ಕ ಸರಿಪಡಿಸದೇ ಇದ್ದರೆ ಹೇಗೆ ಎಂದು ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಶಿವಪ್ಪ ಅರಿವು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಸರಿಯಾಗಿ ಮಾಡಲ್ಲ: ಪೂರ್ವ ಯೋಜನೆ ಇಲ್ಲದೇ, ಪೈಪ್‌ಲೈನ್‌, ಕೇಬಲ್, ಮುಂತಾದ ಕಾರಣಗಳಿಗಾಗಿ ನಗರಸಭೆ ಅಧಿಕಾರಿಗಳು ರಸ್ತೆ ಹಗೆಯುತ್ತಲೇ ಇರುತ್ತಾರೆ. ಗುಂಡಿ ತೆಗೆದು ಎರಡು ವಾರಗಳಾದ್ರೂ ನೀರಿನ ಪೈಪ್‌ ಹಾಕದೇ ಸತಾಯಿಸುತ್ತಿದ್ದಾರೆ. ಒಂದು ದಿನ ಕೆಲಸ ನಡೆದರೆ ಮೂರು ದಿನ ಇತ್ತ ತಲೆಯೂ ಹಾಕುವುದಿಲ್ಲ. ಪೈಪುಗಳು ರಸ್ತೆಯಲ್ಲಿ ಬಿದ್ದಿರುವುದು ಕಂಡು ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೀರು ಸೋರುತ್ತಿದೆ ಎಂಬ ಕಾರಣಕ್ಕೆ ಇತ್ತೀಚಿಗೆ ನಡು ರಸ್ತೆಯಲ್ಲಿ ದೊಡ್ಡ ಗುಂಡಿ ತೆಗೆಯಲಾಗಿದೆ. ಅದನ್ನು ಮುಚ್ಚುವ ಗೋಜಿಗೆ ಹೋಗಿಲ್ಲ. ಮೂರು ದಿನಗಳಿಂದ ವಾಹನ ಸಂಚಾರ ನಿಂತು ಹೋಗಿದೆ. ಕ್ರಮಬದ್ದ ಕೆಲಸವಾಗಲಿ, ಸಮಯ ಮಿತಿಯಲ್ಲಿ ಪೂರ್ಣಗೊಳಿಸುವ ಲಕ್ಷಣಗಳಾಗಲಿ ಕಾಣುತ್ತಿಲ್ಲ. ಜನಸಾಮಾನ್ಯರಲ್ಲಿ ತಳಮಳ ಉಂಟಾಗಿದೆ. ಹದಗೆಟ್ಟ ರಸ್ತೆಗಳು ಸುಧಾರಣೆಯಾಗಬೇಕೆಂದು ಎಲ್ಲರೂ ಬಯ ಸುತ್ತಾರಾದರೂ ದುರಸ್ತಿಗೆ ತೆಗೆದುಕೊಳ್ಳುವ ಕಾಲ ನೋಡಿ ಬೆಚ್ಚಿ ಬೀಳುವಂತಾಗಿದೆ.

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.