ವೈಜಿಎಫ್-2; ಎರಡನೇ ಮಗುವಿನ ನಿರೀಕ್ಷೆಯಲ್ಲಿ ಯಶ್-ರಾಧಿಕಾ ದಂಪತಿ
Team Udayavani, Jun 27, 2019, 3:01 AM IST
ಇತ್ತೀಚೆಗಷ್ಟೆ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮೊದಲ ಮಗುವಿನ ನಾಮಕರಣ ಸಮಾರಂಭ ಸಡಗರದಿಂದ ಅದ್ಧೂರಿಯಾಗಿ ನೆರವೇರಿತ್ತು. ಯಶ್-ರಾಧಿಕಾ ದಂಪತಿ ತಮ್ಮ ಪುತ್ರಿಗೆ ಐರಾ ಎಂದು ಹೆಸರಿಟ್ಟಿದ್ದರು. ಯಶ್ ಕುಟುಂಬ ವರ್ಗ ಮತ್ತು ಅಭಿಮಾನಿಗಳು ಈ ಕಾರ್ಯಕ್ರಮ ಕಂಡು ಸಂಭ್ರಮಿಸಿದ್ದರು.
ಇದರ ಬೆನ್ನಲ್ಲೇ ಯಶ್ ತಮ್ಮ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಎನ್ನುವಂಥ ಸುದ್ದಿಯನ್ನು ನೀಡಿದ್ದಾರೆ. ಅದೇನೆಂದರೆ, ರಾಧಿಕಾ ಪಂಡಿತ್ ಈಗ 4 ತಿಂಗಳ ಗರ್ಭಿಣಿಯಾಗಿದ್ದು, ಯಶ್-ರಾಧಿಕಾ ದಂಪತಿ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೌದು, ಸ್ವತಃ ಯಶ್ ಅವರೇ ಇಂಥದ್ದೊಂದು ಸುದ್ದಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ.
YGF chapter 2 ❤❤??
ಮತ್ತೊಂದು ಸಿಹಿ ಸುದ್ದಿ
ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ? pic.twitter.com/u7qxVOA71R
— Yash (@TheNameIsYash) June 26, 2019
ಈ ಬಗ್ಗೆ ಸ್ವತಃ ಯಶ್ ಅವರೇ ತಮ್ಮ ಮಗಳ ವಿಡಿಯೋ ಮೂಲಕ ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ವೈಜಿಎಫ್ ಚಾಪ್ಟರ್ 2, ಮತ್ತೊಂದು ಸಿಹಿ ಸುದ್ದಿ ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ಯಶ್ ನೀಡಿರುವ ಸಿಹಿ ಸುದ್ದಿಯನ್ನು ಕೇಳಿ ಖುಷಿಯಾಗಿರುವ ಅಭಿಮಾನಿಗಳು ಕೂಡ ರಾಕಿಂಗ್ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
Introducing our lil angel.. ❤
ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ❤❤❤ ಹರಸಿ ಹಾರೈಸಿ??… pic.twitter.com/fjFxk4u8dG— Yash (@TheNameIsYash) June 23, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.