ಬೇಲಾಡಿ: ಕಿರು ಸೇತುವೆ ವಿಸ್ತರಣೆ ಅಗತ್ಯ
Team Udayavani, Jun 27, 2019, 5:23 AM IST
ಬೆಳ್ಮಣ್: ಕಾರ್ಕಳ ತಾಲೂಕಿನ ಬೋಳದಿಂದ ಕಾಂತಾವರ ಬೇಲಾಡಿಗೆ ಸಂಪರ್ಕ ಬೆಸೆಯುವ ಕಿರು ಸೇತುವೆ ಬಹಳ ಇಕ್ಕಟ್ಟಾಗಿದೆ. ಇದರಿಂದ ಇಲ್ಲಿ ವಾಹನಗಳ ಸಂಚಾರ ಕಷ್ಟಕರವಾಗಿದೆ.
ಸರಣಿ ಅಪಘಾತ
ಕಾಂತಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಲಾಡಿಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆ ಇಕ್ಕಟ್ಟಾಗಿರುವುದರಿಂದ ಎರಡು ವಾಹನಗಳು ಏಕಕಾಲಕ್ಕೆ ಸಂಚರಿಸಲು ಸಾಧ್ಯವಿಲ್ಲ. ಸೇತುವೆಯ ಎರಡೂ ಬದಿಗಳಲ್ಲಿ ತಿರುವು ಹಾಗೂ ತಗ್ಗು ಪ್ರದೇಶವಿರುವುದರಿಂದ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಅಪಘಾತಕ್ಕೊಳಗಾಗುತ್ತವೆ.
ಮೂಡುಬಿದಿರೆ ಬಲು ಹತ್ತಿರ
ಮಂಜರಪಲ್ಕೆಯಿಂದ ಬೋಳ ಮಾರ್ಗವಾಗಿ ಕಾಂತಾವರ, ಬೆಳುವಾಯಿ ಹಾಗೂ ಮೂಡುಬಿದಿರೆ ಮುಖ್ಯ ಪೇಟೆ ಪ್ರದೇಶವನ್ನು ಸೇರಲು ಹತ್ತಿರದ ರಸ್ತೆಯಾದ ಪರಿಣಾಮ ಬಹುತೇಕ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. ಎಲ್ಲ ಕಡೆ ರಸ್ತೆಗಳು ಅಭಿವೃದ್ಧಿಯಾಗಿದ್ದರೂ ಬೇಲಾಡಿಯ ಈ ಕಿರು ಸೇತುವೆ ಮತ್ತು ರಸ್ತೆ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲ. ಈ ಭಾಗದ ಸಾಕಷ್ಟು ಗ್ರಾಮಸ್ಥರು ಪ್ರತಿ ಬಾರಿಯೂ ಸ್ಥಳೀಯಾಡಳಿತಕ್ಕೆ, ಶಾಸಕರಿಗೆ, ಜನಪ್ರತಿನಿಧಿಗಳಿಗೆ ಮನವಿಯನ್ನು ಮಾಡಿದ್ದು ಇಲ್ಲಿಯ ವರೆಗೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈ ಕಿರು ಸೇತುವೆಯ ಅಭಿವೃದ್ಧಿ ಕೂಡಲೇ ಆಗಬೇಕಾಗಿದೆ ಎನ್ನುವುದು ಕಾಂತಾವರ ಹಾಗೂ ಬೇಲಾಡಿ ಗ್ರಾಮಸ್ಥರ ಹಲವು ವರ್ಷಗಳಲ್ಲಿ ಬೇಡಿಕೆಯಾಗಿದೆ.
ಬಿರುಕು ಬಿಟ್ಟಿದೆ
ಕಿರು ಸೇತುವೆ ಅತ್ಯಂತ ಹಳೆಯ ಸೇತುವೆಯಾಗಿದ್ದು ತಳ ಭಾಗದ ಕಲ್ಲುಗಳು ಮಳೆಯ ನೀರಿನಲ್ಲಿ ಜಾರಿ ಹೋಗಿವೆ. ಇದರಿಂದ ಸೇತುವೆ ಬಿರುಕುಬಿಟ್ಟಿದೆ. ಸೇತುವೆಯ ಪಿಲ್ಲರುಗಳು ಕೂಡ ಅಲ್ಲಲ್ಲಿ ಬಿರುಕುಬಿಟ್ಟಿವೆ. ಸೇತುವೆ ತಡೆಗೋಡೆಯೂ ಒಂದು ಭಾಗದಲ್ಲಿ ಮುರಿದು ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.