ಪ್ರಜಾಪ್ರಭುತ್ವ ಸಂರಕ್ಷಣೆ ದಿನ ಆಚರಣೆ
ತುರ್ತುಪರಿಸ್ಥಿತಿ ಹೋರಾಟಗಾರರ ಸಂಘಟನೆ
Team Udayavani, Jun 27, 2019, 5:20 AM IST
ಕುಂಬಳೆ: ಕಳೆದ 1975 ಜೂ. 25ರಂದು ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿ ಯವರು ಮಧ್ಯರಾತ್ರಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿ ವಾಕ್ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯವನ್ನು ಕಸಿಯಲೆತ್ನಿಸಿದ ವಿರುದ್ಧ ಸಂಘ ಪರಿವಾರದ ಕಾರ್ಯಕರ್ತರು ಇದನ್ನು ಸಂಘಟಿತರಾಗಿ ಪ್ರತಿಭಟಿಸಿದರು.
ಅಧಿಕಾರದ ಯಾವುದೇ ಆಸೆ ಆಮಿಷ ಗಳಿಲ್ಲದೆ ಪ್ರತಿಫಲದ ಅಪೇಕ್ಷೆಯಿಲ್ಲದೆ ಪೊಲೀಸರ ಕ್ರೂರ ಹಿಂಸೆಯನ್ನು ಸಹಿಸಿ ಕೆಚ್ಚೆದೆಯಿಂದ ಹೋರಾಡಿದ ಸಂಘ ಪರಿವಾರ ಸ್ವಯಂಸೇವಕರ ಬಲಿದಾನ ಮತ್ತು ನಿಸ್ವಾರ್ಥಸೇವೆಯ ಪ್ರತಿಫಲವಾಗಿ ಇಂದು ಓರ್ವ ಸ್ವಯಂಸೇವಕ ದೇಶಪ್ರೇಮಿ ತುರ್ತುಪರಿಸ್ಥಿತಿ ಹೋರಾಟಗಾರ ದೇಶದ ಪ್ರಧಾನಿಯಾಗಲು ಸಾಧ್ಯವಾಯಿತೆಂಬು ದಾಗಿ ಬಿ.ಜೆ.ಪಿ. ಕಣ್ಣೂರು ವಲಯಾಧ್ಯಕ್ಷ ಪಿ.ಪಿ. ಕರುಣಾಕರನ್ ಮಾಸ್ತರ್ ಹೇಳಿದರು.
ಆಸೋಸಿಯೇಶನ್ ಆಫ್ ದಿ ಎಮರ್ಜೆನ್ಸಿ ವಿಕ್ಟಿಮ್ಸ್ ಕೇರಳ ಇದರ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಟೌನ್ ಬ್ಯಾಂಕ್ ಸಭಾಭವನದಲ್ಲಿ ಜರಗಿದ ಪ್ರಜಾಪ್ರಭುತ್ವ ಸಂರಕ್ಷಣೆಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಸುಮಾರು ಏಳು ಸಹಸ್ರದಷ್ಟು ಮಂದಿ ನೈಜ ತುರ್ತುಪರಿಸ್ಥಿತಿ ಹೋರಾಡಿದವರು ಸಂಕಷ್ಟ ಜೀವನ ನಡೆಸುತ್ತಿದ್ದಾರೆ. ಇವರ ನೆರವಿಗೆ ಸರಕಾರ ಮುಂದಾಗಬೇಕೆಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಿ. ರವೀಂದ್ರನ್ ಅಧ್ಯಕ್ಷತೆ ವಹಿಸಿದರು. ರಾ.ಸ್ವ.ಸೇ. ಸಂಘದ ಕಾಸರಗೋಡು ನಗರ ಸಂಘ ಚಾಲಕ್ ಕೆ.ಟಿ. ಕಾಮತ್, ಟೌನ್ ಬ್ಯಾಂಕ್ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.