ಅರಂತೋಡು-ಮರ್ಕಂಜ ರಸ್ತೆ ಕೆಸರುಮಯ
200 ಮೀ. ರಸ್ತೆಗೆ ಮಣ್ಣು ಹಾಕಿ ಸಮತಟ್ಟು ಮಾಡಿದ್ದರಿಂದ ಸಮಸ್ಯೆ
Team Udayavani, Jun 27, 2019, 5:00 AM IST
ಅರಂತೋಡು: ಅರಂತೋಡು-ಅಂಗಡಿಮಜಲು- ಮರ್ಕಂಜ ರಸ್ತೆ ಕೆಸರುಮಯವಾಗಿದ್ದು ಜನರು ನಡೆದಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅರಂತೋಡು-ಕುಕ್ಕುಂಬಳ-ಅಂಗ ಡಿಮಜಲು ರಸ್ತೆಯ ಮೂಲಕ ಅತೀ ಹತ್ತಿರವಾಗಿ ಮರ್ಕಂಜ ಗ್ರಾಮವನ್ನು ಸೇರಬಹುದಾಗಿದೆ. ಮಾತ್ರವಲ್ಲದೆ ಅಂಗಡಿಮಜಲು-ಅಡ್ಕಬಳೆ -ಕುಕ್ಕುಂಬಳ ಬಳಿ ನೂರಾರು ಮನೆಗಳಿವೆ. ಈ ಭಾಗದ ಜನರು ಈ ರಸ್ತೆಯ ಮೂಲಕವೇ ಅರಂತೋಡು ಗ್ರಾಮವನ್ನು ಸಂಪರ್ಕ ಮಾಡಬೇಕಾಗಿದೆ. ಇದೀಗ ಅಂಗಡಿಮಜಲು ಬಳಿ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ನಡೆದಾಡಲು ಜನರು ನರಕಯಾತನೆ ಅನುಭವಿಸುವಂತಾಗಿದೆ.
ಕೆಸರಾದ ಮಣ್ಣು
ಅಂಗಡಿಮಜಲು ಸಮೀಪ ಬಲ್ನಾಡು ಹೊಳೆಗೆ ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದ್ದು, ಈ ಸಂದರ್ಭ ರಸ್ತೆಗೆ ಸೇತುವೆ ಕಾಮಗಾರಿ ನಡೆಸುವವರು ಸುಮಾರು 200 ಮೀಟರ್ ಉದ್ದಕ್ಕೆ ಮಣ್ಣು ಹಾಕಿ ಸಮತಟ್ಟು ಮಾಡಿದ್ದರು. ಮಳೆ ಪ್ರಾರಂಭವಾದ ಕೂಡಲೇ ಮಣ್ಣು ಹಾಕಿದ ರಸ್ತೆಯ ಭಾಗ ಸಂಪೂರ್ಣ ಕೆಸರು ಗದ್ದೆಯಾಗಿ ಪರಿವರ್ತನೆಯಾಗಿದೆ.
ಹರಡಿಕೊಂಡಿವೆ ಜಲ್ಲಿ
ಕುಕ್ಕುಂಬಳ ಸಮೀಪ ರಸ್ತೆಯ ಡಾಮರು ಕಾಮಗಾರಿ ಕಿತ್ತು ಹೋಗಿ ಜಲ್ಲಿಕಲ್ಲುಗಳು ರಸ್ತೆಯದ್ದಕ್ಕೂ ಹರಡಿ ಕೊಂಡಿದ್ದು, ಇದರಲ್ಲಿ ವಾಹನ ಸಂಚರಿಸುವಾಗ ಜಲ್ಲಿಕಲ್ಲುಗಳು ವಾಹನದ ಚಕ್ರಗಳಿಗೆ ಸಿಲುಕಿ ಪಾದಚಾರಿಗಳ ಮೇಲೆ ಸಿಡಿಯುತ್ತಿವೆ. ಇದರಿಂದ ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ಅಪಾಯ ಎದುರಾಗಿದೆ. ಸಂಬಂಧಪಟ್ಟವರು ಈ ಸಮಸ್ಯೆಯ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಾಂಕ್ರೀಟ್ ರಸ್ತೆ ಮಾಡಿಕೊಡಿ
– ನೀಲಾವತಿ ಕೊಡಂಕೇರಿ ಅಧ್ಯಕ್ಷರು, ಅರಂತೋಡು ಗ್ರಾಮ ಪಂಚಾಯತ್
ಕ್ರಮ ಕೈಗೊಳ್ಳಿ
-ಆಶೀತ್ ಅರಂತೋಡು ಸ್ಥಳೀಯರು
•ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.