ಕಿವೀಸ್‌ಗೆ ಶಾಕ್ ಕೊಟ್ಟ ಪಾಕ್ ಸೆಮಿಫೈನಲ್ ರೇಸ್‌ನಲ್ಲಿ
Team Udayavani, Jun 27, 2019, 5:02 AM IST
ಬರ್ಮಿಂಗ್‌ಹ್ಯಾಮ್: ಬುಧವಾರದ ಮಹತ್ವದ ವಿಶ್ವಕಪ್ ಮೇಲಾಟದಲ್ಲಿ ಪಾಕಿಸ್ಥಾನ ಅಜೇಯ ನ್ಯೂಜಿಲ್ಯಾಂಡನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಮೇಲೇರಿದೆ. ಸೆಮಿಫೈನಲ್ ರೇಸ್‌ನಲ್ಲಿ ತಾನೂ ಇದ್ದೇನೆ ಎಂದು ಎಚ್ಚರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತೀವ್ರ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿ 6 ವಿಕೆಟಿಗೆ 237 ರನ್ ಗಳಿಸಿತು. ಜವಾಬಿತ್ತ ಪಾಕಿಸ್ಥಾನ ಬಾಬರ್ ಆಜಂ ಅವರ ಆಕರ್ಷಕ ಅಜೇಯ ಶತಕದಿಂದಾಗಿ 49.1 ಓವರ್‌ಗಳಲ್ಲಿ 4 ವಿಕೆಟಿಗೆ 241 ರನ್ ಪೇರಿಸಿ ಜಯಭೇರಿ ಬಾರಿಸಿತು.
ಇದು 7 ಪಂದ್ಯಗಳಲ್ಲಿ ಪಾಕಿಸ್ಥಾನಕ್ಕೆ ಒಲಿದ 3ನೇ ಗೆಲುವು. ಇನ್ನೊಂದೆಡೆ ನ್ಯೂಜಿಲ್ಯಾಂಡ್ 7 ಪಂದ್ಯಗಳಲ್ಲಿ ಮೊದಲ ಸೋಲುಂಡಿತು. ಈ ಸೋಲಿನ ಹೊರತಾಗಿಯೂ ಕಿವೀಸ್ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ. ಪಾಕ್ ಉಳಿದೆರಡೂ ಪಂದ್ಯಗಳನ್ನು ಗೆದ್ದರೆ ಮೇಲೇರುವ ಸಾಧ್ಯತೆ ಇದೆ.
ಚೇಸಿಂಗ್ ವೇಳೆ ಬಾಬರ್ ಆಜಂ ಮತ್ತು ಹ್ಯಾರಿಸ್ ಸೊಹೈಲ್ ಸೇರಿಕೊಂಡು ಕಿವೀಸ್ ಮೇಲೆ ಸವಾರಿ ಮಾಡಿದರು. ನಾಲ್ಕನೇ ವಿಕೆಟಿಗೆ 126 ರನ್ನುಗಳ ಜತೆಯಾಟ ನಡೆಸಿ ತಂಡದ ಗೆಲುವು ಖಚಿತಪಡಿಸಿದರು. ಆಜಂ 101 ರನ್ ಸಿಡಿಸಿ ಅಜೇಯರಾಗಿ ಉಳಿದರೆ ಹ್ಯಾರಿಸ್ 68 ರನ್ ಹೊಡೆದರು.
27ನೇ ಓವರಿನಲ್ಲಿ 83 ರನ್ನಿಗೆ 5 ವಿಕೆಟ್ ಕಳೆದುಕೊಂಡು ಚಡಪಡಿಸುತ್ತಿದ್ದ ನ್ಯೂಜಿಲ್ಯಾಂಡಿಗೆ ನೀಶಮ್-ಗ್ರ್ಯಾಂಡ್‌ಹೋಮ್ ಜೋಡಿಯ 132 ರನ್ ಜತೆಯಾಟ ಹೊಸ ಜೀವ ತುಂಬಿತು. ನೀಶಮ್ ಅಜೇಯ ಬ್ಯಾಟಿಂಗ್ ನಡೆಸಿ 97 ರನ್ ಬಾರಿಸಿದರೆ, ಗ್ರ್ಯಾಂಡ್‌ಹೋಮ್ 64 ರನ್ ಮಾಡಿದರು. ಗ್ರ್ಯಾಂಡ್‌ಹೋಮ್ ರನೌಟಾಗುವುದರೊಂದಿಗೆ ಈ ಸುದೀರ್ಘ ಜತೆಯಾಟ ಮುರಿಯಲ್ಪಟ್ಟಿತು. ಆದರೆ ನೀಶಮ್ ಕೊನೆಯ ತನಕ ಹೋರಾಟ ಮುಂದುವರಿಸಿದರು. ಕೇವಲ 3 ರನ್ನಿನಿಂದ ಮೊದಲ ಶತಕದ ಸಂಭ್ರದಿಂದ ವಂಚಿತರಾದರು.
ಪಾಕ್ ಬೌಲಿಂಗ್ ದಾಳಿಯನ್ನು ಯಾವುದೇ ಅಳುಕಿಲ್ಲದೆ ನಿಭಾಯಿಸಿದ ಎಡಗೈ ಬ್ಯಾಟ್ಸ್‌ಮನ್ ನೀಶಮ್ ಒಟ್ಟು 112 ಎಸೆತ ಎದುರಿಸಿದರು. ಹೊಡೆದದ್ದು 5 ಬೌಂಡರಿ, 3 ಸಿಕ್ಸರ್. ಗ್ರ್ಯಾಂಡ್‌ಹೋಮ್ 71 ಎಸೆತಗಳಿಂದ ಇನ್ನಿಂಗ್ಸ್ ಕಟ್ಟಿದರು. ಇದರಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು.
ನ್ಯೂಜಿಲ್ಯಾಂಡಿನ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಹೋರಾಟ ನಡೆಸಿದ್ದು ನಾಯಕ ಕೇನ್ ವಿಲಿಯಮ್ಸನ್ ಮಾತ್ರ. ಅವರು 69 ಎಸೆತಗಳಿಂದ 41 ರನ್ ಮಾಡಿದರು. ಆರಂಭಿಕರಾದ ಮಾರ್ಟಿನ್ ಗಪ್ಟಿಲ್ (5), ಕಾಲಿನ್ ಮುನ್ರೊ (12) ಅವರ ವೈಫಲ್ಯ ಮತ್ತೆ ಮುಂದುವರಿಯಿತು. ರಾಸ್ ಟೇಲರ್ (3) ಅಪರೂಪದ ವೈಫಲ್ಯ ಕಂಡರು. ಕೀಪರ್ ಟಾಮ್ ಲ್ಯಾಥಂ (1) ಕೂಡ ಕ್ಲಿಕ್ ಆಗಲಿಲ್ಲ.
ಎಡಗೈ ಮಧ್ಯಮ ವೇಗಿ ಶಾಹೀನ್ ಅಫ್ರಿದಿ ಕಿವೀಸ್ ಪಾಲಿಗೆ ಕಂಟಕವಾಗಿ ಪರಿಣಮಿಸಿದರು. 10 ಓವರ್‌ಗಳಲ್ಲಿ 3 ಮೇಡನ್ ಮಾಡಿ 28 ರನ್ನಿತ್ತು 3 ವಿಕೆಟ್ ಕಿತ್ತರು.
ಸ್ಕೋರ್ ಪಟ್ಟಿ
ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್ ಬಿ ಆಮಿರ್ 5
ಕಾಲಿನ್ ಮುನ್ರೊ ಸಿ ಸೊಹೈಲ್ ಬಿ ಅಫ್ರಿದಿ 12
ಕೇನ್ ಮಿಲಿಯಮ್ಸನ್ ಸಿ ಸಫìರಾಜ್ ಬಿ ಶಾದಾಬ್ 41
ರಾಸ್ ಟೇಲರ್ ಸಿ ಸಫìರಾಜ್ ಬಿ ಅಫ್ರಿದಿ 3
ಟಾಮ್ ಲ್ಯಾಥಮ್ ಸಿ ಸಫìರಾಜ್ ಬಿ ಅಫ್ರಿದಿ 1
ಜೇಮ್ಸ್ ನೀಶಮ್ ಔಟಾಗದೆ 97
ಗ್ರ್ಯಾಂಡ್‌ಹೋಮ್ ರನೌಟ್ 64
ಮಿಚೆಲ್ ಸ್ಯಾಂಟ್ನರ್ ಔಟಾಗದೆ 5
ಇತರ 9
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 237
ವಿಕೆಟ್ ಪತನ: 1-5, 2-24, 3-38, 4-46, 5-83, 6-215.
ಬೌಲಿಂಗ್:
ಮೊಹಮ್ಮದ್ ಹಫೀಜ್ 7-0-22-0
ಮೊಹಮ್ಮದ್ ಆಮಿರ್ 10-0-67-1
ಶಾಹೀನ್ ಅಫ್ರಿದಿ 10-3-28-3
ಇಮಾದ್ ವಾಸಿಮ್ 3-0-17-0
ಶಾದಾಬ್ ಖಾನ್ 10-0-43-1
ವಹಾಬ್ ರಿಯಾಜ್ 10-0-55-0
ಪಾಕಿಸ್ಥಾನ
ಇಮಾಮ್ ಉಲ್ ಹಕ್ ಸಿ ಗಪ್ಟಿಲ್ ಬಿ ಫರ್ಗ್ಯುಸನ್ 19
ಫಕಾರ್ ಜಮಾನ್ ಸಿ ಗಪ್ಟಿಲ್ ಬಿ ಬೌಲ್ಟ್ 9
ಬಾಬರ್ ಆಜಂ ಔಟಾಗದೆ 101
ಹಫೀಜ್ ಸಿ ಫರ್ಗ್ಯುಸನ್ ಬಿ ವಿಲಿಯಮ್ಸನ್ 32
ಹ್ಯಾರಿಸ್ ಸೊಹೈಲ್ ರನೌಟ್ 68
ಸಫìರಾಜ್ ಅಹ್ಮದ್ ಔಟಾಗದೆ 5
ಇತರ 7
ಒಟ್ಟು(49.1ಓವರ್‌ಗಳಲ್ಲಿ 4 ವಿಕೆಟಿಗೆ) 241
ವಿಕೆಟ್ ಪತನ: 1-19, 2-44, 3-110, 4-236.
ಬೌಲಿಂಗ್:
ಟ್ರೆಂಟ್ ಬೌಲ್ಟ್ 10-0-48-1
ಮ್ಯಾಟ್ ಹೆನ್ರಿ 7-0-25-0
ಲ್ಯಾಕಿ ಫರ್ಗ್ಯುಸನ್ 8.1-0-50-1
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 2-0-12-0
ಮಿಚೆಲ್ ಸ್ಯಾಂಟ್ನರ್ 10-0-38-0
ಜೇಮ್ಸ್ ನೀಶಮ್ 3-0-20-0
ಕೇನ್ ವಿಲಿಯಮ್ಸನ್ 8-0-39-1
ಕಾಲಿನ್ ಮುನ್ರೊ 1-0-9-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.