ಮತ್ತೆ ಕೇಳುತ್ತಿದೆ ಗಿರಿಗಿಟ್ ಸದ್ದು
Team Udayavani, Jun 27, 2019, 5:00 AM IST
ಮತ್ತೆ ‘ಗಿರಿಗಿಟ್’ ಸೌಂಡ್ ಜೋರಾಗಿದೆ. ಪೋಸ್ಟರ್ ಹಾಗೂ ಒಂದೊಂದು ಡೈಲಾಗ್ ಮೂಲಕವೇ ಸಾಮಾಜಿಕ ಜಾಲತಾಣ ದಲ್ಲಿ ಸುದ್ದಿಯಲ್ಲಿರುವ ‘ಗಿರಿಗಿಟ್’ ಸದ್ಯ ಕೋಸ್ಟಲ್ವುಡ್ನಲ್ಲಿ ಚರ್ಚೆ ಹುಟ್ಟುಹಾಕಿದೆ.
ರೂಪೇಶ್ ಶೆಟ್ಟಿ ಅವರು ಮೊದಲು ಆ್ಯಕ್ಷನ್ ಕಟ್ ಹೇಳಿದ ಸಿನೆಮಾವಿದು. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರ ಸಮ್ಮಿಲನದೊಂದಿಗೆ ಗಿರಿಗಿಟ್ ಮೇಲೆ ಭಾರೀ ನಿರೀಕ್ಷೆ ಮೂಡಿದೆ.
ಫೇಮಸ್ ಕಲಾವಿದರ ವಿಭಿನ್ನ ಅಭಿನಯದ ಚಿತ್ರಗಳು ಕೋಸ್ಟಲ್ವುಡ್ನಲ್ಲಿ ಹೊಸ ಮೂಡ್ ಕ್ರಿಯೇಟ್ ಮಾಡಿದೆ. ಅರವಿಂದ ಬೋಳಾರ್ ‘ಕೋದಂಡ’ ಎಂಬ ಲಾಯರ್ ಲುಕ್ನಲ್ಲಿದ್ದರೆ, ವಾಮಂಜೂರು ಯಕ್ಷಗಾನದ ವೇಷ ಹಾಕಿದ ಪೋಸ್ಟರ್ ಇತ್ತೀಚೆಗೆ ಸುದ್ದಿಯಾಗಿತ್ತು. ನವೀನ್ ಡಿ.ಪಡೀಲ್ ಮಿಲಿಟ್ರಿ ಗೆಟಪ್ನಲ್ಲಿ
ಮೀಸೆ ಮಾಮನಾಗಿ ಕಾಣಿಸಿ ಕೊಂಡಿದ್ದರು. ಈಗ ಉಮೇಶ್ ಮಿಜಾರ್ ಅವರ ಹಳ್ಳಿ ಗೆಟಪ್ನ ವಿಭಿನ್ನ ಶೈಲಿಯ ಪೋಸ್ಟರ್ ಅನ್ನು ರಿಲಿಸಿ ಮಾಡಲಾಗಿದ್ದು ಸದ್ಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಜತೆಗೆ, ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಕಲಾ ಆರ್ಟ್ಸ್ ತಂಡದ ಮಾಲೀಕರ ಗೆಟಪ್ ನಲ್ಲಿದ್ದು, ಕೆಲವೇ ದಿನಗಳಲ್ಲಿ ಪೋಸ್ಟರ್ ಕೂಡ ಬಿಡುಗಡೆಯಾಗಲಿದೆ.
••••ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.