ಕಾಲುವೆಯಲ್ಲಿದ್ದವು ಸಜೀವ ಬಾಂಬ್
Team Udayavani, Jun 27, 2019, 6:00 AM IST
ಬೆಂಗಳೂರು/ರಾಮನಗರ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳಿಂದ ಬಂಧಿತನಾಗಿರುವ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಹಬೀಬುರ್ ರೆಹಮಾನ್ ಶೇಕ್ ಅಲಿಯಾಸ್ ಶೇಖ್ ಬಂಧನ ಪ್ರಕರಣ ಕಳೆದ ಒಂದು ವರ್ಷದಿಂದ ಭೂಮಿ ಯೊಳಗೆ ಬಚ್ಚಿಟ್ಟಿದ್ದ’ ಸ್ಫೋಟಕ ರಹಸ್ಯ’ ಬಿಚ್ಚಿಟ್ಟಿದೆ.
ನ್ಯಾಯಾಲಯದ ಅನುಮತಿಯೊಂದಿಗೆ ಐದು ದಿನ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದ ಎನ್‌ಐಎ ಅಧಿಕಾರಿಗಳ ಮುಂದೆ ರಾಮನಗರದಲ್ಲಿ ಬಚ್ಚಿಟ್ಟಿದ್ದ ಎಂಟು ಬಾಂಬ್‌ಗಳ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಎನ್‌ಐಎ, ರಾಮನಗರ ದಲ್ಲಿನ ರಾಜಕಾಲುವೆಯಲ್ಲಿ ಬಚ್ಚಿಟ್ಟಿದ್ದ ಎರಡು ಸಜೀವ ಬಾಂಬ್ ಜಪ್ತಿಪಡಿಸಿಕೊಂಡಿದ್ದಾರೆ. ಉಳಿದ ಆರು ಬಾಂಬ್‌ಗಳ ಪತ್ತೆಗೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದ ಜತೆ ಸಹ ಕಾರ್ಯಾಚರಣೆ ನಡೆಯುತ್ತಿದೆ.
ಜೆಎಂಬಿ ಉಗ್ರ ಸಂಘಟನೆಯ ಪ್ರಮುಖ ಕೌಸರ್‌ನ ಸಂಬಂಧಿಯೂ ಆಗಿದ್ದ ಹಬೀಬುರ್ 2014ರಿಂದಲೂ ಆತನ ಜತೆಗೆ ವಾಸಿಸುತ್ತಿದ್ದ. ಕಳೆದ ವರ್ಷ ಆಗಸ್ಟ್‌ನಲ್ಲಿ ಕೌಸರ್ ಬಂಧನವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ರಾಜಧಾನಿಯ ಹೊರವಲಯ ಪ್ರದೇಶಗಳಲ್ಲಿ ಆಶ್ರಯಪಡೆದುಕೊಂಡಿದ್ದ. ಕೌಸರ್ ಬಂಧನಕ್ಕೂ ಮುನ್ನ ಎಚ್ಚೆತ್ತುಕೊಂಡಿದ್ದ ಆತನ ಪತ್ನಿ ಹಾಗೂ ಹಬೀಬುರ್ ಮನೆಯಲ್ಲಿಟ್ಟಿದ್ದ ಬಾಂಬ್‌ಗಳನ್ನು ಪಡೆದು ಹೊರಗಡೆ ಬಂದಿದ್ದರು. ಈ ವೇಳೆ ರಾಜಕಾಲುವೆ ಸೇರಿದಂತೆ ಹಲವು ಕಡೆ ಬಚ್ಚಿಟ್ಟಿರುವ ಸಾಧ್ಯತೆಯಿದೆ.
ರಾಮನಗರದಲ್ಲಿ ಬಾಂಬ್ ತಯಾರಿ!: ಸುಧಾರಿತ ಸ್ಫೋಟಕ ಸಾಧನ (ಐಇಡಿ)ತಯಾರಿಸುವಲ್ಲಿ ನಿಪುಣ ನಾಗಿದ್ದ ಕೌಸರ್, ಬಾಂಬ್ ತಯಾರಿಕೆಯನ್ನು ಹಬೀ ಬುರ್‌ಗೂ ಕಲಿಸಿದ್ದ.2014ರ ಬುಧ್ರ್ವಾನ್ ಮನೆ ಯೊಂದರಲ್ಲಿ ಬಾಂಬ್ ಸ್ಫೋಟ ಘಟನೆ ಬಯಲಿಗೆ ಬರುತ್ತಿದ್ದಂತೆ ಇಬ್ಬರೂ ಜತೆಯಾಗಿ ದಕ್ಷಿಣ ರಾಜ್ಯಗಳತ್ತ ತಲೆಮರೆಸಿಕೊಳ್ಳಲು ಬಂದಿದ್ದರು.
ರಾಜಧಾನಿಯ ಹಲವೆಡೆ ತಂಗಿದ್ದ ಅವರು ಅಂತಿಮವಾಗಿ ರಾಮನಗರದಲ್ಲಿ ಬಂದು ನೆಲೆಸಿದ್ದರು.
ಕೌಸರ್ ಹಾಗೂ ಹಬೀಬುರ್ ಮೇಲೆ ಕಣ್ಣಿದ್ದ ಎನ್‌ಐಎ 2018ರ ಆಗಸ್ಟ್ 7ರಂದು ರಾಮನಗರದಲ್ಲಿ ಕೌಸರ್‌ನನ್ನು ಬಂಧಿಸುವ ಕೆಲವೇ ದಿನಗಳ ಮುನ್ನ, ಹಬೀಬುರ್ ಬಾಂಬ್‌ಗಳನ್ನು ಬಚ್ಚಿಡಲಾಗಿತ್ತು.
ಐಇಡಿ ಸ್ಫೋಟಕ ತಯಾರಿಕೆಯಲ್ಲಿ ನಿಪುಣರಾಗಿದ್ದ ಆರೋಪಿಗಳಿಬ್ಬರು ರಾಮನಗರದಲ್ಲಿ ಉಳಿದುಕೊಂಡಿದ್ದ ಮನೆಯಲ್ಲಿ ಬಾಂಬ್ ತಯಾರಿಸಿ, 2018ರಲ್ಲಿ ನಡೆದ ಬೋಧ್‌ಗಯಾ ಸ್ಫೋಟಕ್ಕೆ ರವಾನಿಸಿದ್ದರೇ ಅಥವಾ ಬೇರೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜತೆಗೆ, ಬೆಂಗಳೂರು ಹೊರವಲಯದಲ್ಲಿ ದರೋಡೆ ಕೃತ್ಯಗಳಲ್ಲಿ ಕೌಸರ್ ಭಾಗಿಯಾಗಿರುವುದು ಈಗಾಗಲೇ ತನಿಖೆಯಲ್ಲಿ ಗೊತ್ತಾಗಿದ್ದು, ಹಬೀಬುರ್ ಪಾತ್ರದ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಧಾರ್ ಕಾರ್ಡ್ ಹೊಂದಿದ್ದ ಹಬೀಬುರ್!: ರಾಮನಗರದಿಂದ ವಾಸ್ತವ್ಯ ಬದಲಿಸಿದ್ದ ಹಬೀಬುರ್ ಕೆಲತಿಂಗಳು ಆಶ್ರಯಪಡೆದುಕೊಂಡಿದ್ದ. ಇತ್ತೀಚೆಗಷ್ಟೇ ಮೌಲ್ವಿಯೊಬ್ಬರ ಸಹಕಾರದಿಂದ ದೊಡ್ಡಬಳ್ಳಾಪುರಕ್ಕೆ ಬಂದು ನೆಲೆಸಲು ಸಿದ್ಧತೆ ನಡೆಸಿದ್ದ. ಆತ ಆಧಾರ್ ಕಾರ್ಡ್ ಕೂಡ ಹೊಂದಿದ್ದ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.