ಬಾಲ್ಯದ ಮಳೆಗಾಲ
Team Udayavani, Jun 28, 2019, 5:00 AM IST
ಸಾಂದರ್ಭಿಕ ಚಿತ್ರ
ಆಹಾ! ಎಷ್ಟು ಚೆಂದ ನಮ್ಮ ಬಾಲ್ಯತನ. ಆ ಆಟಗಳು, ಕುಣಿದಾಟ, ಮಕ್ಕಳಾಟ, ಹೊಡೆದಾಟ ಎಲ್ಲವೂ ಮತ್ತೂಮ್ಮೆ ಬಂದರೆ . ಮಳೆಗಾಲದಲ್ಲಂತೂ ಕೇಳುವುದೇ ಬೇಡ ಸಡಗರ. ಶಾಲಾ ಆರಂಭದ ದಿನಗಳಲ್ಲೇ ಮಳೆಗಾಲದ ಪ್ರಾರಂಭ. ಆಗಂತೂ ಖುಷಿಯೇ ಖುಷಿ. ಅಮ್ಮನ ಜೊತೆ ಹಠಮಾಡಿ ಅತ್ತು ಹೋಗಿ ತರುತ್ತಿದ್ದ ಬಣ್ಣದ ಕೊಡೆಗಳು ಇಂದಿಗೂ ಕಣ್ಮುಂದೆ ಇದೆ.
ಮಳೆಗಾಲ ಬಂತೆಂದರೆ ನಮ್ಮೂರ ಬಯಲುಗಳು, ಹೊಳೆ-ಬಾವಿಗಳು ತುಂಬಿ ಹರಿಯುವ ಸೊಬಗು ನೋಡಲು ಕಣ್ಣಿಗೆ ಎಷ್ಟೊಂದು ತಂಪು. ಹೊಳೆಯ ನೀರು ಉಕ್ಕಿ ಹರಿದು ನೆರೆ ಹತ್ತುವುದನ್ನು ದೂರದಿಂದ ನೋಡಬೇಕು. ಎಂಥ ಸುಂದರ ದೃಶ್ಯ! ಮಳೆಯ ಜೊತೆ ಗದ್ದೆಯನ್ನು ಉಳುವುದು, ಭತ್ತ ನೆನೆ ಹಾಕಿ ಬಿತ್ತುವುದು, ನಾಟಿ ಮಾಡುವುದು ಎಷ್ಟು ಖುಷಿ. ಮಳೆಗಾಲದ ದಿನಗಳಲ್ಲಿ ಬಯಲಂಚಿನಲ್ಲಿ ಒಮ್ಮೆ ನಿಂತರೆ ಮನಸ್ಸು ಶಾಂತವಾಗಿಬಿಡುತ್ತದೆ. ಮಳೆಗಾಲ ಬಂದರೆ ಎಷ್ಟೋ ದಿನಗಳನ್ನು ಗದ್ದೆಯಲ್ಲೇ ಕಳೆದದ್ದುಂಟು. ಇನ್ನು ಶಾಲೆಯ ಕಡೆ ಬಂದರೆ ಮೋಜು, ಮಸ್ತಿ, ಕುಣಿದಾಟ ಕೇಳಬೇಕೆ? ಸ್ನೇಹಿತರೊಂದಿಗೆ ಮಳೆಯಲ್ಲಿ ಆಟ, ಊಟದ ಬಟ್ಟಲನ್ನು ಮಾಡಿನ ನೀರಿನಲ್ಲಿ ತೊಳೆದು ನೀರು ಚುಮುಕಿಸುವ ತುಂಟಾಟ ಎಷ್ಟು ಸೊಗಸು. ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರಕ್ಕೇನು ಕಮ್ಮಿ ಇಲ್ಲ. ಒಬ್ಬರಿಗೆ ಬಂತೆಂದರೆ ಸಾಕು ಇಡೀ ತರಗತಿಗೆ ಹರಡುತ್ತಿತ್ತು. ಅಮ್ಮ ಬಾಟಲಿಗೆ ತುಂಬಿಸಿಕೊಡುತ್ತಿದ್ದ ಬಿಸಿನೀರಿನ ಜೊತೆ ಶಾಲೆಯಲ್ಲಿಟ್ಟ ಡ್ರಮ್‌ನ ನೀರನ್ನು ಕುಡಿದು ಆರೋಗ್ಯ ಕೆಡಿಸಿಕೊಂಡು ಅಮ್ಮನ ಬೈಗುಳ ಕೇಳುವ ಮಜಾವೇ ಬೇರೆ. ಮನೆಗೆ ಹೋಗುವಾಗ ಮಳೆ-ಗಾಳಿ ರಭಸಕ್ಕೆ ಕೊಡೆ ಎಲ್ಲೋ ನಾವೆಲ್ಲೋ ಆಗಿ ಪೂರ್ತಿ ಒದ್ದೆಯಾಗಿ ಅಮ್ಮನ ಬೈಗುಳದ ಮಧ್ಯೆಯೂ ಅವಳು ಪ್ರೀತಿಯಿಂದ ಮಾಡಿಟ್ಟ ಒಂದು ಲೋಟ ಬಿಸಿ ಹಾಲಿನೊಂದಿಗೆ ಕರಿದ ಕರುಂ ಕರುಂ ಹಪ್ಪಳವನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಅಂಗಳದ ತುಂಬ ನೀರು ನಿಂತಾಗ ಕಾಗದದ ದೋಣಿ ಬಿಟ್ಟು ಅದರ ಹಿಂದೆ ಹೋಗಿ ಜಾರಿಬಿದ್ದ ಸವಿನೆನಪು ಎಂದಿಗೂ ಮಾಸದು. ಬಾಲ್ಯವೆಂದರೆ ಹಾಗೆ. ಕುಣಿದಾಟ, ಹೊಡೆದಾಟ, ಏನೂ ಅರಿಯದ ಮುಗ್ಧತೆ ಅದು. ಆದರೆ, ಈಗ ದೊಡ್ಡವರಾಗಿದ್ದೇವೆ ಎನ್ನುವ ಮುಜುಗರ.
ಮೊದಲಿನ ಕಾಲ ಎಷ್ಟು ಚೆಂದ. ಈಗ ಎಲ್ಲವೂ ಬದಲಾಗಿದೆ. ಮೊದಲೆಲ್ಲ ಬೇಸಿಗೆಯಲ್ಲಿ ನಮ್ಮೂರಿನ ಬಾವಿಯ ನೀರು ಒಣಗುತ್ತಿರಲಿಲ್ಲ. ಆದರೆ, ಈಗ ನೀರಿಗಾಗಿ ಪರದಾಟ. ಎಲ್ಲಿ ಹೋದರೂ ಕೇಳುವುದು ನಿಮ್ಮಲ್ಲಿ ನೀರಿದೆಯಾ ಎಂಬ ಪ್ರಶ್ನೆ.
ನಯನಾ ಶೆಟ್ಟಿ
ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.