ಓದಿನ ಸುಖ ನೋಡುವುದರಲ್ಲಿಲ್ಲ: ವಿರಾಜ್‌

ಕವನ, ವ್ಯಂಗ್ಯಚಿತ್ರ ತರಬೇತಿ

Team Udayavani, Jun 28, 2019, 5:36 AM IST

27KSDE7

ಮುಳ್ಳೇರಿಯ: ಸಾಹಿತ್ಯದ ಮೂಲಕ ವಿಚಾರಗಳ ಮಂಥನ ಹಾಗೂ ಶಬ್ದಗಳ ಹೂರಣದಿಂದ ಭಾಷೆಯ ಜೀವಂತಿಕೆಯ ಸತ್ವದ ಅನಾವರಣವಾಗುತ್ತದೆ. ಸಾಹಿತ್ಯ ಮನಸ್ಸಿಗೆ ಹಿತ ನೀಡುವುದು. ಆಧುನಿಕ ದೃಶ್ಯ ಮಾಧ್ಯಮಗಳು ಎಷ್ಟೇ ಪ್ರಬಲವಾಗಿದ್ದರೂ, ಅಕ್ಷರ ಮಾಧ್ಯಮಕ್ಕೆ ಸೋಲಿಲ್ಲ. ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಓದುವುದರಲ್ಲಿನ ಖುಷಿ ನೋಡುವುದರಲ್ಲಿಲ್ಲ ಎಂದು ಸಾಹಿತಿ ವಿರಾಜ್‌ ಅಡೂರು ಹೇಳಿದರು.

ಅವರು ಕುಂಟಾರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನ ವಾರಾಚರಣೆಯ ಅಂಗವಾಗಿ ನಡೆದ ವ್ಯಂಗ್ಯಚಿತ್ರ ಹಾಗೂ ಕವನ ರಚನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕವನಗಳನ್ನು ಪ್ರಾಸಬದ್ಧತೆಯ ಸಹಜ ಹೊಂದಾಣಿಕೆಯ ಮೂಲಕ ಅರ್ಥವತ್ತಾಗಿ ಬರೆಯಬೇಕು. ಕವನ ರಚನೆಗೆ ವಿಷಯಗಳ ಸಂಗ್ರಹ ಅಗತ್ಯ. ವಿಷಯಗಳ ಸಂಗ್ರಹವು ಓದುವಿಕೆಯಿಂದ ಮಾತ್ರ ಸಾಧ್ಯ. ಮಕ್ಕಳಲ್ಲಿ ಓದುವಿಕೆಯ ಆಸಕ್ತಿಯನ್ನು ಹೆಚ್ಚಿಸಲು ವಾಚನಾ ವಾರಾಚರಣೆ ಪ್ರಯೋಜನಕಾರಿ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವ್ಯಂಗ್ಯಚಿತ್ರ ರಚನೆಯ ಬಗ್ಗೆಯೂ ಮಕ್ಕಳಿಗೆ ತರಬೇತಿ ನೀಡಲಾಯಿತು.

ಜಗದೀಶ್‌ ಮಾಸ್ತರ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತೃ ಪಿಟಿಎ ಅಧ್ಯಕ್ಷೆ ತಾಹಿರಾ, ಮುಖ್ಯ ಶಿಕ್ಷಕಿ ಪ್ರಶಾಂತಾ, ಶಿಕ್ಷಕಿಯರಾದ ಆಶಾ, ದಾಕ್ಷಾಯಿಣಿ, ಹಾಜಿರಾ ಮೊದಲಾದವರು ಉಪಸ್ಥಿತರಿದ್ದರು.

ನಮಿತಾ ಸ್ವಾಗತಿಸಿದರು. ಸಮೀಕ್ಷಾ ವಂದಿಸಿದರು. ಶಿಕ್ಷಕಿ ಸುಮಂಗಲಾ ತಂತ್ರಿ ನಿರೂಪಿಸಿದರು.

ವಾಚನ ವಾರಾಚರಣೆಯಲ್ಲಿ ಸುಮಾರು 50ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಾಚನ ವಾರಾಚರಣೆಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳದಲ್ಲೇ ನಡೆದ ವ್ಯಂಗ್ಯಚಿತ್ರ ಹಾಗೂ ಕವನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಟಾಪ್ ನ್ಯೂಸ್

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

10

Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್‌ ಸ್ಟಾರ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Suri Loves Sandhya movie teaser

Suri Loves Sandhya: ಟೀಸರ್‌ನಲ್ಲಿ ಸೂರಿ ಲವ್‌ ಸ್ಟೋರಿ

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

3

Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.