ಮಾದಕ ವಸ್ತು ಬಳಸದಿರಿ :ಅನೀಶ್
ಪೆರಡಾಲ ಶಾಲೆ: ಮಾದಕದ್ರವ್ಯ ವಿರೋಧಿ ದಿನ
Team Udayavani, Jun 28, 2019, 5:44 AM IST
ಬದಿಯಡ್ಕ: ಶೋಕಿಗಾಗಿ ಆರಂಭವಾಗುವ ಹವ್ಯಾಸಗಳಾದ ಧೂಮಪಾನ, ಮದ್ಯಪಾನ, ಗುಟ್ಕಾ ಸೇವನೆ ಮಾನವನ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಬಾಲ್ಯ ಕಾಲದಲ್ಲಿಯೇ ಇಂತಹ ವಿಚಾರಗಳಿಂದ ದೂರವಿದ್ದು ಸಕಾರಾತ್ಮಕ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಕಾಸರಗೋಡು ಚೈಲ್ಡ್‌ಲೈನ್ ಇಲಾಖೆ ಅಧಿಕಾರಿ ಅನೀಶ್ ಹೇಳಿದರು.
ಪೆರಡಾಲ ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ವಿಶೇಷ ತರಗತಿ ನಡೆಸಿ ಅವರು ಮಾತನಾಡುತ್ತಿದ್ದರು. ಮಾರುಕಟ್ಟೆಯಲ್ಲಿನ ಕೆಲವು ಚಾಕೋಲೇಟ್ ನಂತಹ ವಸ್ತುಗಳ ಬಗ್ಗೆಯೂ ಎಚ್ಚರವಹಿಸಬೇಕೆಂದು ಅವರು ಸೂಚಿಸಿದರು.
ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆಯನ್ನು ಪ್ರಮೋದ ಕುಮಾರ್ ಬೋಧಿಸಿದರು. ಚಂದ್ರಹಾಸ ನಂಬಿಯಾರ್, ಎಲಿಯಾಜ್, ಅಬ್ದುಲ್ ಅಜೀಜ್, ಡೋನಾ ಶುಭಾಶಂಸನೆಗೈದರು. ಪ್ರಭಾರ ಮುಖ್ಯ ಶಿಕ್ಷಕಿ ದಿವ್ಯಗಂಗಾ ಪಿ. ಸ್ವಾಗತಿಸಿದರು. ಗೋಪಾಲಕೃಷ್ಣ ಭಟ್ ವಂದಿಸಿದರು. ಶ್ರೀಧರನ್ ಕಾರ್ಯಕ್ರಮ ನಿರೂಪಿಸಿದರು. ಮಾದಕದ್ರವ್ಯ ವಿರೋಧಿ ಪೋಸ್ಟರ್‌ಗಳನ್ನು ರಚಿಸಲಾಯಿತು. ಲಲಿತಾಂಬಾ, ರಿಶಾದ್, ಜಯಲತಾ, ಶ್ರೀಧರ ಭಟ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.