ಬೆಳೆಯುತ್ತಿರುವ ಬಂಟ್ವಾಳಕ್ಕೀಗ ಹೊಳೆಯುವ ಸರದಿ


Team Udayavani, Jun 28, 2019, 5:00 AM IST

35

ಒಂದು ರಾಷ್ಟ್ರೀಯ ಹೆದ್ದಾರಿ ಸಾಗಿಹೋದ ಮಾತ್ರಕ್ಕೆ ಊರು ಬೆಳೆಯುವುದಿಲ್ಲ, ಅಭಿವೃದ್ಧಿ ಹೊಂದುವುದಿಲ್ಲ. ಹಾಗೆ ಬೆಳೆಯಬೇಕೆಂದರೆ ಆ ಅವಕಾಶವನ್ನು ಬಳಸಿಕೊಂಡು ಬೆಳೆಯುವ ಉದ್ಯಮ ಶೀಲತೆ ಸ್ಥಳೀಯರಿಗಿರಬೇಕು. ಅದು ಬಂಟ್ವಾಳದಲ್ಲಿ ಕಾಣುತ್ತಿರುವುದು ಸುಳ್ಳಲ್ಲ.

ಬಂಟ್ವಾಳ: ಹತ್ತು ವರ್ಷಗಳಲ್ಲಿ ಬಂಟ್ವಾಳ ಬಹಳಷ್ಟು ಬದಲಾಗಿದೆ ! ಈ ಮಾತು ಬರಿದೇ ಮಾತಲ್ಲ; ಒಂದು ಸುತ್ತು ಹಾಕಿ ಬಂದರೆ ಸಾಕಷ್ಟು ನಿದರ್ಶನಗಳು ಕಣ್ಣಿಗೆ ಕಾಣುತ್ತವೆ. ಹತ್ತು ವರ್ಷಗಳ ಹಿಂದೆ ಇರದ ಮಿನಿ ವಿಧಾನಸೌಧ ಈಗ ಬಂದಿದೆ. ಬಿ.ಸಿ. ರೋಡ್‌ ಪೇಟೆ ಇಷ್ಟೊಂದು ಬೆಳೆದಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಕೇವಲ ತಾಲೂಕು ಕೇಂದ್ರವಲ್ಲದೇ ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.

ಊರಿನೊಳಗೇ ಹಾದು ಹೋಗುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಬಂಟ್ವಾಳದ, ವಿಶೇಷವಾಗಿ ಬಿ.ಸಿ. ರೋಡ್‌, ಮೆಲ್ಕಾರ್‌, ಕಲ್ಲಡ್ಕ, ಮಾಣಿಯಂಥ ಪ್ರದೇಶಗಳ ಕ್ಷಿಪ್ರಗತಿಯ ಬೆಳವಣಿಗೆ ಕೊಡುಗೆ ನೀಡಿರುವುದು ಸುಳ್ಳಲ್ಲ. ಹಾಗೆಂದು ಸಮಸ್ಯೆಗಳು ಉಳಿದಿಲ್ಲವೆಂದು ಹೇಳುತ್ತಿಲ್ಲ, ಬೆಳೆಯುತ್ತಿರುವ ನಗರಕ್ಕೆ ಮತ್ತಷ್ಟು ಮೂಲ ಸೌಕರ್ಯ ಒದಗಬೇಕಿದೆ.

ಬಂಟ್ವಾಳ ಪ್ರದೇಶ ವಾಣಿಜ್ಯ ನಗರಿಯ ಪಟ್ಟ ಕಟ್ಟಿಕೊಂಡದ್ದು ಇಂದಲ್ಲ; ಬಹಳ ಹಿಂದೆಯೇ. ಚರಿತ್ರೆಯ ಮಾಹಿತಿಗಳ ಪ್ರಕಾರ ಪರ್ಸಿಯನ್‌ ಗಲ್ಫ್ ರಾಷ್ಟ್ರಗಳೊಂದಿಗೆ ವಾಣಿಜ್ಯ ವ್ಯವಹಾರವನ್ನು ಇಟ್ಟುಕೊಂಡಿದ್ದ ಕೆನರಾ ಪ್ರಾಂತದ ದೊಡ್ಡ ಪಟ್ಟಣ ಬಂಟ್ವಾಳ. ವಾಸ್ತವವಾಗಿ ಕೆನರಾ ಪ್ರಾಂತ್ಯದ ಅತಿ ದೊಡ್ಡ ತಾಲೂಕು ಎಂಬ (411 ಗ್ರಾಮಗಳು) ಕೀರ್ತಿಗೂ ಭಾಜನವಾಗಿತ್ತು. ಈಗ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕಾಗಿ ಬೆಳೆದಿದೆ.

ತನ್ನ ಮುಷ್ಠಿಯಲ್ಲಿ ಹೆಚ್ಚು ಗ್ರಾಮೀಣ ಪ್ರದೇಶವನ್ನೇ ಒಳಗೊಂಡು ಕೃಷಿ ಪ್ರಧಾನ ತಾಲೂಕಾಗಿಯೇ ಬಿಂಬಿಸಿಕೊಂಡಿರುವುದು ವಿಶೇಷ. ಒಟ್ಟು 735 ಚದರ ಕಿ.ಮೀ. ವಿಸ್ತೀರ್ಣಕ್ಕೆ ವ್ಯಾಪಿಸಿಕೊಂಡು, ಪ್ರಸ್ತುತ 4,13,803 (ಪ್ರೊಜೆಕ್ಟೆಡ್‌ ಪಾಪ್ಯು ಲೇಶನ್‌) ಜನಸಂಖ್ಯೆಯನ್ನು ಒಳಗೊಂಡಿದೆ.

ಬಂಟ್ವಾಳ ಪುರಸಭೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್‌ ಸೇರಿದಂತೆ 2 ನಗರ ಸ್ಥಳೀಯ ಸಂಸ್ಥೆ ಹಾಗೂ ಒಟ್ಟು 58 ಗ್ರಾ.ಪಂ.ಗಳಿವೆ. ಜಿಲ್ಲೆಯಲ್ಲೇ ಅತಿ ಹೆಚ್ಚು ಗ್ರಾ.ಪಂ.ಗಳನ್ನು ಹೊಂದಿರುವ ತಾಲೂಕು. ಒಟ್ಟು 9 ಜಿ.ಪಂ. ಸದಸ್ಯರು ಹಾಗೂ 34 ತಾ.ಪಂ.ಸದಸ್ಯರಿದ್ದಾರೆ.

ಇಡೀ ತಾಲೂಕಿನ ಅಭಿವೃದ್ಧಿಗೆ ಎಲ್ಲ ನೆಲೆಯ ಜನಪ್ರತಿನಿಧಿಗಳು ಸೇರಿದಂತೆ, ಕೃಷಿಕರು, ವಾಣಿಜ್ಯ ಬೆಳೆಗಾರರು, ಉದ್ಯಮಿಗಳು, ಗೃಹ ಕೈಗಾರಿಕೋದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ವರ್ತಕರು ಹಾಗೂ ಇತರೆ ವೃತ್ತಿ ಬಾಂಧವರ ಕೊಡುಗೆ ಅನನ್ಯ.

2009 ರ ಲೋಕಸಭಾ ಚುನಾವಣೆಗೆ ಮೊದಲು ಉಡುಪಿ ಲೋಕಸಭಾ ಕ್ಷೇತ್ರದ ಭಾಗವಾಗಿದ್ದ ಬಂಟ್ವಾಳವು ಪ್ರಸ್ತುತ ದ.ಕ.ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ತಾಲೂಕಿನ ಬಹುತೇಕ ಪ್ರದೇಶ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೂ ಉಳಿದ ಪ್ರದೇಶ ಪುತ್ತೂರು ಹಾಗೂ ಮಂಗಳೂರು ಕ್ಷೇತ್ರಗಳಿಗೆ ಹಂಚಿಹೋಗಿದೆ.

ಪ್ರಸ್ತುತ ಉಳ್ಳಾಲ ತಾಲೂಕು ಘೋಷಣೆಯಾಗಿದ್ದು, ಬಂಟ್ವಾಳದ ಒಂದಷ್ಟು ಪ್ರದೇಶಗಳು ಉಳ್ಳಾಲಕ್ಕೆ ಸೇರಲಿವೆ. ಅದಕ್ಕೆ ಪರ-ವಿರೋಧ ಕೇಳಿಬರುತ್ತಿದೆ. ತಾಲೂಕು ಕೇಂದ್ರವಾದ ಬಿ.ಸಿ.ರೋಡು ಅಗಾಧವಾಗಿ ಬೆಳೆಯುತ್ತಿದ್ದು, ಸುಸಜ್ಜಿತ ನಗರವಾಗಿ ರೂಪುಗೊಳ್ಳುತ್ತಿದೆ. ತಾಲೂಕಿನ ಶಕ್ತಿಕೇಂದ್ರದಂತಿರುವ ಬಿ.ಸಿ.ರೋಡಿನಲ್ಲೇ ಮಿನಿ ವಿಧಾನಸೌಧ, ನ್ಯಾಯಾಲಯ ಸಂಕೀರ್ಣ, ಪೊಲೀಸ್‌ ಉಪವಿಭಾಗದ ಎಎಸ್‌ಪಿ ಕಚೇರಿ, ಮೆಸ್ಕಾಂ ಉಪವಿಭಾಗ ಕಚೇರಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ತಾ.ಪಂ.ಕಚೇರಿ, ಶಾಸಕರ ಕಚೇರಿ, ಹಲವು ಸರಕಾರಿ ಶಾಲೆಗಳು ಬಿ.ಸಿ.ರೋಡು ಸುತ್ತಮುತ್ತಲೇ ಇರುವುದು ಜನತೆಗೆ ಅನುಕೂಲಕರ ಎನಿಸಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲ ಇರುವುದೂ ಇದೇ ತಾಲೂಕಿನಲ್ಲಿ.

ಮುಖ್ಯವಾಗಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ, ಪ್ರಯಾಣಿಕರ ತಂಗುದಾಣ ಇತ್ಯಾದಿ ಕಾಮಗಾರಿಗಳು ಆಗಬೇಕಿದೆ. ಗ್ರಾಮೀಣ ಭಾಗದಲ್ಲಿಯೂ ರಸ್ತೆ, ವಿದ್ಯುತ್‌, ಕುಡಿಯುವ ನೀರಿನ ಸಮಸ್ಯೆಗಳಿಗೂ ಪರಿಹಾರ ಸಿಗಬೇಕಿದೆ. ಹೊಸ ಅಭಿವೃದ್ಧಿ ಗತಿಯಲ್ಲಿ ಸಾಗುತ್ತಿರುವ ತಾಲೂಕಿಗೆ ಇನ್ನಷ್ಟು ಅನುದಾನದ ಉತ್ತೇಜನ ಸಿಕ್ಕರೆ ಹೆಚ್ಚು ಅನುಕೂಲವಾದೀತೆಂಬುದು ಜನರ ಆಗ್ರಹ. ಒಂದು ಹೆದ್ದಾರಿ ಸಾಗಿ ಹೋದ ಮಾತ್ರಕ್ಕೆ ಎಲ್ಲವೂ ಅಭಿವೃದ್ಧಿ ಗೊಳ್ಳುವುದಿಲ್ಲ. ಸ್ಥಳೀಯ ಆಡಳಿತ ಮತ್ತು ಸ್ಥಳೀಯರು ಅದನ್ನು ಅವಕಾಶವಾಗಿ ದುಡಿಸಿಕೊಳ್ಳುವ ಜಾಣ್ಮೆ ತೋರಬೇಕು. ಅದು ಇಲ್ಲಿ ತೋರುತ್ತಿದೆ. ಈ ಜಾಣ್ಮೆಯ ಜತೆಗೆ ನಗರೀಕರಣದ ಸುಳಿಯೊಳಗೆ ಕರಗಿ ಹೋಗದಂತೆ ಎಚ್ಚರ ಕಾದುಕೊಳ್ಳಬೇಕಿದೆ. ಹಾಗೆಂದರೆ, ಬೆಳವಣಿಗೆಯನ್ನು ವಿರೋಧಿಸುವುದಲ್ಲ, ಬೆಳವಣಿಗೆಗೆ ತಕ್ಕಂತೆ ಸೂಕ್ತ ಹಾಗೂ ಅತ್ಯುತ್ತಮ ಮೂಲ ಸೌಕರ್ಯಗಳನ್ನು ಹೊಂದುವುದು. ಅದಾದರೆ ಬಂಟವಾಳ ಯಾವಾಗಲೂ ಹೊಳೆಯುತ್ತಿರುತ್ತದೆ.

2011 ಜನಗಣತಿ ಪ್ರಕಾರ…
ಒಟ್ಟು ಜನಸಂಖ್ಯೆ 3, 95, 380
ಪುರುಷರು 1, 96, 708
ಮಹಿಳೆಯರು 1,98,672
ಗ್ರಾಮೀಣ ಪ್ರದೇಶ 2,79,482
ನಗರ ಪ್ರದೇಶ 1,15,898

ಮಂಗಳೂರು ನಗರಕ್ಕೆ ನೀರನ್ನು ಒದಗಿಸುವ ತುಂಬೆ ಡ್ಯಾಂ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿದ್ದು, ವಿದ್ಯುತ್‌ ಉತ್ಪಾದನೆಯ ಎಎಂಆರ್‌ ಡ್ಯಾಂ ಸಹ ಇದೆ. ಜತೆಗೆ ಎಂಆರ್‌ಪಿಎಲ್, ಎಂಎಸ್‌ಇಝಡ್‌ಗೆ ಕೂಡ ತಾಲೂಕಿನ ಸರಪಾಡಿ ಗ್ರಾಮದಲ್ಲಿರುವ ನೇತ್ರಾವತಿ ನದಿಯಿಂದ ನೀರು ಪೂರೈಕೆಯಾಗುತ್ತಿದೆ.ತಾಲೂಕು ಕೇಂದ್ರ ಸಹಿತ ಬಹುತೇಕ ಗ್ರಾಮೀಣ ಭಾಗದಲ್ಲಿ ಹರಿಯುತ್ತಿರುವ ಜೀವನದಿ ನೇತ್ರಾವತಿಯು ಇಲ್ಲಿಯ ಕೃಷಿಕರ ಆಶ್ರಯದಾತೆ. ತಾಲೂಕಿನ ಜನರ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕಳೆದ ಸರಕಾರದ ಅವಧಿಯಲ್ಲಿ ಒಟ್ಟು 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಕೆಲವು ಪೂರ್ತಿಗೊಂಡಿದ್ದು, ಇನ್ನು ಕೆಲವು ಪ್ರಗತಿಯಲ್ಲಿವೆ.

ಉದಯವಾಣಿಯ ಬಂಟ್ವಾಳ ಕಚೇರಿ ಇಂದು ಶುಭಾರಂಭಗೊಳ್ಳುತ್ತಿದೆ. ವಿಳಾಸ: ಮಿನಿ ವಿಧಾನ ಸೌಧದ ಎದುರುಗಡೆ ಕಟ್ಟಡ, ಪ್ರಥಮ ಮಹಡಿ, ಬಿ.ಸಿ. ರೋಡ್‌, ಬಂಟ್ವಾಳ

ಕಿರಣ್‌ ಸರಪಾಡಿ
ಚಿತ್ರಗಳು: ಕಿಶೋರ್‌ ಪೆರಾಜೆ

ಟಾಪ್ ನ್ಯೂಸ್

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.