ಭಾರತ ಮೂಲದ ಮಗು ಕೊಂದವನಿಗೆ ಜೀವಾವಧಿ
Team Udayavani, Jun 28, 2019, 5:18 AM IST
ಡಲ್ಲಾಸ್: ಅಮೆರಿಕದ ಟೆಕ್ಸಾಸ್ನಲ್ಲಿ ಎರಡು ವರ್ಷಗಳ ಹಿಂದೆ ಭಾರತ ಮೂಲದ ಶೆರಿನ್ ಮ್ಯಾಥ್ಯೂಸ್ ಎಂಬ ಮೂರು ವರ್ಷದ ಮಗುವಿನ ಹತ್ಯೆಗೆ ಕಾರಣವಾಗಿದ್ದ ಆಕೆಯ ದತ್ತು ತಂದೆ ವೆಸ್ಲೆ ಮ್ಯಾಥ್ಯೂಸ್ಗೆ ಟೆಕ್ಸಾಸ್ನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಿಹಾರದ ಅನಾಥರ ಆಶ್ರಮವೊಂದರಲ್ಲಿ ಇದ್ದ ಮೂಲತಃ ಸರಸ್ವತಿ ಎಂಬ ಹೆಸರಿನ ಈ ಮಗುವನ್ನು 2016ರಲ್ಲಿ ಮಗುವನ್ನು ಟೆಕ್ಸಾಸ್ನ ವೆಸ್ಲಿ ಮ್ಯಾಥ್ಯೂಸ್, ಸಿನಿ ಮ್ಯಾಥ್ಯೂಸ್ ಎಂಬ ದಂಪತಿ ದತ್ತು ಪಡೆದಿದ್ದರು. 2017ರ ಅಕ್ಟೋಬರ್ನಲ್ಲಿ ಮಗು ಹಾಲು ಕುಡಿಯಲು ನಿರಾಕರಿಸಿದ್ದಕ್ಕೆ ವೆಸ್ಲಿ ತೀವ್ರವಾಗಿ ಹೊಡೆದಿದ್ದರಿಂದ ಮಗು ಅಸುನೀಗಿತ್ತು. ಅದನ್ನು ಮುಚ್ಚಿಟ್ಟ ವೆಸ್ಲಿ, ಮಗುವನ್ನು ಚರಂಡಿ ನೀರು ಹರಿಯುವ ಸೇತುವೆಯ ಕೆಳಗೆ ಬಿಸಾಡಿ, ಮಗು ಕಾಣೆಯಾಗಿದೆ ಎಂದು ಪೊಲೀಸರಲ್ಲಿ ದೂರು ಕೊಟ್ಟಿದ್ದ. ಈ ಪ್ರಕರಣವನ್ನು ಭೇದಿಸಿದ್ದ ಪೊಲೀಸರು 2018ರಲ್ಲಿ ವೆಸ್ಲಿಯನ್ನು ಬಂಧಿಸಿದ್ದರು. ಈ ಪ್ರಕರಣದಿಂದ ಎಚ್ಚೆತ್ತ ಭಾರತ, ಕಾನೂನಾತ್ಮಕ ದತ್ತು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.