ಫಲಾನುಭವಿಗಳಿಗೆ ತಿಂಗಳಲ್ಲಿ ಡಬಲ್ ಪಿಂಚಣಿ!
ವಸೂಲಿ ಮಾಡಲು ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಸೂಚನೆ • ಖಾತೆಯಲ್ಲಿರುವ ಎಲ್ಲ ಹಣ ಜಪ್ತಿ
Team Udayavani, Jun 28, 2019, 9:18 AM IST
ಹುಳಿಯಾರಿನ ಸಂಧ್ಯಾಸುರಕ್ಷ ಪಿಂಚಣಿದಾರ ಚಂದ್ರಶೇಖರಪ್ಪ ಜಿಲ್ಲಾ ಖಜಾನೆಯಿಂದ ತಮಗಾದ ಅನ್ಯಾಯದ ಬಗ್ಗೆ ದಾಖಲೆ ಪತ್ರ ಪ್ರದರ್ಶಿಸಿದರು.
ಹುಳಿಯಾರು: ಪಿಂಚಣಿಗೆ ಸಂಬಂಧಿಸಿ ಕಂದಾಯ ಇಲಾಖೆಯ ಎಡವಟ್ಟಿಗೆ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಿದ್ದ ಹಿರಿಯರು ಅಲೆದಾಡುವಂತಾಗಿದೆ.
ವಸೂಲಿಗೆ ಡೀಸಿ ಸೂಚನೆ: ಜಿಲ್ಲಾ ಖಜಾನೆಯಿಂದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಡಬಲ್ ಪಿಂಚಣಿ ನೀಡಲಾಗಿದ್ದು, ತಿಂಗಳ ಆರಂಭ ಹಾಗೂ ಅಂತ್ಯದಲ್ಲಿ ಹಣ ಫಲಾನುಭವಿಗಳ ಖಾತೆಗೆ ಹಾಕಲಾಗಿದೆ. ಹೀಗೆ ಮಾಡಿರುವ ಎಡವಟ್ಟಿನಿಂದ ಜಿಲ್ಲೆಯ 130 ಫಲಾನುಭವಿಗಳ ಖಾತೆಗೆ ಒಟ್ಟು 9,88,450 ರೂ. ಹೆಚ್ಚುವರಿಯಾಗಿ ಜಮೆಯಾಗಿದೆ. ಫಲಾನುಭವಿ ಗಳಿಂದ ಹಣ ವಸೂಲಿ ಮಾಡುವಂತೆ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.
ಫಲಾಭವಿಗಳ ಖಾತೆ ಯಲ್ಲಿರುವ ಹಣ ಸರ್ಕಾರಕ್ಕೆ ಹಿಂಪಡೆಯಬೇಕು. ಖಾತೆಯಲ್ಲಿ ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ವಸೂಲಿ ಮಾಡಿ ಜಿಲ್ಲಾ ಖಜಾನೆ ಖಾತೆಗೆ ಜಮೆ ಮಾಡುವಂತೆ ಬ್ಯಾಂಕ್ ವ್ಯವಸ್ಥಾಪ ಕರಿಗೂ ಸೂಚನೆ ನೀಡಿದ್ದಾರೆ.
ಪಿಂಚಣಿಯೂ ವಸೂಲಿ: ಹೀಗೆ 3 ಸಾವಿರದಿಂದ 16,800 ರೂ. ವರೆಗೆ ಫಲಾನುಭವಿಗಳ ಖಾತೆಗೆ ಹೆಚ್ಚು ವರಿಯಾಗಿ ಜಮೆ ಮಾಡಿ ಈಗ ವಸೂಲಿ ಮಾಡುತ್ತಿದ್ದಾರೆ. ಆದರೆ ವಸೂಲಿ ಮಾಡುವಾಗ ಫಲಾನುಭವಿಗಳ ಮೂಲ ಪಿಂಚಣಿಯನ್ನೂ ವಸೂಲಿ ಮಾಡುತ್ತಿದ್ದು, ಇದರಿಂದ ಫಲಾ ನುಭವಿಗಳು ಕಂಗಾಲಾಗಿದ್ದಾರೆ. ಅಧಿ ಕಾರಿಗಳಿಗೆ ಮನವಿ ಸಲ್ಲಿಸಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕಂದಾಯ ಇಲಾಖೆ ಎಡವಟ್ಟಿಗೆ ತಾಲೂಕಿನ 130 ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾಧಿಕಾರಿಯಾದರೂ ಈ ಬಗ್ಗೆ ಗಮನ ಹರಿಸಿ ಅನ್ಯಾಯ ಸರಿಪಡಿಸಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.