ಮದ್ವೆ ಬಳಿಕ ಹೆಣ್ಮಕ್ಕಳ ಲೈಫ್ ಯಾಕೆ ಬದಲಾಗಬೇಕು?
ರಾಧಿಕಾ ಪಂಡಿತ್ ಸ್ಪಷ್ಟ ಮಾತು
Team Udayavani, Jun 29, 2019, 3:00 AM IST
“ಮದುವೆ ನಂತರ ಹೆಣ್ಮಕ್ಕಳ ಲೈಫ್ ಬದಲಾಗುತ್ತಾ? ಆ ಕಾಲ ಯಾವತ್ತೋ ಹೋಯ್ತು. ಮದುವೆ ಬಳಿಕವೂ ಅವರವರ ಕೆಲಸ ಮುಂದುವರೆಸುವುದು, ಬಿಡೋದು ಅವರವರ ನಿರ್ಧಾರಕ್ಕೆ ಬಿಟ್ಟದ್ದು…’ ಇದು ನಟಿ ರಾಧಿಕಾ ಪಂಡಿತ್ ಹೇಳಿದ ಮಾತು. ರಾಧಿಕಾ ಪಂಡಿತ್ ಮದುವೆ ಬಳಿಕ ಎಲ್ಲೂ ಮಾತಿಗೆ ಸಿಕ್ಕಿರಲಿಲ್ಲ. “ಆದಿ ಲಕ್ಷ್ಮಿ ಪುರಾಣ’ ಅವರು ಮದುವೆ ನಂತರ ನಟಿಸಿದ ಚಿತ್ರ.
ಜುಲೈನಲ್ಲಿ ಬಿಡುಗಡೆಯಾಗುತ್ತಿದೆ. ಈ ನೆಪದಲ್ಲಿ ಮಾತಿಗೆ ಸಿಕ್ಕ ರಾಧಿಕಾ ಪಂಡಿತ್, ತಮ್ಮ ಸಿನಿಮಾ ಜರ್ನಿ, ಯಶೋಮಾರ್ಗ ಇತ್ಯಾದಿ ವಿಷಯಗಳ ಕುರಿತು ಒಂದಷ್ಟು ಮಾತಾಡಿದ್ದಾರೆ. ಮದುವೆ ಆಯ್ತು, ಮಗಳೂ ಹುಟ್ಟಿದ್ದಾಳೆ, ಈಗ ಮತ್ತೂಂದು ಮಗುವಿನ ನಿರೀಕ್ಷೆಯಲ್ಲೂ ಇದ್ದೀರಿ. ಮುಂದೆ ಸಿನಿಮಾಗಳಲ್ಲಿ ನಟಿಸುತ್ತೀರಾ?
ಈ ಪ್ರಶ್ನೆಗೆ ಉತ್ತರವಾದ ರಾಧಿಕಾ ಪಂಡಿತ್, “ನನಗಂತು ಯಾವತ್ತೂ ಹಾಗೆ ಅನಿಸಿಲ್ಲ. “ಮದ್ವೆ ನಂತರ ನೀವು ನಟನೆ ಮುಂದುವರೆಸುತ್ತೀರಾ’ ಅಂತ ಸುಮಾರು ಜನ ಕೇಳಿದ್ದರು. ನನಗೆ ಆಗ ಅನಿಸಿದ್ದು, ಮದುವೆ ಬಳಿಕ ಹೆಣ್ಮಕ್ಕಳ ಲೈಫ್ ಬದಲಾಗುತ್ತಾ ಎಂಬುದು. ಆ ಕಾಲ ಹೋಯ್ತು. ನಾನು ಮದ್ವೆ ಬಳಿಕ ಸಿನಿಮಾ ಜರ್ನಿ ಮುಂದುವರೆಸುವುದು ಬಿಡುವುದು ನನಗೆ ಬಿಟ್ಟದ್ದು.
ಸದ್ಯಕ್ಕೆ ಈ ಎರಡು ವರ್ಷ ಫ್ಯಾಮಿಲಿಗೆ ಸಮಯ ಕೊಡುತ್ತಿದ್ದೇನೆ. ನಾನು ಮದುವೆ ನಂತರ ನಟಿಸಿದ “ಆದಿ ಲಕ್ಷ್ಮಿ ಪುರಾಣ’ ಚಿತ್ರ ಸ್ವಲ್ಪ ತಡ ಆಗಿದೆ. ಈಗ ಬಿಡುಗಡೆಗೆ ರೆಡಿಯಾಗುತ್ತಿದೆ. ಅಷ್ಟಕ್ಕೂ ನಾನು ಸಿನಿಮಾದವಳು. ಹಾಗಾಗಿ ಸಿನಿಮಾ ಕನೆಕ್ಷನ್ ಇದ್ದೇ ಇರುತ್ತೆ.ನನಗೆ ಸೂಟ್ ಆಗುವಂತಹ ಕಥೆ, ಪಾತ್ರ ಬಂದರೆ ಖಂಡಿತವಾಗಿಯೂ ನಟಿಸುತ್ತೇನೆ.
ಬರೀ ಸಿನಿಮಾ ಅಂತಾನೇ ಅಲ್ಲ, ಅದು ಪ್ರೊಡಕ್ಷನ್ ವಿಭಾಗವಾಗಲಿ, ಇನ್ಯಾವುದೋ ವಿಭಾಗದಲ್ಲಾಗಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ’ ಎಂಬುದು ರಾಧಿಕಾ ಪಂಡಿತ್ ಮಾತು. ಎಲ್ಲಾ ಸರಿ, ನಿಮ್ಮ ಯಶೋಮಾರ್ಗದಲ್ಲಿ ಏನೆಲ್ಲಾ ಕೆಲಸಗಳಾಗುತ್ತಿವೆ, ಮುಂದಿನ ಆಲೋಚನೆಗಳೇನು ಎಂಬ ಮಾತಿಗೆ, “ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು.
ಯಶೋಮಾರ್ಗ ಮೂಲಕ ಅಲ್ಲಿ ಕೈಲಾದ ಕೆಲಸ ಮಾಡಿದ್ದೇವೆ. ಅಜೆಂಡಾ ಪ್ಲಾನಿಂಗ್ ಇದೆ. ಅದನ್ನು ಹೇಳಬಾರದು. ನಾವು ಮಾಡಿದ ಕೆಲಸ ಮಾತಾಡಬೇಕು ವಿನಃ, ನಾವು ಆ ಬಗ್ಗೆ ಹೇಳಿಕೊಳ್ಳಬಾರದು. ಸದ್ಯಕ್ಕೆ ಎರಡು ಯೋಜನೆ ಕುರಿತು ಪ್ಲಾನಿಂಗ್ ಆಗುತ್ತಿದೆ. ಇನ್ನು, ನಿರ್ಮಾಣದ ವಿಷಯಕ್ಕೆ ಬಂದರೆ, ಈಗಂತೂ ಹೊಸಬಗೆಯ ಚಿತ್ರಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ.
ಸದ್ಯಕ್ಕೆ ಪ್ರೊಡಕ್ಷನ್ಸ್ ಯೋಚನೆ ಇಲ್ಲ. ಹಾಗೇನಾದರೂ ಪ್ರೊಡಕ್ಷನ್ಸ್ ಮಾಡಲು ನಿರ್ಧರಿಸಿದರೆ, ನನಗೆ ಇಂಟ್ರೆಸ್ಟ್ ಎನಿಸುವ, ವಿಭಿನ್ನವಾಗಿರುವ ಕಥೆ ಆಯ್ಕೆ ಮಾಡಿಕೊಂಡೇ ಚಿತ್ರ ನಿರ್ಮಾಣ ಮಾಡ್ತೀವಿ’ ಎಂಬುದು ಅವರ ಮಾತು. ಇವೆಲ್ಲದರ ನಡುವೆ, ಹಾಸನದಲ್ಲಿ ಜಮೀನು ಖರೀದಿಸಿರುವ ಕುರಿತು ಹೇಳುವ ಅವರು, “ನಾನು ಹುಟ್ಟಿದ್ದು, ಬೆಳೆದದ್ದು ಸಿಟಿಯಲ್ಲಿ.
ಆದರೆ, ಮದುವೆ ಆಗಿದ್ದು ರೈತರ ಫ್ಯಾಮಿಲಿಯಲ್ಲಿ. ಹಾಗಾಗಿ ನನಗೊಂದು ಬ್ಯೂಟಿಫುಲ್ ಬ್ಯಾಲೆನ್ಸ್ ಸಿಕ್ಕಿದೆ. ಆ ಫ್ಯಾಮಿಲಿಯಿಂದ ನನಗೆ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿದೆ. ಜಮೀನು ಖರೀದಿ ಕೂಡ ಕೃಷಿ ಚಟುವಟಿಕೆಗೆ ಮೀಸಲಾಗಿರುತ್ತದೆ. “ಕೆಜಿಎಫ್ ಚಾಪ್ಟರ್ 2′ ಬಗ್ಗೆ ನನಗೂ ಕುತೂಹಲವಿದೆ. “ಕೆಜಿಎಫ್’ ಬರೀ ಒಂದು ಚಿತ್ರವಲ್ಲ, ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಿದ ಚಿತ್ರ.
ಭಾರತದಲ್ಲಿ ಕನ್ನಡ ಸಿನಿಮಾ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ. ಕನ್ನಡ್ ಸಿನಿಮಾ ಅಂತ ಹೇಳುವ ಜನ ಸ್ಪಷ್ಟವಾಗಿ ಕನ್ನಡ ಸಿನಿಮಾ ಎನ್ನುತ್ತಿದ್ದಾರೆ. ಅದು ಸಿಕ್ಕ ಮೊದಲ ಗೆಲುವು. ಒಳ್ಳೆಯ ಟೀಮ್ ಇದ್ದರೆ, ಒಳ್ಳೆಯ ಪ್ರಾಡಕ್ಟ್ ಗ್ಯಾರಂಟಿ’ ಎನ್ನುತ್ತಾರೆ ರಾಧಿಕಾ ಪಂಡಿತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.