ಜಲ ಪ್ರಾಧಿಕಾರದಿಂದ ಬಾಟಲಿ ನೀರು ವ್ಯಾಪಾರ ಯೋಜನೆ
ಆದಾಯ ಹೆಚ್ಚಳಕ್ಕೆ ಸರಕಾರದ ಕ್ರಮ; ಆಗಸ್ಟ್‌ನಿಂದ ಮಾರುಕಟ್ಟೆಗೆ
Team Udayavani, Jun 29, 2019, 5:56 AM IST
ಕಾಸರಗೋಡು: ಕೇರಳ ರಾಜ್ಯ ಜಲ ಪ್ರಾಧಿಕಾರಕ್ಕೆ ಹೊಸ ಆದಾಯ ಮಾರ್ಗ ಕಂಡು ಕೊಳ್ಳಲು ಬಾಟಲಿ ನೀರು ವಿತರಿಸುವ ವ್ಯವಸ್ಥೆಗೆ ಸರಕಾರವು ಯೋಜನೆ ರೂಪಿಸಿದೆ. ಅದರಂತೆ ಜಲ ಪ್ರಾಧಿಕಾರದ ಬಾಟಲಿ ನೀರನ್ನು ಮುಂದಿನ ಆಗಸ್ಟ್ ತಿಂಗಳಲ್ಲಿ ಮಾರುಕಟ್ಟೆಗಿಳಿಸಲು ನಿರ್ಧರಿಸಲಾಗಿದೆ ಎಂದು ಜಲ ಪ್ರಾಧಿಕಾರವು ತಿಳಿಸಿದೆ.
ಈ ಯೋಜನೆಯನ್ನು ಆರಂಭಿಸುವ ತೀರ್ಮಾನ ವನ್ನು ಈ ಹಿಂದೆಯೇ ಕೈಗೊಳ್ಳಲಾಗಿತ್ತು. ಆದರೆ ಅದಕ್ಕೆ ಹೊಂದಿಕೊಂಡು ಸ್ಥಾಪಿಸಬೇಕಾಗಿರುವ ಕುಡಿಯುವ ನೀರಿನ ಜಲಾಶಯ ಮತ್ತು ಅದಕ್ಕೆ ಅಗತ್ಯದ ಸರ್ಟಿಫಿಕೇಟ್ ಲಭಿಸುವ ವಿಚಾರದಲ್ಲಿ ವಿಳಂಬ ಉಂಟಾಗಿತ್ತು. ಆದ್ದರಿಂದ ಸಕಾಲದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ ಎಂದು ಜಲ ಪ್ರಾಧಿಕಾರವು ಹೇಳಿದೆ.
ಇದೇ ವೇಳೆ ರಾಜ್ಯದ ಜಲಸಂಪನ್ಮೂಲಗಳಿಗೆ ಪಾಯಿಖಾನೆಗಳ ಮಾಲಿನ್ಯವನ್ನು ಬಿಡುವವರ ಮತ್ತು ಇತರ ಕಾರಣಗಳಿಂದ ನೀರನ್ನು ಮಲಿನ ಗೊಳಿಸುವವರ ವಿರುದ್ಧ ಕಠಿನ ಕಾನೂನು ಕ್ರಮ ಗಳನ್ನು ಕೈಗೊಳ್ಳುವ ನಿರ್ಧಾರವನ್ನು ಪ್ರಾಧಿ ಕಾರವು ಕೈಗೊಂಡಿದೆ. ಆ ಮೂಲಕ ಜಲಾಶಯಗಳ ನೀರನ್ನು ಶುದ್ಧಗೊಳಿಸಿ ಬಾಟಲಿ ಗಳಲ್ಲಿ ತುಂಬಿಸ ಲಾಗುವುದು.
ನಷ್ಟದಲ್ಲಿರುವ ಪ್ರಾಧಿಕಾರಕ್ಕೆ ಜೀವಜಲ
ಇತರ ಬಾಟಲಿ ನೀರಿಗಿಂತ ಕಡಿಮೆ ದರದಲ್ಲಿ ಜಲ ಪ್ರಾಧಿ ಕಾರವು ತನ್ನ ಬಾಟಲಿ ನೀರನ್ನು ಮಾರಾಟ ಮಾಡಲು ಉದ್ದೇಶಿಸಿದೆ. ಆ ಮೂಲಕ ನಷ್ಟದ ಹಾದಿಯಲ್ಲಿರುವ ಪ್ರಾಧಿಕಾರಕ್ಕೆ ಆದಾಯ ದೊರಕಿಸುವ ವ್ಯವಸ್ಥೆಗೆ ಸರಕಾರವು ಚಾಲನೆ ನೀಡಿದೆ.
ರಾಜ್ಯದ 14 ಜಿಲ್ಲೆಗಳಲ್ಲಿ ಜಲ ಪ್ರಾಧಿಕಾರವು ತನ್ನ ಬಾಟಲಿ ನೀರನ್ನು ಮಾರುಕಟ್ಟೆಗಿಳಿಸಲು ಯೋಜನೆ ರೂಪಿಸಿದೆ. ಅದರಂತೆ ರಾಜ್ಯಮಟ್ಟದ ಅಧಿಕಾರಿಗಳು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಥಮ ಸುತ್ತಿನ ಮಾತುಕತೆ ಹಾಗೂ ಸಭೆಗಳನ್ನು ನಡೆಸಿದ್ದಾರೆ. ಅಲ್ಲದೆ ಎಲ್ಲ ಜಿಲ್ಲೆಗಳಲ್ಲೂ ಜಲ ಪ್ರಾಧಿಕಾರದ ಬಾಟಲಿ ನೀರಿಗೆ ಮಾರುಕಟ್ಟೆ ಒದಗಿಸುವ ವ್ಯವಸ್ಥೆಗೆ ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂದು ಜಲ ಪ್ರಾಧಿಕಾರವು ತಿಳಿಸಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ
ಜಲಮೂಲಗಳ ಶೋಧ
ಬಾಟಲಿ ನೀರಿಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಲಾಶಯಗಳನ್ನು ಗುರುತಿಸಲಾಗುವುದು. ಬಳಿಕ ಆ ನೀರನ್ನು ಶುದ್ಧೀಕರಣಗೊಳಿಸಿ ಬಾಟಲಿಗಳಿಗೆ ತುಂಬಿಸಲಾಗುವುದು. ಈ ನಿಟ್ಟಿನಲ್ಲಿ ಜಲಮೂಲಗಳನ್ನು ಹುಡುಕುವ ಕಾರ್ಯ ಮೊದಲಿಗೆ ನಡೆಯಲಿದ್ದು, ಕೆಲವು ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಪೂರ್ತಿ ಯಾಗಿದೆ. ಕಾಸರಗೋಡು ಜಿಲ್ಲೆಯಲ್ಲೂ ಜಲಸಂಪನ್ಮೂಲಗಳ ಆಯ್ಕೆ ವಿಚಾರವು ಪ್ರಗತಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.