![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jun 29, 2019, 5:41 AM IST
ಬೆಳ್ಮಣ್: ಮುಂಡ್ಕೂರಿನ ಶ್ಮಶಾನ ಮೋಕ್ಷಧಾಮಕ್ಕೆ ಹೋಗುವ ರಸ್ತೆ ಬಹಳಷ್ಟು ನಾದುರಸ್ತಿಯಲ್ಲಿದ್ದು ಮೋಕ್ಷಕ್ಕಾಗಿ ಕಾಯುತ್ತಿದೆ. ಈ ರಸ್ತೆಯ ಡಾಮರು ಎದ್ದು ಹೋಗಿದ್ದು ವಾಹನ ಸಂಚಾರದ ಜತೆ ಜನರ ಸಂಚಾರಕ್ಕೂ ಅಯೋಗ್ಯ ಎನಿಸಿದೆ. ಮುಂಡ್ಕೂರಿನ ಮುಖ್ಯ ರಸ್ತೆಯಿಂದ ಕೆಲವೇ ಮೀಟರ್‌ಗಳಷ್ಟು ದೂರಕ್ಕೆ ಕಾಂಕ್ರೀಟ್ ನಡೆಸಲಾಗಿದ್ದು ಮುಂದೆ ಸರಕಾರಿ ಹಿ.ಪ್ರಾ. ಶಾಲೆಯವರೆಗೂ ಸಂಚರಿಸುವುದು ಕಷ್ಟಕರವಾಗಿದೆ.
ರುದ್ರಭೂಮಿ ವ್ಯವಸ್ಥಿತ;
ರಸ್ತೆ ಮಾತ್ರ ಸರಿ ಇಲ್ಲ
ಇಲ್ಲಿನ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿಯ ನೇತೃತ್ವದಲ್ಲಿ ನಿರ್ಮಿಸಲಾದ ಹಿಂದೂ ರುದ್ರಭೂಮಿ ವ್ಯವಸ್ಥಿತವಾಗಿದೆ. ಆದರೆ ಬರುವ ರಸ್ತೆ ಅತ್ಯಂತ ಕೆಟ್ಟದಾಗಿದ್ದು ಸಮಸ್ಯೆಯಾಗಿದೆ. ಮೋಕ್ಷಧಾಮದ ಸುತ್ತಮುತ್ತ ಹಾಕಿದ ಇಂಟರ್‌ಲಾಕ್ ಕೂಡ ಎದ್ದು ಹೋಗಿದ್ದು ಗುಂಡಿ ಬಿದ್ದಿದೆ.
ಸರಕಾರಿ ಕಚೇರಿಗಳಿಗೂ ಇದೇ ರಸ್ತೆ
ಗ್ರಾ.ಪಂ. ಕಚೇರಿ, ಸರಕಾರಿ ಶಾಲೆ, ಅಂಚೆ ಇಲಾಖೆ, ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರಿ ಸಂಘ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಘಟಕ ಇತ್ಯಾದಿ ಕಡೆಗಳಿಗೆ ಈ ರಸ್ತೆಯ ಮೂಲಕವೇ ಹಾದು ಹೋಗಬೇಕಾಗಿದೆ. ಡಾ| ಆಳ್ವರ ಶಾಪ್‌ನ ಪಕ್ಕದ ರಸ್ತೆ ಉಪಯೋಗವಾಗುತ್ತಿದ್ದರೂ ಆರಂಭದಲ್ಲಿ ಇಕ್ಕಟ್ಟಾಗಿರುವುದರಿಂದ ತೊಂದರೆ ಹೆಚ್ಚಿದೆ.
ಕಾಂಕ್ರೀಟ್‌ಗೆ ಆಗ್ರಹ
ಮುಖ್ಯ ರಸ್ತೆಯಿಂದ ಕೊಂಚ ದೂರ ದಷ್ಟು ಕಾಂಕ್ರೀಟ್ ನಡೆಸಲಾಗಿದ್ದು ಮುಂದೆಯೂ ಜಲ್ಲಿ ಎದ್ದಿರುವ ರಸ್ತೆಯ ಭಾಗಕ್ಕೂ ಕಾಂಕ್ರೀಟ್ ಹಾಕಿ ಮುಕ್ತಿ ಕರುಣಿಸಬೇಕಿದೆ.
ಅನುದಾನ ಸಾಲದು
ಸಂಬಂಧಪಟ್ಟ ಇಲಾಖೆಗೆ ಈ ರಸ್ತೆಯ ದುರವಸ್ಥೆ ತಿಳಿಸಲಾಗಿದೆ. ಪಂಚಾಯತ್‌ನ ಅನುದಾನ ಏನೇನೂ ಸಾಲದು, ಆದರೂ ಪ್ರಯತ್ನಿಸುತ್ತೇವೆ.
-ಶುಭಾ ಪಿ.ಶೆಟ್ಟಿ ,
ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ
ಮನವಿ ಮಾಡಲಾಗಿದೆ
ಹಲವು ಕಚೇರಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ದುರವಸ್ಥೆ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ, ಸಮರ್ಪಕ ಸ್ಪಂದನ ಸಿಗುತ್ತಿಲ್ಲ.
-ಮಹಾಬಲ ಸಪಳಿಗ , ಸ್ಥಳೀಯರು
You seem to have an Ad Blocker on.
To continue reading, please turn it off or whitelist Udayavani.