ದೇವೇಗೌಡರಿಗೆ ಜಾತಿಯೇ ಆಮ್ಲಜನಕ, ಕುಮಾರಸ್ವಾಮಿಗೆ ಉಸಿರು: ರವಿಕುಮಾರ
Team Udayavani, Jun 29, 2019, 3:00 AM IST
ಬೆಳಗಾವಿ: “ಜಾತ್ಯತೀತ ಜನತಾದಳ ಎಂಬುದು ನೂರಕ್ಕೆ ನೂರರಷ್ಟು ಒಂದೇ ಜಾತಿಯ ಪಕ್ಷ. ಈ ಜಾತಿ ಬಿಟ್ಟರೆ ಅದು ಶೂನ್ಯ. ಪಕ್ಷದ ವರಿಷ್ಠ ದೇವೇಗೌಡರಿಗೆ ಈ ಜಾತಿಯೇ ಆಮ್ಲಜನಕ, ಕುಮಾರಸ್ವಾಮಿಗೆ ಜಾತಿ ಉಸಿರು. ಜೆಡಿಎಸ್ಗೆ ಜಾತಿಯ ಹೆಸರು ಬಿಟ್ಟರೆ ಬೇರೆ ಸಾಧನೆ ಅಥವಾ ಬಂಡವಾಳ ಇಲ್ಲ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಟೀಕಿಸಿದರು.
ಬಿಜೆಪಿ ಸದಸ್ಯತ್ವ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, “ಸಿಎಂ ಕುಮಾರಸ್ವಾಮಿ ಕೈಗೊಂಡಿರುವ ಗ್ರಾಮ ವಾಸ್ತವ್ಯ ಹಗಲು ನಾಟಕ. ಸರ್ಕಾರದ ದುಡ್ಡಿನಲ್ಲಿ ಜೆಡಿಎಸ್ ಜಾತ್ರೆ ನಡೆದಿದೆ. ಜೆಡಿಎಸ್ ಶಾಸಕರು ಇರುವ ಕ್ಷೇತ್ರಗಳಲ್ಲೇ ಸಿಎಂ ಗ್ರಾಮ ವಾಸ್ತವ್ಯ ನಡೆಯುತ್ತಿದೆ.
ಸರ್ಕಾರದ ಅನುದಾನವೂ ಕೇವಲ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆಯಾಗುತ್ತಿದೆ. ಪಂಚತಾರಾ ಹೋಟೆಲ್ನಲ್ಲಿ ಕುಳಿತು ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ಕೆಂಪೇಗೌಡರು, ಕೆಂಗಲ್ ಹನುಮಂತಯ್ಯ, ವಿಶ್ವೇಶ್ವರಯ್ಯ ಅವರಿಗೆ ಅವಮಾನ ಮಾಡಿದ್ದಾರೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.