ಜರಿದು ಬಿದ್ದ ಅಡಿಗಲ್ಲು: ಸಂಪರ್ಕ ಕಡಿತ ಭೀತಿಯಲ್ಲಿ ಜನತೆ
ಕಾನರ್ಪದಿಂದ ದೂಂಬೆಟ್ಟು ಸಂಪರ್ಕಿಸುವ ಕುರುಡ್ಯ ಕಿರು ಸೇತುವೆ
Team Udayavani, Jun 29, 2019, 5:21 AM IST
ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕಾನರ್ಪದಿಂದ ದೂಂಬೆಟ್ಟು ಸಂಪರ್ಕಿಸುವ ಕುರುಡ್ಯ ಸಮೀಪದ ಸೇತುವೆ ಪಿಲ್ಲರ್‌ನ ಅಡಿಗಲ್ಲು ಕುಸಿದು ಬಿದ್ದ ಪರಿಣಾಮ ನುರಾರು ಮನೆಗಳಿಗೆ ಸಂಪರ್ಕ ಕಡಿತ ಭೀತಿ ಎದುರಾಗಿದೆ.
ಸುಮಾರು 40 ವರ್ಷಗಳಿಗೂ ಹಳೆಯ, ಕಲ್ಲಿನಿಂದ ಕಟ್ಟಿದ ಸೇತುವೆ ಸೇತುವೆಯಾಗಿದ್ದರಿಂದ ಜೂ. 22ರಂದು ಸುರಿದ ಮಳೆಗೆ ಅಡಿಗಲ್ಲಿನ ಒಂದು ಭಾಗ ಜರಿದು ಬಿದ್ದಿದೆ. 7 ಮೀ. ಉದ್ದ, 5 ಮೀ. ಅಗಲವಿರುವ ಸೇತುವೆ ಕೆಳಭಾಗದ ಪಿಲ್ಲರ್‌ನ 4 ಅಡಿ ಎತ್ತರ, 3 ಅಡಿ ಉದ್ದ ಭಾಗದ ಕಲ್ಲು ಕುಸಿದು ಬಿದ್ದಿದೆ. ದೂಂಬೆಟ್ಟು ಪ್ರದೇಶದಂಚಿಗೆ 300ಕ್ಕೂ ಹೆಚ್ಚು ಮನೆಯವರು ಇದೇ ಕಿರು ಸೇತುವೆ ಆಶ್ರಯಿಸಿದ್ದಾರೆ.
ಬೆಳ್ಳೂರು ಬೈಲಿ ಕಾಮಗಾರಿ ಆಮೆಗತಿ
ಕಡಿರುದ್ಯಾವರ ಈಂದಬೆಟ್ಟುಗೆ ಸಂಪರ್ಕಿಸುವ ಬೆಳ್ಳೂರು ಬೈಲಿನ ಎತ್ತಿನಗಂಡಿ ಎಂಬಲ್ಲಿ 4 ಕೋ.ರೂ. ವೆಚ್ಚದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಮಾಜಿ ಶಾಸಕರಿಂದ ಶಂಕುಸ್ಥಾಪನೆ ನೆರವೇರಿತ್ತು. ಹಲವು ಕಾರಣಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಸುಮಾರು 500 ಮನೆಗೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಸೇತುವೆ ನಿರ್ಮಾಣವಾಗದೆ ಇಲ್ಲಿನ ಮಂದಿ ಕುಕ್ಕಾವು ಪ್ರದೇಶದಿಂದ ಹತ್ತಾರು ಕಿ.ಮೀ. ಸುತ್ತಿ ಬಳಸಬೇಕು. ಸೇತುವೆ ನಿರ್ಮಾಣವಾಗದೆ ನದಿ ನೀರು ದಾಟಬೇಕಾದ ಪರಿಸ್ಥಿತಿ. ಮತ್ತೂಂದೆಡೆ ಉದ್ದಾರ ಮಠ ಸಮೀಪ ಸಣ್ಣ ನೀರಾವರಿ ಯೋಜನೆಯಡಿ 5 ಕೋ. ರೂ.ವೆಚ್ಚದಲ್ಲಿ ಅಣೆಕಟ್ಟು, ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸ್ಥಳೀಯರಿಗೆ ಅನುಕೂಲವಾಗಲಿದೆ.
ದೂಂಬೆಟ್ಟು ಕಾಲನಿಗೆ ಸಮಸ್ಯೆ
ನೂರಾರು ವರ್ಷಗಳಿಂದ ದೂಂಬೆಟ್ಟು ಎಂಬಲ್ಲಿ ವಾಸವಿರುವ ಪ. ಪಂಗಡಕ್ಕೆ ಸೇರಿದ 100ಕ್ಕೂ ಹೆಚ್ಚು ಮನೆಯವರು ಇದೇ ಮಾರ್ಗವನ್ನು ಅವಲಂಬಿಸಿ ದ್ದಾರೆ. ಸೇತುವೆ ಸಂಪೂರ್ಣ ಕುಸಿದಲ್ಲಿ ಮುಂಡಾಜೆ ಮೃತ್ಯುಂಜಯ ನದಿಗೆ ನಿರ್ಮಿಸಿದ ಆಲು ಪಿತ್ತಿಲು ತೂಗು ಸೇತುವೆಯಾಗಿ ಸುತ್ತಿ ಬರುವ ಪರಿಸ್ಥಿತಿ. ಕಿರುಸೇತುವೆ ಗೋಡೆ ಕುಸಿದಿದ್ದರಿಂದ ವಾಹನ ನಿಷೇಧಿಸುವ ಸಾಧ್ಯತೆ ಇದ್ದು, ಅಗತ್ಯ ಮನೆ ಬಳಕೆ ಸೊತ್ತುಗಳ ಸಾಗಾಟ ಸಮಸ್ಯೆ ಎದುರಾಗಲಿದೆ.
ಈಗಾಗಲೇ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು, ಸಿಮೆಂಟ್ ಚೀಲದಲ್ಲಿ ಮರಳು ತುಂಬಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಗ್ರಾ.ಪಂ.ಗೆ ಸೂಚಿಸಿದೆ. ಕಾಮಗಾರಿ ತಡವಾದಲ್ಲಿ ಮತ್ತಷ್ಟು ಆತಂಕ ಎದುರಾಗುವ ಸಾಧ್ಯತೆ ಇದ್ದು ಸಂಬಂಧಪಟ್ಟ ಅಧಿಕಾರಗಳು ಎಚ್ಚೆತ್ತುಕೊಳ್ಳಬೇಕಿದೆ.
ಅಧಿಕಾರಿಗಳ ಸೂಚನೆಯಂತೆ ತಾತ್ಕಾಲಿಕ ಕ್ರಮ
ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.