ಜಿ20ಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜತಾಂತ್ರಿಕ ನಡೆ
Team Udayavani, Jun 30, 2019, 5:00 AM IST
ಜಪಾನ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗದ ವೇಳೆ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ವಿವಿಧ ದೇಶಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಯೋತ್ಪಾದನೆ ನಿಗ್ರಹ ವಿಚಾರದಿಂದ ಹವಾಮಾನ ವೈಪರೀತ್ಯದವರೆಗೆ ಹಲವು ವಿಷಯಗಳ ಕುರಿತು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಲ್ಲದೇ, ಭಾರತದಲ್ಲಿ ಹೂಡಿಕೆ ಮಾಡಿರುವ ಹಲವು ದೇಶಗಳ ಯೋಜನೆಗಳ ಪ್ರಗತಿಯ ಕುರಿತೂ ಚರ್ಚೆ ನಡೆದಿದೆ. ಶುಕ್ರವಾರ ಹಲವು ಮುಖಂಡರನ್ನು ಮೋದಿ ಭೇಟಿ ಮಾಡಿದ್ದು, ಅವರೊಂದಿಗೆ ನಡೆಸಿದ ಚರ್ಚೆಯ ಸಂಕ್ಷಿಪ್ತ ವಿವರ ಇಲ್ಲಿದೆ.
ಏಂಜೆಲಾ ಮರ್ಕೆಲ್ ಜರ್ಮನಿ
ಇಂಡೋ-ಜರ್ಮನ್ ಸಂಬಂಧ ಸುಧಾರಣೆ
ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತೆ ಕುರಿತು ಸಹಕಾರ
ರೈಲ್ವೇ ಆಧುನೀಕರಣ, ಕೌಶಲ ಅಭಿವೃದ್ಧಿ, ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ನೆರವು
ಮೂನ್ ಜೇ ಇನ್ ದಕ್ಷಿಣ ಕೊರಿಯಾ
ವ್ಯಾಪಾರ, ಆರ್ಥಿಕ ವಹಿವಾಟು ಉತ್ತೇಜನ
ಭಾರತದ ಆ್ಯಕ್ಟ್ ಈಸ್ಟ್ ನೀತಿ ಹಾಗೂ ದ.ಕೊರಿಯಾದ ಹೊಸ ದಕ್ಷಿಣ ನೀತಿಯಲ್ಲಿ ಹಕಾರ
ಭಾರತ , ದಕ್ಷಿಣ ಕೊರಿಯಾ ಜನರ ಮಧ್ಯೆ ಸಹಕಾರ ಹೆಚ್ಚಿಸಲು ನಿರ್ಧಾರ
ಮೊಹಮ್ಮದ್ ಬಿನ್ ಸಲ್ಮಾನ್‌ಸೌದಿ ಅರೇಬಿಯಾ
ವ್ಯಾಪಾರ, ಹೂಡಿಕೆ, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಕುರಿತು ಚರ್ಚೆ
ಕಚ್ಚಾ ತೈಲ, ಕಚ್ಚಾ ತೈಲ ಬೆಲೆ ಹಾಗೂ ಸಾಗಣೆ ಕುರಿತು ಮಾತುಕತೆ
ತೈಲ ಹೊರತಾದ ಕ್ಷೇತ್ರಗಳಲ್ಲೂ ಸಂಬಂಧ ಸುಧಾರಣೆಗೆ ನಿರ್ಧಾರ
ಡೊನಾಲ್ಡ್ ಟ್ರಂಪ್‌ಅಮೆರಿಕ
ವ್ಯಾಪಾರ ಸಂಘರ್ಷ ಬಗೆಹರಿಸಲು ನಿರ್ಧಾರ
5ಜಿ ತಂತ್ರಜ್ಞಾನ ಪ್ರಯೋಗದಲ್ಲಿ ಸಹಕಾರ
ಡೇಟಾ ರಕ್ಷಣೆ ಕುರಿತು ಭಾರತದ ನಿಲುವಿಗೆ ಸ್ಪಷ್ಟನೆ
ಕ್ಸಿ ಜಿನ್‌ಪಿಂಗ್ ಚೀನ
ಭಯೋತ್ಪಾದನೆ ನಿಗ್ರಹದಲ್ಲಿ ಸಹಕಾರ
ಹವಾಮಾನ ವೈಪರೀತ್ಯ ವಿಚಾರದಲ್ಲಿ ಬದ್ಧತೆ
ಎಲ್ಲ ರೀತಿಯ ಉಗ್ರವಾದವನ್ನೂ ಖಂಡಿಸಿದ ನಾಯಕರು
ಶಿಂಜೋ ಅಬೆ ಜಪಾನ್
ಆರ್ಥಿಕ ಅಪರಾಧಿಗಳ ಕುರಿತ ಮೋದಿ ನಿಲುವಿಗೆ ಮೆಚ್ಚುಗೆ
ವಿಪತ್ತು ನಿರ್ವಹಣೆ ಕುರಿತು ಹೆಚ್ಚಿನ ಸಹಕಾರಕ್ಕೆ ನಿರ್ಧಾರ
ಬುಲೆಟ್ ರೈಲು ಯೋಜನೆ ಕುರಿತು ಚರ್ಚೆ
ವ್ಲಾಡಿಮಿರ್ ಪುಟಿನ್, ರಷ್ಯಾ
ವ್ಯಾಪಾರ ವಹಿವಾಟು ವೃದ್ಧಿ ಕುರಿತು ಚರ್ಚೆ
ರಕ್ಷಣಾ ಒಪ್ಪಂದಗಳ ಸ್ಥಿತಿಗತಿ ಪರಿಶೀಲನೆ
ಭಯೋತ್ಪಾದನೆ, ಹವಾಮಾನ ವೈಪರೀತ್ಯ ಕುರಿತು ಮಾತುಕತೆ
ನಮ್ಮ ಎಲೆಕ್ಷನ್‌ನಲ್ಲಿ ಮೂಗು ತೂರಿಸಬೇಡಿ, ಆಯ್ತಾ?
ನಮ್ಮ ದೇಶದ ಚುನಾವಣೆಯಲ್ಲಿ ಮೂಗು ತೂರಿಸಬೇಡಿ, ಅಧ್ಯಕ್ಷರೇ ,ಆಯ್ತಾ? ಇದು ಯಾವುದೋ ಸಾಮಾನ್ಯ ವ್ಯಕ್ತಿಗಳ ಮಾತಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಮಧ್ಯೆ ಜಿ20 ಶೃಂಗದ ವೇಳೆ ನಡೆದ ಸಂಭಾಷಣೆ! ಕಳೆದ ಬಾರಿ ಅಮೆರಿಕ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ರಷ್ಯಾಗೆ ಯಾವ ರೀತಿ ಎಚ್ಚರಿಕೆ ನೀಡಲಾಗಿದೆ ಎಂದು ಟ್ರಂಪ್‌ರನ್ನು ಶೃಂಗಸಭೆಯಲ್ಲಿ ಪತ್ರಕರ್ತರು ಪ್ರಶ್ನಿಸಿದ್ದಾಗ, ಇದಕ್ಕೆ ನಿಂತಲ್ಲೇ ಪುಟಿನ್ ಕಡೆಗೆ ಕೈತೋರಿಸಿ ನಗುತ್ತಲೇ ಟ್ರಂಪ್ ಹೀಗೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.