ಡಿಆರ್ಎಸ್ ತೀರ್ಪು ವಿವಾದ: ಟ್ವಿಟರ್ನಲ್ಲಿ ಪ್ರಶ್ನಿಸಿದ ರೋಹಿತ್
Team Udayavani, Jun 29, 2019, 9:20 AM IST
ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ವಿವಾದಾತ್ಮಕ ಡಿಆರ್ಎಸ್ ತೀರ್ಪಿಗೆ ಔಟ್ ಆಗಿದ್ದ ರೋಹಿತ್ ಶರ್ಮ ತಮ್ಮ ವಿರುದ್ಧದ ತೀರ್ಪನ್ನು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ. 2 ಫೋಟೊ ಜತೆಗೆ ಕೈಯನ್ನು ಮುಖಕ್ಕೆ ಅಡ್ಡವಾಗಿ ಹಿಡಿದಿರುವ ಎಮೊಜಿ ಪ್ರಕಟಿಸಿರುವ ಅವರು ಈ ತೀರ್ಪಿನ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅನೇಕ ಅಭಿಮಾನಿಗಳು ರೋಹಿತ್ಗೆ ಬೆಂಬಲ ನೀಡಿದ್ದಾರೆ.
ರೋಹಿತ್ ಶರ್ಮ 18 ರನ್ ಗಳಿಸಿದ್ದಾಗ ಕೆಮರ್ ರೋಚ್ ಎಸೆತದ ಚೆಂಡು ರೋಹಿತ್ ಪ್ಯಾಡ್ ಮತ್ತು ಬ್ಯಾಟ್ ನಡುವೆ ಸದ್ದು ಮಾಡುತ್ತ ವಿಕೆಟ್ ಕೀಪರ್ ಶೈ ಹೋಪ್ ಕೈ ಸೇರಿತು. ಆಗ ಔಟ್ಗಾಗಿ ಮನವಿ ಸಲ್ಲಿಸಲಾಯಿತು. ಆದರೆ ಅಂಪಾಯರ್ ಪುರಸ್ಕರಿಸಲಿಲ್ಲ. ಬಳಿಕ 3ನೇ ಅಂಪಾಯರ್ಗೆ ವಿಂಡೀಸ್ ಮನವಿ ಸಲ್ಲಿಸಿತು. ಅಲ್ಲಿ ಬ್ಯಾಟಿಗೆ ಚೆಂಡು ಬಡಿದಿದೆ ಎನ್ನುವುದು ಖಚಿತಗೊಳ್ಳದಿದ್ದರೂ ರೋಹಿತ್ಗೆ ಔಟ್ ನೀಡಲಾಯಿತು. ಇದು ವಿವಾದಕ್ಕೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.