ಕಂಬದ ಮೇಲೆ, ಗರುಡ ಲೀಲೆ

ಮಳೆಯ ಶಕುನ ನುಡಿವ ಗರುಡ

Team Udayavani, Jun 29, 2019, 10:30 AM IST

PRADAKSHINE5

ಈ ಗರುಡ, ಕಂಬದ ಮೇಲಿನ ಕಲ್ಲಿನ ಮೂರ್ತಿಯೇ ಆದರೂ, ಕಾಲ ಕಾಲಕ್ಕೆ ತನ್ನ ಚಲನೆಗಳ ಮೂಲಕ ಭವಿಷ್ಯ ನುಡಿಯುತ್ತಾನೆಂಬುದು ಅಂಬಲಗೆರೆ ಊರಿನವರ ನಂಬಿಕೆ…

ಮಳೆ ಬರೋದಿಲ್ವಾ? ವರ್ಷವಿಡೀ ಬರವೇ? ಇಲ್ಲವೇ ಈ ವರ್ಷ ಜೋರು ಮಳೆಯಾಗಿ, ಜಲಪ್ರವಾಹ ಉಂಟಾಗುತ್ತದೆಯೇ?- ಈ ಎಲ್ಲ ಮುನ್ಸೂಚನೆಗಳನ್ನು ಬಲ್ಲ ದೇವನೊಬ್ಬ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಗೆರೆ ಗ್ರಾಮದಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ. ಆತನೇ ಗರುಡಮೂರ್ತಿ! ಇವನು ಕಂಬದ ಮೇಲಿನ ಕಲ್ಲಿನ ಮೂರ್ತಿಯೇ ಆದರೂ, ಕಾಲ ಕಾಲಕ್ಕೆ ತನ್ನ ಚಲನೆಗಳ ಮೂಲಕ ಭವಿಷ್ಯ ನುಡಿಯುತ್ತಾನೆಂಬುದು ಈ ಊರಿನವರ ನಂಬಿಕೆ.
ಅಂಬಲಗೆರೆಯ ರಂಗನಾಥ ದೇಗುಲದ ಮುಂದೆ ಸ್ಥಾಪಿತವಾಗಿರುವ ಗರುಡಮೂರ್ತಿಯ ಶಕುನ, ಈ ದಿನಗಳವರೆಗೂ ನಿಜವಾಗುತ್ತಾ ಬಂದಿದೆಯಂತೆ. 30 ಅಡಿ ಎತ್ತರದ ಕಂಬದ ಮೇಲೆ ನೆಲೆನಿಂತ ಗರುಡ, ತನ್ನ ಭಂಗಿಯ ವಾಲುವಿಕೆಗಳಿಂದ ಬರ, ಪ್ರಕೃತಿ ವಿಕೋಪ, ಮಳೆ ಸೂಚನೆ, ಸಮೃದ್ಧಿ ಬೆಳೆ, ದೇಶದಲ್ಲಿ ನಡೆಯುವ ಮುಖ್ಯ ಘಟನಾವಳಿಗಳ ಕುರಿತು ಶಕುನ ತಿಳಿಸುತ್ತಾ ಬಂದಿದ್ದಾನೆ ಎನ್ನುವ ಬಲವಾದ ನಂಬಿಕೆ ಇಲ್ಲಿನ ಭಕ್ತಾದಿಗಳಲ್ಲಿ ಬೇರೂರಿದೆ.

“ದೇಶಕ್ಕೆ ಕೇಡು ಕಾದಿದ್ದಾಗಲೂ, ಈ ಗರುಡ ವಿವಿಧ ರೀತಿಯ ಸಂಕೇತ ಸೂಚಿಸಿದ್ದನಂತೆ. ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ್‌ ಗಾಂಧಿ ಹತ್ಯೆ ನಡೆದಾಗ ಮತ್ತು ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ಗರುಡಮೂರ್ತಿ ಮುಂದಕ್ಕೆ ಬಾಗಿತ್ತು. ಈ ಗರುಡಮೂರ್ತಿಯು ವಿಜ್ಞಾನಕ್ಕೆ ಅಧ್ಯಯನ ವಸ್ತು’ ಎಂದು ಪ್ರತಿಪಾದಿಸುತ್ತಾರೆ ಗ್ರಾಮದ ಹಿರಿಯ ಮುಖಂಡ ಬಿ.ಆರ್‌.ರಂಗಸ್ವಾಮಿ.

ರಾಮಾನುಜಾಚಾರ್ಯರು ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ಪ್ರಭಾವಕ್ಕೆ ಒಳಗಾಗಿ, ಒರಟು ಕಲ್ಲಿನಿಂದ ದೇಗುಲವನ್ನು ಸ್ಥಾಪಿಸಲಾಗಿದೆ ಎನ್ನುವುದಕ್ಕೆ ಪುರಾವೆಗಳೂ ಇವೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ್‌ ಗಾಂಧಿ ಹತ್ಯೆ ನಡೆದಾಗ ಮತ್ತು ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ಗರಡುಮೂರ್ತಿ ಮುಂದಕ್ಕೆ ಬಾಗಿತ್ತು. ಹಲವು ವಿಪತ್ತುಗಳನ್ನು ಈ ಗರುಡಮೂರ್ತಿ ಸೂಚಿಸಿದೆ.
– ಬಿ.ಆರ್‌. ರಂಗಸ್ವಾಮಿ, ಅಂಬಲಗೆರೆ ವಾಸಿ

ಗರುಡ ಶಕುನ ಹೀಗಿರುತ್ತೆ…
ಗರುಡನ ಮುಖದ ನೋಟ ನೇರವಾಗಿದ್ದರೆ ಉತ್ತಮ ಮಳೆಯಾಗಿ ಸಮೃದ್ಧಿ ಬೆಳೆಯಾಗಲಿದೆ. ಮೂರ್ತಿ ಬಾಗಿದ್ದರೆ ತೀವ್ರ ಬರಗಾಲವೆಂದು, ಹಿಂದಕ್ಕೆ ವಾಲಿದ್ದರೆ ಪ್ರಕೃತಿ ವಿಕೋಪ, ಬರ ಸಂಭವಿಸಲಿದೆ ಎನ್ನುವ ಶಕುನಗಳು ಇಂದಿಗೂ ನಿಜವಾಗಿವೆ.

ಹರಿಯಬ್ಬೆ ಹೆಂಜಾರಪ್ಪ

ಟಾಪ್ ನ್ಯೂಸ್

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.