ಶ್ರದ್ಧೆಯಿಲ್ಲದ ಕರ್ಮ ಫಲ ನೀಡದು…
- ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ, ಶ್ರೀ ಶಾರದಾ ಪೀಠಂ- ಶೃಂಗೇರಿ
Team Udayavani, Jun 29, 2019, 10:51 AM IST
ಬೇರೆ ಬೇರೆ ಕರ್ಮಗಳು ಬೇರೆ ಬೇರೆ ಫಲವನ್ನು ನೀಡುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಈ ದಿನಗಳಲ್ಲಿ ಹಲವರು ತಾವು ಮಾಡಿದ ಕರ್ಮಗಳಿಗೆ ತಾವಂದುಕೊಂಡಂತೆ ಆಗದಿರುವುದರಿಂದ ಶಾಸ್ತ್ರಗಳ ಪ್ರಾಮಾಣಿಕತೆಯನ್ನು ಸಂದೇಹಿಸಿಕೊಳ್ಳುತ್ತಿದ್ದಾರೆ. ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ: “ಶ್ರದ್ಧೆಯಿಲ್ಲದೆ ಕರ್ಮ ಕೋರಿದ ಫಲವನ್ನು ನೀಡದು’. ಆದ್ದರಿಂದ, ನಾವು ಮಾಡಿದ ಯಾವುದೇ ಕರ್ಮವಾಗಲೀ, ಕೋರಿದ ಫಲವನ್ನು ಕೊಡಲಿಲ್ಲವೆಂದರೆ, ಆ ಕರ್ಮವನ್ನು ನಾವು ಶ್ರದ್ಧೆಯಿಂದ ಮಾಡಿಲ್ಲವೆಂದರ್ಥ.
ವೈವಿಧ್ಯಮಯ ಜಗತ್ತಿಗೆ ಅಸ್ತಿತ್ವವೆಂಬುದಿಲ್ಲ. ನಮ್ಮ ಮನಸ್ಸಿನ ಸಂಕಲ್ಪದಂತೆ ಈ ಜಗತ್ತು ನಮಗೆ ತೋರಿಬರುತ್ತದೆ. ನಮ್ಮ ಮನಸ್ಸಿನಲ್ಲಿ ಏಳುವ ಸಂಕಲ್ಪಗಳನ್ನು ನಾಶ ಮಾಡಿಕೊಳ್ಳಲು ಸಾಧ್ಯವಾದರೆ ನಮ್ಮ ಪಾಲಿಗೆ ಜಗತ್ತು ನಾಶವಾಗುವುದು. ಬ್ರಹ್ಮ ವಸ್ತುವನ್ನು ಶುದ್ಧ ಮನಸ್ಸಿನಿಂದ ಮಾತ್ರವೇ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ. ಸಂಕಲ್ಪ ವಿಕಲ್ಪಗಳನ್ನು ಕಳೆದುಕೊಂಡಾಗಲೇ ಮನಸ್ಸು ಶುದ್ಧವಾಗುವುದು. ಮೃಗತ್ವದಿಂದ ದೈವತ್ವಕ್ಕೆ ಒಯ್ಯುವುದೇ ಧರ್ಮ.
ಶ್ರದ್ಧೆ ಇಲ್ಲದೆ ಕರ್ಮ ಆಚರಿಸಿದ್ದರಿಂದ ಫಲ ದೊರೆಯದಿದ್ದರೆ, ಶಾಸ್ತ್ರಗಳನ್ನು ನಿಂದಿಸಬಾರದು. ಎಲ್ಲಾ ಕಾಲಗಳನ್ನೂ ಸಂದೇಹಾತೀತವಾದ ಪ್ರಾಮಾಣ್ಯವನ್ನು ಶಾಸ್ತ್ರಗಳು ಹೊಂದಿವೆ. ಶ್ರದ್ಧೆಯಿಂದ ಕರ್ಮವನ್ನು ಆಚರಿಸುವುದು ಬಹಳ ಮುಖ್ಯ. “ಶ್ರದ್ಧೆ ಎಂದರೇನು?’ ಎಂಬ ಪ್ರಶ್ನೆಗೆ ಆದಿಶಂಕರರು ಹೀಗೆ ಹೇಳುತ್ತಾರೆ: “ಶಾಸ್ತ್ರಗಳಲ್ಲಿ ಗುರುವಿನ ವಾಕ್ಯಗಳಲ್ಲಿ ಅಚಲ ನಂಬಿಕೆ ಇರುತ್ತದೆ. ಸತ#ಲಗಳು ತಪ್ಪದೇ ಲಭಿಸುತ್ತವೆ’. ಪುರಾಣಗಳಲ್ಲಿ ಈಶ್ವರನಿಗೆ ದ್ವೇಷ ಮಾಡಿದ ದಕ್ಷ ಪ್ರಜಾಪತಿ ನಡೆಸಿದ ಯಜ್ಞ ಸತ#³ಲಗಳನ್ನು ನೀಡದೇ, ಅದು ಘೋರವಾದ ನಾಶದೊಂದಿಗೆ ಮುಕ್ತಾಯವಾಯಿತು. ಗುರುವಿನ ಉಪದೇಶವನ್ನು ಶ್ರದ್ಧೆಯಿಂದ ಗ್ರಹಿಸುವವನಿಗೆ ಜ್ಞಾನ ಲಭಿಸುತ್ತದೆ. “ಶ್ರದ್ಧಾವಾನ್ ಲಭತೇ ಜ್ಞಾನಂ’ ಎಂಬ ಭಗವಾನ್ ಶ್ರೀ ಕೃಷ್ಣನ ಉಪದೇಶ ಎಲ್ಲೆಡೆ ಮೊಳಗಲಿ. ಎಲ್ಲರೂ ಶ್ರದ್ಧೆಯಿಂದ ಕರ್ಮಗಳನ್ನು ಆಚರಿಸಿ ಶ್ರೇಯಸ್ಸು ಪಡೆಯುವಂತಾಗಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.