ಎಚ್ಚೆಸ್ವಿ-75: ಕಾವ್ಯಾಭಿನಂದನೆ
Team Udayavani, Jun 29, 2019, 2:04 PM IST
ಜನಪ್ರೀತಿಯ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ, ಡಾ.ಎಚ್ಚೆಸ್ವಿ ಅಭಿನಂದನಾ ಸಮಿತಿ ವತಿಯಿಂದ ಕಾವ್ಯಾಭಿನಂದನೆ ಹಮ್ಮಿಕೊಳ್ಳಲಾಗಿದೆ. ಕವಿಯೊಂದಿಗೆ ಮಾತುಕತೆ, ಸೆಲ್ಫಿಯ ನಂತರ, ಬಿ.ಆರ್. ಲಕ್ಷ್ಮಣರಾವ್ ಅಧ್ಯಕ್ಷತೆಯಲ್ಲಿ ಕಾವ್ಯಗೌರವ ನಡೆಯಲಿದೆ. ನಾ.ದಾಮೋದರ ಶೆಟ್ಟಿ, ಎಸ್.ದಿವಾಕರ, ಜೋಗಿ, ಅಜಯಕುಮಾರ್ ಸಿಂಗ್, ವೈ.ಎಸ್.ವಿ. ದತ್ತ, ಬಿ.ಎಲ್.ಶಂಕರ್, ರವಿ ಬೆಳಗೆರೆ, ಟಿ.ಎಸ್. ನಾಗಾಭರಣ, ಟಿ.ಎನ್. ಸೀತಾರಾಮ್, ಪ್ರಕಾಶ್ ರೈ, ಡುಂಡಿರಾಜ್, ಬಿ. ಸುರೇಶ್ ಮತ್ತು ಇತರ ಗಣ್ಯರು ಎಚ್ಚೆಸ್ವಿ ಕವಿತೆಗಳನ್ನು ವಾಚಿಸಲಿದ್ದಾರೆ.
ವೈ.ಕೆ. ಮುದ್ದುಕೃಷ್ಣರ ನೇತೃತ್ವದಲ್ಲಿ ಗೀತಗೌರವ ನಡೆಯಲಿದ್ದು, ಪುತ್ತೂರು ನರಸಿಂಹನಾಯಕ್, ಶಂಕರ ಶಾನಭಾಗ್, ಬಿ.ಜಯಶ್ರೀ, ಅರ್ಚನಾ ಉಡುಪ ಮುಂತಾದ ಪ್ರಸಿದ್ಧ ಗಾಯಕರು ಎಚ್ಚೆಸ್ವಿ ಗೀತೆಗಳನ್ನು ಹಾಡಲಿದ್ದಾರೆ. ಸ್ನೇಹಾ ಕಪ್ಪಣ್ಣ ಸಂಯೋಜನೆಯಲ್ಲಿ ಭ್ರಮರಿ ನೃತ್ಯತಂಡದಿಂದ ನೃತ್ಯ ರೂಪಕ ನಡೆಯಲಿದೆ. ಎಚ್ಚೆಸ್ವಿ ವಿದ್ಯಾರ್ಥಿ ಬಳಗದವರು ಕಿರುಚಿತ್ರ ಪ್ರದರ್ಶನದ ಮೂಲಕ ನುಡಿ ಗೌರವ ಸಲ್ಲಿಸಲಿದ್ದಾರೆ. ಕವಿಗಳಿಗೆ ಪುಸ್ತಕ- ಸಿಡಿ ಉಡುಗೊರೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದ ಕೊನೆಯಲ್ಲಿ, ಹಿರಿಯ ಕವಿ ಡಾ. ಚಂದ್ರಶೇಖರ ಕಂಬಾರರು, ಎಚ್ಚೆಸ್ವಿ ಅವರನ್ನು ಅಭಿನಂದಿಸುವರು. ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿನಂದನಾ ನುಡಿಗಳನ್ನಾಡುವರು.
ಯಾವಾಗ?: ಜೂ.30, ಭಾನುವಾರ ಸಂಜೆ 4
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.