ಗುಡ್‌ ಮಾರ್ನಿಂಗ್‌ ಡಾಕ್ಟರ್‌

ನಮ್ಮನ್ನು ಫಿಟ್‌ ಮಾಡುವ "ಮುಂಜಾನೆ'

Team Udayavani, Jun 29, 2019, 5:08 PM IST

doctr

ಹೆಂಡತಿ  ಮಕ್ಕಳಿಗಿಂತ ಹೆಚ್ಚಾಗಿ, ವೈದ್ಯರು ಇಡೀ ದಿನ ಕಳೆಯೋದು ರೋಗಿಗಳ ನಡುವೆ. ಅವರ ಸಮಸ್ಯೆ ಆಲಿಸಿ, ಸೂಕ್ತ ಚಿಕಿತ್ಸೆ ನೀಡುವ ಈ ತಪಸ್ಸಿಗೆ ಸ್ಫೂರ್ತಿ ಸಿಗೋದು ಎಲ್ಲಿಂದ? ದಿನ ದಲ್ಲಿ ನೂರಾರು ರೋಗಿಗ ಳನ್ನು ನೋಡಲು, ಸಂಯಮ ಶಕ್ತಿ ಎಲ್ಲಿಂದ ಸಿಗು ತ್ತೆ?  ಈ ಪ್ರಶ್ನೆಗೆ ಇವ ರೆಲ್ಲ ಉತ್ತರ, “ನಮ್ಮ ಬೆಳಗ್ಗಿನ ದಿನ ಚರಿ’! ವೈದ್ಯ ರನ್ನು ಫಿಟ್‌ ಮಾಡು ವು ದೇ, ಈ “ಮಾರ್ನಿಂಗ್‌’. ತಡ ರಾತ್ರಿ ವರೆಗೂ ಡ್ನೂಟಿ ಮಾಡಿಯೂ, ಬೆಳಗ್ಗೆ ಬೇಗನೆ ಎದ್ದು ಆ್ಯಕ್ಟಿವ್‌ ಆಗುವ ಇಲ್ಲಿನ ವೈದ್ಯರ ದಿನಚರಿ, ನಮ್ಮೆ ಲ್ಲರಿಗೂ ಮಾದರಿ…

ಡಾ. ಸರಸ್ವತಿ ರಮೇಶ್‌, ಸ್ತ್ರೀರೋಗ ತಜ್ಞೆ


ಬೆಳಗ್ಗೆ ಎದ್ದೇಳುವುದು: 6 ಅM
ನಮಗೆ ರಾತ್ರಿಯೂ ಆಸ್ಪ ತ್ರೆ ಯಿಂದ ಕರೆಗಳು ಬರಬಹುದು. ಆದ ರೆ, ಬೆಳಗ್ಗೆ ಬೇಗ ಏಳ ದಿ ದ್ದರೆ, ಆ ದಿನದ ಕೆಲಸಕ್ಕೆ ಅಡಚಣೆ ಆಗುತ್ತೆ. 30 ನಿಮಿಷ ಯೋಗ ಮಾಡ್ತೀನಿ. ಅದಕ್ಕೂ ಬಿಡುವು ಸಿಗಲಿಲ್ಲ ವೆಂದಾ ದಾಗ, ಕೆಲಸ ಮಾಡುತ್ತಲೇ, ನಿಧಾ ನಕ್ಕೆ ಉಸಿರೆಳೆದು ಕೊಳ್ಳುತ್ತಾ, ಪ್ರಾಣಾ ಯಾಮ ಮಾಡುತ್ತೇನೆ. ಮಕ್ಕಳನ್ನು ರೆಡಿಮಾಡಿಸಿ, ಶಾಲೆಗೆ ಕಳುಹಿಸು ವುದು ದೊಡ್ಡ ಕೆಲಸ. ಫೇಸ್‌ಬುಕ್‌, ವಾಟ್ಸಾéಪ್‌ನ ವೀಕ್ಷ ಣೆಗೆಂದು, ಕಾಲ ಹರಣ ಮಾಡುವುದಿಲ್ಲ.
ಮೊಬೈಲ್‌ ಬಳಕೆ: ಆಸ್ಪತ್ರೆ ಕರೆ ಸ್ವೀಕರಿಸಲು ಮಾತ್ರ!

ಡಾ. ಭುಜಂಗ ಶೆಟ್ಟಿ, ನೇತ್ರ ತಜ್ಞ


ಬೆಳಗ್ಗೆ ಎದ್ದೇಳುವುದು: 4 ಅM
ಯೋಗ ಧ್ಯಾನ ದಿಂದ ನನ್ನ ದಿನ ಚರಿ ಶುರು ವಾ ಗುತ್ತೆ. ಅದು ಸುಮಾರು 1 ಗಂಟೆಯ ವಕೌìಟ್‌. ಅಧ್ಯಾತ್ಮ, ತಣ್ತೀ ಶಾ ಸ್ತ್ರಕ್ಕೆ ಸಂಬಂಧಿ ಸಿದ ಮ್ಯಾಗ ಜಿನ್‌, ಪುಸ್ತ ಕ ಗ ಳನ್ನು ಓದು ತ್ತೇನೆ. ಅಷ್ಟೊ ತ್ತಿಗೆ ಮನೆ ಬಾಗಿಲಿಗೆ, ದಿನ ಪತ್ರಿಕೆಗಳು ಬಂದು ಬಿದ್ದಿರುತ್ತವೆ. ಶ್ರದ್ಧೆ ಯಿಂದ ಅವುಗಳನ್ನು ಓದುತ್ತೇನೆ. “ಓಹ್‌, ಜಗತ್ತಿನಲ್ಲಿ ಹಾಗಾಯ್ತಾ?’ ಅನ್ನೋ ಅಚ್ಚರಿಗಳೆಲ್ಲ ನಂಗೆ ಆಗೋದು ಆಗಲೇ. ನಂತರ ಇಮೇಲ್‌ ಚೆಕ್‌ ಮಾಡ್ತೀನಿ. ಉಪಾಹಾರ ಮುಗಿಸಿ, 8.30ರ ಹೊತ್ತಿಗೆ ಆಸ್ಪತ್ರೆ ತಲು ಪು ತ್ತೇ ನೆ.
ಮೊಬೈಲ್‌ ಬಳಕೆ: 10 ನಿಮಿಷ

ಡಾ. ಐಶ್ವರ್ಯಾ, ಚರ್ಮರೋಗ ತಜ್ಞೆ


ಬೆಳಗ್ಗೆ ಎದ್ದೇಳುವುದು: 6.30 AM
ಬೆಳಗ್ಗೆ ಎದ್ದ ಕೂಡಲೇ ಪ್ರಾರ್ಥ ನೆ ಯಿಂದ ದಿನಾ ರಂಭ. 6.45ಕ್ಕೆ ಅಮ್ಮ ಮಾಡಿದ ಮಸಾಲ ಟೀ ಕುಡೀ ತೀನಿ. ನಂತರದ ಕ್ರಿಯೆ, ಯೋಗ  ಧ್ಯಾನ. 8 ಗಂಟೆಗೆ ಅಪ್ಪ ನೊಂದಿಗೆ ಮಾರ್ಕೆ ಟ್‌ಗೆ ಹೋಗ್ತಿàನಿ. ದಿನಸಿ, ತರ ಕಾರಿ ತರೀ¤ನಿ. 9.30ರೊಳಗೆ ಎಲ್ಲ ದಿನ ಪ ತ್ರಿಕೆ ಓದಿ¤àನಿ. 10 ಗಂಟೆಗೆ ವೆಬ್‌ ಸೈಟ್‌ ಡಿಸೈ ನಿಂಗ್‌ ಅಭ್ಯಾಸ. ನನ್ನ ಮುದ್ದಿನ ನಾಯಿ ಜತೆ ಕಾಲ ಕಳೆ ಯು ತ್ತೇನೆ. 11 ಗಂಟೆಗೆ ಕ್ಲಿನಿಕ್‌ ತಲು ಪು ತ್ತೇ ನೆ.
ಮೊಬೈಲ್‌ ಬಳ ಕೆ: 0 ನಿಮಿ ಷ

ಡಾ. ನರೇಶ್‌ ಶೆಟ್ಟಿ, ಮೂಳೆ ಚಿಕಿತ್ಸಾ ತಜ್ಞ


ಬೆಳಗ್ಗೆ ಎದ್ದೇಳುವುದು: 5 AM
ಗೆಳೆಯನ ಫೋನ್‌ ಕರೆಯಿಂದ ಎಚ್ಚರಗೊಳ್ತೀನಿ. 5.15ಕ್ಕೆ ಗೆಳೆಯನ ಮನೆಯಲ್ಲಿ ಟೀ ಜೊತೆ ಹರಟೆ. ರಾಜ ಕೀಯ ವಿಚಾರ ಹೊರ ತಾಗಿ, ವಿದ್ಯ ಮಾ ನ ಗಳ ಕುರಿತು ಚರ್ಚೆ. ದಿನವನ್ನು ಖುಷಿಯಿಂದ ಶುರುಮಾಡಲು ನಗು, ಜೋಕ್ಸ್‌ಗಳ ಸಾಥ್‌ ಇದ್ದಿದ್ದೇ. 5.45  6.15ರ ವರೆಗೆ ಒಬ್ಬನೇ ವಾಕ್‌ ಮಾಡುತ್ತೇನೆ. ಬಹುತೇಕ ಸಮಸ್ಯೆ, ಪ್ರಶ್ನೆಗಳಿಗೆ ಉತ್ತರ ಹುಡುಕೋದು ಇದೇ ಸಮಯದಲ್ಲಿ. 6.15  7.15ರ ವರೆ ಗೆ ಬ್ಯಾಡ್ಮಿಂಟನ್‌ ಆಟ. 7.30  8.15ರ ವರೆ ಗೆ ಬೆಳಗ್ಗಿನ ಉಪಾಹಾರದ ಜೊತೆಗೆ ದಿನಪತ್ರಿಕೆ ಓದುವುದು, ಕೆಲಸಕ್ಕೆ ಹೊರಡಲು ತಯಾರಾಗುವುದು. 8.15ಕ್ಕೆ ಆಸ್ಪತ್ರೆಗೆ ಫೋನ್‌ ಮಾಡಿ, ರೋಗಿಯನ್ನು ಆಪರೇಷನ್‌ ಥಿಯೇಟರ್‌ಗೆ ಶಿಫ್ಟ್ ಮಾಡಲು ಹೇಳುವುದು. (ಸರ್ಜರಿ ಇಲ್ಲದ ದಿನಗಳಲ್ಲಿ, ಮಗಳ ಮನೆಗೆ ಹೋಗಿ ಮೊಮ್ಮಗು ಜೊತೆ ಆಟ). 9 ಗಂಟೆ ಗೆ, ಆಸ್ಪತ್ರೆಯಲ್ಲಿ ರೋಗಿಗಳ ಜೊತೆ.
ಮೊಬೈಲ್‌ ಬಳಕೆ: 0 ನಿಮಿ ಷ

ಡಾ. ಕೆ.ಎಸ್‌. ಚೈತ್ರಾ, ದಂತ ವೈದ್ಯೆ


ಬೆಳಗ್ಗೆ ಎದ್ದೇಳುವುದು: 5.45 AM
ಈ ಟೈಮ್‌ಗೆ ಎಚ್ಚರವಾಗದೇ ಇದ್ದರೆ, ನನ್ನ ಮುಂದಿನ ಕೆಲಸಗಳೆಲ್ಲ ಅಸ್ತ ವ್ಯಸ್ತ ಆಗುತ್ತೆ. ಹಾಗಾಗಿ, ನನ್ನ ಉತ್ಥಾನ ಬೇಗನೆ ಆಗುತ್ತೆ. ಫ್ರೆಶ್‌ ಅಪ್‌ ಆದ ಬಳಿಕ ಮೊದಲು ಮಾಡೋ ಕೆಲಸ, ಪತ್ರಿಕೆಯ ಹೆಡ್‌ ಲೈನ್ಸ್‌ ನೋಡೋದು. ಅದು ನನಗೊಂದು ಕುತೂಹಲ. ಅಷ್ಟೊತ್ತಿಗೆ 6.10 ಆಗಿ ರುತ್ತೆ. ಬ್ರೇಕ್‌ ಫಾಸ್ಟ್‌ ರೆಡಿ ಮಾಡಿ, ಮಕ್ಕಳನ್ನು ಶಾಲೆಗೆ ಹೊರಡಿ ಸೋ ದರಲ್ಲಿ ಬ್ಯುಸಿ ಆಗ್ತಿàನಿ. 7.30  8.30ರಿಂದ ಕಡ್ಡಾಯ ವ್ಯಾಯಾಮ. ನನ್ನ ಇಡೀ ದಿನ ಎನರ್ಜಿ ಸಿಗೋದೇ ಇಲ್ಲಿ. 8.30ಕ್ಕೆ ಉಪಾಹಾರ. ನಂತರ ಎಲ್ಲ ಪತ್ರಿಕೆಗಳನ್ನು, ಪುಸ್ತಕಗಳನ್ನು ಓದಿ¤àನಿ. 10 ಗಂಟೆಯಷ್ಟೊತ್ತಿಗೆ ಕ್ಲಿನಿಕ್‌ನಲ್ಲಿರುತ್ತೇನೆ.
ಮೊಬೈಲ್‌ ಬಳಕೆ: 1 ನಿಮಿಷ

ಡಾ. ಗಿರಿಧರ ಕಜೆ, ಆಯುರ್ವೇದ ತಜ್ಞರು


ಬೆಳಗ್ಗೆ ಏಳ್ಳೋ ದು: 5 AM
ರಾತ್ರಿ ಮಲಗುವುದು ಎಷ್ಟೇ ತಡವಾಗಿದ್ದರೂ ನಾನು ದಿನಾ ಬೆಳಗ್ಗೆ ಐದು ಗಂಟೆಗೆ ಏಳುತ್ತೇನೆ. ನಂತರ, ವ್ಯಾಯಾಮ, ಯೋಗ, ಸೂರ್ಯ ನಮಸ್ಕಾರ, ಪ್ರಾಣಾಯಾಮ ಮಾಡುವುದು ಕಡ್ಡಾಯ ದಿನಚರಿ. ವಾಕಿಂಗ್‌ಗೆ ಹೋದಾಗಲೂ ರೋಗಿಗಳು ಎದುರು ಸಿಕ್ಕಿ, ಮಾತಿಗೆ ನಿಲ್ಲುತ್ತಾರೆ. ಹಾಗಾಗಿ, ವಾಕಿಂಗ್‌ ಬದಲು ಮನೆಯಲ್ಲೇ ಟ್ರೆಡ್‌ಮಿಲ್‌ನಲ್ಲಿ 30 ನಿಮಿಷ ವ್ಯಾಯಾಮ ಮಾಡುತ್ತೇನೆ. ಆಮೇಲೆ, ಎಣ್ಣೆ ಹಚ್ಚಿ ಅಭ್ಯಂಗ ಸ್ನಾನ. ಚಳಿಗಾಲದಲ್ಲಿ ಮಾತ್ರ ಬೆಚ್ಚಗಿನ ನೀರು, ಉಳಿದಂತೆ ತಣ್ಣೀರು ಸ್ನಾನ. ಅದಾದಮೇಲೆ, ಜಪ ತಪ, ಪೂಜೆ. ಸರಿಯಾಗಿ 7.45ಕ್ಕೆ ತಿಂಡಿ ತಿಂದು, ಸ್ವಲ್ಪ ಹೊತ್ತು ದಿನಪತ್ರಿಕೆ ಮೇಲೆ ಕಣ್ಣಾಡಿಸಿ, 8.15ಕ್ಕೆ ಆಸ್ಪತ್ರೆ ಕಡೆಗೆ ಹೊರಡುತ್ತೇನೆ. ಅಲ್ಲಿಯವರೆಗೂ ಮೊಬೈಲ್‌ ನೋಡುವುದು ಕಡಿಮೆ. ಕಾರ್‌ನಲ್ಲಿ ಹೋಗುವಾಗ ಕರೆಗಳಿಗೆ ಉತ್ತರಿಸುತ್ತೇನೆ.
ಮೊಬೈಲ್‌ ಬಳಕೆ: 0 ನಿಮಿ ಷ

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.