ಬೇಡಿಕೆ ಈಡೇರಿಕೆಗಾಗಿ ಕೆಆರ್‌ಎಸ್ ಒತ್ತಾಯ
ಎಲ್ಲ ಇಲಾಖೆಗೆ ಅಧಿಕಾರಿಗಳ ನೇಮಕ ಮಾಡಲು ಆಗ್ರಹ
Team Udayavani, Jun 29, 2019, 5:21 PM IST
ಸಿರವಾರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕಂದಾಯ ಅಧಿಕಾರಿ ಶ್ರೀನಾಥ ಅವರಿಗೆ ಮನವಿ ಸಲ್ಲಿಸಿದರು.
ಸಿರವಾರ: ನೂತನ ತಾಲೂಕು ಕೇಂದ್ರಕ್ಕೆ ಅಧಿಕಾರಿಗಳ ನೇಮಕ, ಅಗತ್ಯ ಇಲಾಖೆಗಳ ಕಚೇರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಕಂದಾಯ ಅಧಿಕಾರಿ ಶ್ರೀನಾಥ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ಪಟ್ಟಣದ ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಒಂದು ವರ್ಷ ಕಳೆದರೂ
ತಹಶೀಲ್ದಾರ್ ನೇಮಕ ಒಂದು ಬಿಟ್ಟು ತಹಶೀಲ್ದಾರ್ ಕಚೇರಿಗೆ ಬೇಕಾದ ಸಿಬ್ಬಂದಿ ನೇಮಕವಾಗಿಲ್ಲ. ಕಚೇರಿಯಲ್ಲಿ ಇನ್ನು ನಾಡ ಕಚೇರಿ ವ್ಯವಸ್ಥೆ ಜಾರಿಯಲ್ಲಿದೆ. ಇಲ್ಲಿ ಸರಿಯಾದ ಗಣಕಯಂತ್ರ, ಇನ್ವರ್‌ಟರ್, ಇಂಟರನೆಟ್ ಕೇಬಲ್ ಸರಿಯಾದ ವ್ಯವಸ್ಥೆಯಿಲ್ಲದೆ ಕಚೇರಿಗೆ ಬರುವವರು ತೊಂದರೆ ಅನುಭವಿಸುವಂತಾಗಿದೆ.
ತಹಶೀಲ್ದಾರರು ಕೇಂದ್ರ ಸ್ಥಾನದಲ್ಲಿದ್ದು. ಕೆಲಸ ನಿರ್ವಹಿಸಬೇಕು. ನೂತನ ತಾಲೂಕಿನ ಎಲ್ಲ ಇಲಾಖೆಯಲ್ಲಿ ಅಧಿಕಾರಿಗಳ ನೇಮಕ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ತೆಗೆಯುವುದು ಮತ್ತು ತಿದ್ದುಪಡಿ ಮಾಡುವದನ್ನು ಖಾಸಗಿ ಕಂಪ್ಯೂಟರ್ ಕೇಂದ್ರಗಳಿಗೆ ನೀಡಬೇಕು.
2017-18ನೇ ಸಾಲಿನಲ್ಲಿ ಸಿರವಾರ ಪಟ್ಟಣ ಪಂಚಾಯತಿಗೆ ಬಂದ 100 ವಸತಿ ಸಹಿತ ಮನೆಗಳನ್ನು ಬಡವರಿಗೆ ವಿತರಿಸಬೇಕು. ಪಟ್ಟಣದ ಸರ್ವೆ ನಂ. 14, ವಿಸ್ತೀರ್ಣ 11-19 ಗುಂಟೆಯನ್ನು ಕೂಡಲೇ ಸರ್ವೆ ಕಾರ್ಯ ಮಾಡಬೇಕು. ಮತ್ತು ಅಕ್ರಮದಾರರ ಮಳಿಗೆ ಮತ್ತು ಕಟ್ಟಡಗಳನ್ನು ತೆರುವುಗೊಳಿಸಬೇಕು ಎಂದು ಆಗ್ರಹಿಸಿದರು.
ಸಿರವಾರ ಪಟ್ಟಣದ ವಾರ್ಡ್ 1, ನೀಲಮ್ಮ ಕಾಲೋನಿ ಮತ್ತು ವಾರ್ಡ್ 3, ಗಿರಿಜಾಶಂಕರ ಕಾಲೋನಿಯಲ್ಲಿ ಹಾಗೂ ಇನ್ನಿತರ ವಾರ್ಡ್‌ಗಳಲ್ಲಿ ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪಟ್ಟಣ ಪಂಚಾಯತಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಶರಣಬಸವ ಮತ್ತು ಬಿಲ್ ಕಲೆಕ್ಟರ್ ವೀರೇಶ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಿಸಬೇಕು. ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರಾಜಾರೋಷವಾಗಿ ಮಟ್ಕಾ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್‌ಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನಲಾದ ಪೊಲೀಸ್ ಪೇದೆಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು. ಇನ್ನು ಹಲವು ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗಿದೆ. ಒಂದು ವೇಳೆ 15 ದಿನದೊಳಗೆ ಸಮಸ್ಯೆ ಇತ್ಯರ್ಥಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಂಘಟನೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಕೆಆರ್‌ಎಸ್ ಪದಾಧಿಕಾರಿಗಳಾದ ಹುಲಿಗೆಪ್ಪ ಮಡಿವಾಳ, ವೀರೇಶ ಗುಡದಿನ್ನಿ, ರಮೇಶ ಅಂಗಡಿ, ನಾಗರಾಜ ಬೊಮ್ಮನಾಳ, ಎಚ್.ಕೆ. ಚನ್ನಬಸವ, ಮಲ್ಲಯ್ಯ, ಆಂಜನೇಯ, ಕನಕಯ್ಯ, ರಮೇಶ, ಗಿಡ್ಡು ಮಂಜು, ಶಿವರಾಯ, ನಿಂಗಪ್ಪ, ರಂಗಪ್ಪ ದೊರೆ, ಶಿವಪ್ಪ, ಮಾರೆಪ್ಪ ಲಕ್ಕಂದಿನ್ನಿ, ಅಮರೇಶ, ಹುಲಿಗೆಪ್ಪ, ರಾಮೇಶ, ವೆಂಕಟೇಶ ಲಕ್ಕಂದಿನ್ನಿ, ಗೌರಪ್ಪ ಲಕ್ಕಂದಿನ್ನಿ, ಬಸವರಾಜ ಚಾಗಭಾವಿ, ಮುದುಕಪ್ಪ ಗಣದಿನ್ನಿ, ಕಾಶಪ್ಪ ನಾಯಕ ಭಾಗ್ಯನಗರ ಕ್ಯಾಂಪ್,ಉಲ್ಲೇಶ ಭೋವಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.